ಚಿಕ್ಕಬಳ್ಳಾಪುರ: ಅಜ್ಞಾನದಿಂದ ಸುಜ್ಞಾನದ ಕಡೆಗೆ ಹೋಗುವಂತಹದ್ದೆ ಬೆಳಕಿನ ಹಬ್ಬ ದೀಪಾವಳಿಯ ವಿಶೇಷತೆ ಆಗಿದೆ ಇದು ಜ್ಞಾನ ದೀವಿಗೆಯ ಸಂಕೇತವು ಹೌದು ಎಂದು ಬ್ರಹ್ಮಾಕುಮಾರೀಸ್ ಈಶ್ವರೀಯ ವಿಶ್ವ ವಿದ್ಯಾಲಯದ ಸಿಟಿ ಉಪ-ವಲಯ ಸಂಚಾಲಕರಾದ ರಾಜ ಯೋಗಿನಿ ಬಿ. ಕೆ. ಲೀಲಾಬೆಹನ್ ಜಿ ಹೇಳಿದರು.
ಅವರು ಜಿಲ್ಲೆಯ ಗೌರಿಬಿದನೂರಿನ ಅಭಿಲಾಶ್ ಬಡಾವಣೆಯ ಬ್ರಹ್ಮಾಕುಮಾರೀಸ್ ಈಶ್ವರೀಯ ವಿಶ್ವ ವಿದ್ಯಾಲಯದ ವಿಶ್ವ-ಪ್ರಕಾಶ ಭವನ ಸೇವಾಕೇಂದ್ರದಲ್ಲಿ ?ದೀಪೋತ್ಸವ ಬಟ್ಟಿ, ಹಾಗೂ ದೀಪಾವಳಿ ಹಬ್ಬದ ಆಧ್ಯಾತ್ಮಿಕ ರಹಸ್ಯ ಮತ್ತು ಚೈತನ್ಯ ಲಕ್ಷಿ÷್ಮ-ನಾರಾಯಣರ ದರ್ಶನ? ಕಾರ್ಯಕ್ರಮದಲ್ಲಿ ದೀಪ ಬೆಳಗಿ ಮಾತನಾಡಿ,ನಮ್ಮ ಈ ದೀಪಾವಳಿ ಆಚರಣೆ ಸುಜ್ಞಾನ ಎಂಬ ಬೆಳಕಿನೆಡೆ ಸಾಗಬೇಕಾಗಿದೆಯೇ ಹೊರತು, ನಮ್ಮನ್ನು ಅಂಧಕಾರಕ್ಕೆ ತಳ್ಳುವಂತಿರಬಾರದು ಎಂದು ತಿಳಿ ಹೇಳಿದ ಅವರು ದೀಪಾವಳಿ ಹಬ್ಬ ಬೆಳಕಿನ ಹಬ್ಬವಾಗಿರುವುದು ಒಂದು ವಿಶೇಷವೇ ಸರಿ ಇಲ್ಲಿ ಬೆಳಕು ಎಂದರೆ ದೀಪದ ಬೆಳಕು ಅಲ್ಲ, ಬದಲಿಗೆ ಅದು ಜ್ಞಾನದ ಬೆಳಕಾಗಿದೆ ಅದೇ ರೀತಿ ಅಂಧಕಾರ ಎಂದರೆ ಅದು ಅಜ್ಞಾನದ ಅಂಧಕಾರವಾಗಿದೆ ಇದರ ಭಾವಾರ್ಥ ಎಲ್ಲಿಯವರೆಗೂ ಮನೆ ಮನಗಳಲ್ಲಿ ಪ್ರತಿಯೊಬ್ಬ ನರ-ನಾರಿಯರ ಆತ್ಮರೂಪಿ ಎಂಬ ದೀಪವು ಬೆಳಗುವದಿಲ್ಲವೋ ಅಲ್ಲಿ ಅವರ ಬುದ್ಧಿಯಲ್ಲಿ ಜ್ಞಾನದ ಬೆಳಕು ಸಹ ಬರುವುದಿಲ್ಲ ಬದಲಿಗೆ ಆ ಸ್ಥಳದಲ್ಲಿ ದೇವಿ ದೇವತೆಗಳು ಸಹ ಅಂಧಕಾರದಲ್ಲಿ ವಾಸ ಮಾಡುವುದಿಲ್ಲ ವಾಗಿದೆ ಎಂದ ಅವರು ದೀಪಾವಳಿಯ ದಿನ ಎಲ್ಲರೂ ಶ್ರೀ ಲಕ್ಷಿ÷್ಮ ಮತ್ತು ಶ್ರೀ ನಾರಾಯಣರನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸುತ್ತಾರೆ ಅಂತಯೇ ಬಹಳ ವಿಜ್ರಂಬಣೆಯಿAದ ಅವರನ್ನ ಆಹ್ವಾನಿಸುತ್ತಾರೆ ಶ್ರೀ ಲಕ್ಷಿ÷್ಮ ಮತ್ತು ಶ್ರೀ ನಾರಾಯಣರು ಎಲ್ಲಿ ಪವಿತ್ರತೆ ಅಡಗಿರುತ್ತದೆಯೋ ಆ ಧರೆಯಲ್ಲಿ ಅವತರಿಸುವರು ಆಗಾಗಿ ಪ್ರತಿಯೊಬ್ಬರು ನಿರ್ಮಲವಾದ ಮನಸ್ಸಿನಿಂದ ಶ್ರದ್ಧಾ ಭಕ್ತಿಯಿಂದ ಹಣತೆಯ ದೀಪ ಹಚ್ಚಿ ಆಚರಿಸುವುದು ನೈಜ ದೀಪಾವಳಿ ಆಗಿದೆ ಇಂತಹ ದೀಪಾವಳಿ ಕಾರ್ಯಕ್ರಮದಲ್ಲಿ ಇಲ್ಲಿಯ ವಿಶ್ವ ಪ್ರಕಾಶ ಭವನದಲ್ಲಿ ಆಗಮಿಸಿರುವ ನೀವೆಲ್ಲರೂ ಪುಣ್ಯವಂತರು ಎಂದು ದೀಪಾವಳಿ ಹಬ್ಬದ ಮಹಿಮೆಯನ್ನು ಸಾರಿ ಹೇಳಿದರು.
ಗೌರಿಬಿದನೂರಿನ ಸ್ಥಾನಿಕ ಸಂಚಾಲಕರಾದ ರಾಜಯೋಗಿನಿ ಬಿ.ಕೆ.ಪದ್ಮ ಬೆಹನ್ ಮಾತಾನಾಡಿ, ದೀಪಾವಳಿ ಸಂದರ್ಭದಲ್ಲಿ ಹಳೆಯ ಲೆಕ್ಕಾಚಾರವನ್ನು ಸಮಾಪ್ತಿ ಮಾಡಿ ಹೊಸ ಲೆಕ್ಕಾಚಾರವನ್ನು ಪ್ರಾರಂಭಿಸುತ್ತಾರೆ ಹಾಗೆ ನಾವು ನಮ್ಮ ಜೀವನದಲ್ಲಿ ಅಸೂಯೆ, ದ್ವೇಷ, ಮನಸ್ತಾಪ ಎಂಬ ಹಳೆಯ ಲೆಕ್ಕಾಚಾರವನ್ನು ಸಮಾಪ್ತಿ ಮಾಡಿ ಹೊಸ ಸಂಸ್ಕಾರಗಳ ಹೊಸ ವಿಚಾರಗಳ ನೇಹಾ ಸೌಹಾರ್ದತೆಯ ಹೊಸ ಖಾತೆಯನ್ನು ತೆರೆಯಲು ನಾವು ಮುಂದಾಗ ಬೇಕಿದೆ ನಿರ್ಮಲವಾದ ಮನಸ್ಸಿನಿಂದ ಆತ್ಮಜ್ಯೋತಿಯನ್ನ ಹಚ್ಚಬೇಕು ನಿತ್ಯ ನಿರಂತರವಾಗಿ ನಮ್ಮ ಮನೆ-ಮನ ಬೆಳಗುತಿರಬೇಕು ಎಂದರು.
ಕಾರ್ಯಕ್ರಮದಲ್ಲಿ ವಿಶೇಷವಾಗಿ ದೀಪೋತ್ಸವ ಭಟ್ಟಿ, ದೀಪಾವಳಿ ಹಬ್ಬದ ಆಧ್ಯಾತ್ಮಿಕ ರಹಸ್ಯ, ಚೈತನ್ಯ ಲಕ್ಷಿ÷್ಮ ನಾರಾಯಣರ ದಿವ್ಯದರ್ಶನ ಕಾರ್ಯ ಕ್ರಮವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು. ಇದೇ ವೇಳೆ ದಿಕ್ಸೂಚಿ ನಾಟ್ಯಾಲಯ ತಂಡದವರು ನಡೆಸಿಕೊಟ್ಟ ವಿನೂತನ ವಿಭಿನ್ನ
ಭಕ್ತಿದಾಯಕ ನೃತ್ಯ ಪ್ರದರ್ಶನ ಆಗಮಿಕ ಸಹೋದರ ಸಹೋದರಿಯರ ಮನಸೂರೆಗೊಂಡಿತು.
ಕಾರ್ಯಕ್ರಮದಲ್ಲಿ ಬಿಕೆ ಸಹೋದರಿಯರಾದ ರಾಜಯೋಗಿನಿ ರತ್ನ ಅಕ್ಕ, ಬಿ.ಕೆ.ಹೇಮಾ, ಬಿ.ಕೆ.ಪ್ರಮೀಳಾ, ಸೇರಿದಂತೆ ಸಾನಿಕ ಕೇಂದ್ರದ ಇನ್ನಿತರ ಸಹೋದರ ಸಹೋದರಿಯರು ಭಾಗವಹಿಸಿದ್ದರು.