ಚಿಕ್ಕಬಳ್ಳಾಪುರ: ಕಡಿಮೆ ವೆಚ್ಚದಲ್ಲಿ ಹೆಚ್ಚು ಆದಾಯ ತರುವ ಅಣಬೆ ಕೃಷಿ ರೈತರ ಆರ್ಥಿಕಾಭಿವೃದ್ಧಿಗೆ ಅಣಬೆ ಬೇಸಾಯ ಸಹಕಾರಿಯಾಗಿದೆ ಎಂದು ರೇಷ್ಮೆ ಕೃಷಿ ಮಹಾವಿದ್ಯಾಲಯದ ಸೂಕ್ಷ್ಮ ಜೀವಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ|| ಗೌಡ ಪಿ.ಎ ಹೇಳಿದರು.
ಅವರು ಚಿಕ್ಕಬಳ್ಳಾಪುರ ಜಿಲ್ಲೆಯ ಶೆಟ್ಟಿಹಳ್ಳಿ ಗ್ರಾಮದಲ್ಲಿ ರೇಷ್ಮೆ ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಅಣಬೆ ಬೇಸಾಯ ಮತ್ತು ಅಜೋಲ್ಲಾ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿ, ಭತ್ತದ ಗದ್ದೆಯಲ್ಲಿ ಅಜೋಲ್ಲಾ ಕೃಷಿ ಮಾಡಿದರೆ ಮಣ್ಣಿನ ಫಲವತ್ತತೆ ಹೆಚ್ಚುವುದರ ಜೊತೆಗೆ ಇಳುವರಿಯೂ ಹೆಚ್ಚುತ್ತದೆ. ಈ ಸಂದರ್ಭಗಳಲ್ಲಿ ಬೆಳೆಯುವ ಬೆಳೆಗಳಲ್ಲಿ ಭತ್ತಕ್ಕೆ ವಿಶೇಷ ಪ್ರಾಮುಖ್ಯತೆ ಇದೆ.
ಸಾಮಾನ್ಯವಾಗಿ ಭತ್ತದ ಕೃಷಿಗೆ ಮಣ್ಣಿನ ಫಲವತ್ತತೆ ಹೆಚ್ಚಲು ಮಾಡುವ ಕ್ರಮಗಳ ಬಗ್ಗೆ ರೈತರಿಗೆ ಇದೆ ವೇಳೆ ಜಾಗೃತಿ ಮೂಡಿಸಿ ಅಣಬೆ ತಿನ್ನುವುದರಿಂದ ಆಗುವ ಉಪಯೋಗಗಳು ಮತ್ತು ತಿನ್ನುವ ಹಾಗೂ ತಿನ್ನಬಾರದ ಅಣಬೆಯನ್ನು ಗುರುತಿಸುವುದು ಹೇಗೆ ಎಂದು ರೈತ ಬಾಂಧವರಿಗೆ ತಿಳಿಸಿರೈತರು ಕೃಷಿಯೊಂದಿಗೆ ಲಾಭದಾಯಕ ಉಪ ಕಸುಬಾಗಿರುವ ಅಣಬೆ ಕೃಷಿಗೆ ಸರ್ಕಾರ ಪ್ರೋತ್ಸಾಹ ನೀಡುವುದರೊಂದಿಗೆ ಮಾರುಕಟ್ಟೆ ಸೌಲಭ್ಯ ಕಲ್ಪಿಸಿದರೆ ಹೆಚ್ಚಿನ ಅನುಕೂಲವಾಗುತ್ತದೆ ಎಂದರು.
ಪ್ರತಿ ತಿಂಗಳು 1ಲಕ್ಷ ರೂ. ಆದಾಯ ತರುವ ಅಣಬೆ ಬೇಸಾಯ ಮಾಡುವ ಮೂಲಕ ರೈತರು ಆರ್ಥಿಕವಾಗಿ ಸದೃಢರಾಗ ಬೇಕೆಂದರುಈ ಕಾರ್ಯಕ್ರಮದಲ್ಲಿ ಗ್ರಾಮದ ರೈತ ಪ್ರಮುಖರಾದ ನಾಗೇಶ್, ಭಾನುಪ್ರತಾಪ. ಜಿ,ಅಂಬರೀಶ, ದೇವರಾಜ್ , ಮುರುಳಿ, ಅಶೋಕ ಹಾಗೂ ರೇಷ್ಮೆ ಕೃಷಿ ಮಹಾವಿದ್ಯಾಲಯ ವಿದ್ಯಾರ್ಥಿಗಳಾದ ಪ್ರಮೋದ್, ವಿಜಯಲಕ್ಷ್ಮಿ, ಪೂಜ ಬಿ, ಸುಹಾಸ, ಪೂಜ ಎಂ, ಪ್ರಿಯದರ್ಶಿನಿ, ಸುರೇಂದ್ರ, ಸಾದಿಯಾ ಕೌಸರ್, ವಿಭಾ, ಲಿಖಿತ್ ಕುಮಾರ್, ಸೌಮ್ಯ, ಮೊಹಮ್ಮದ್ ಫಾಸಿಬಾಬಾ, ಸೃಷ್ಠಿ, ರಾಕೇಶ, ಸಂದೀಪ, ರಾಜೇಶ್ವರಿ ಸೇರಿದಂತೆ ಇತರರು ಇದ್ದರು.