ಬೆಂಗಳೂರು: ಮಡದಿಯೂ ಅನೈತಿಕ ಸಂಬಂಧ ಹೊಂದಿದ್ದಿದು ಕಂಡು ಬಂದ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಗಲಾಟೆ ಸಂಭವಿಸಿ ಪತಿಯು ಮಡದಿಗೆ ಚಾಕುವಿನಿಂದ ಇರಿದು 8:45 ಸುಮಾರಿಗೆ ಹತ್ಯೆ ಮಾಡಿರುವ ಘಟನೆ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ವಿನಾಯಕ ನಗರದಲ್ಲಿ ಜರುಗಿದೆ.
ಮೋಹನ್ ರಾಜ್(30) ಎಂಬಆರೋಪಿ ಸ್ಟ್ಯಾನ್ ಲಿ ಎಂಬ ಲೆದರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದು, ಏಳು ತಿಂಗಳಿಂದ ಕೆಲಸಕ್ಕೂ ಹೋಗದೆ ಮನೆಗೆ ಕುಡಿದು ಬಂದು ಪ್ರತಿ ದಿನ ಗಲಾಟೆ ಮಾಡುತ್ತಿದ್ದನು. ನಿನ್ನೆ ರಾತ್ರಿ ಸಹ ಕುಡಿದು ಬಂದು ಗಲಾಟೆ ಮಾಡಿ ಹೋಗಿದ್ದನು.
ಇಂದು ಬೆಳಿಗ್ಗೆ ಆತನ ಮಡದಿ ಶ್ರೀಗಂಗಾ(27) ಆರು ವರ್ಷದ ಗಂಡು ಮಗು ಪೃಥ್ವಿಕ್ನನ್ನು ಶಾಲೆಗೆ ಬಿಡಲು ಹೋಗುವ ಸಮಯದಲ್ಲಿ ಹೊಂಚು ಹಾಕಿ ಚಾಕುವಿನಿಂದ ಹೊಟ್ಟೆಗೆ ಚುಚ್ಚಿ ಕೊಲೆ ಮಾಡಿರುತ್ತಾನೆ.ಮೃತ ಶ್ರೀಗಂಗಾ ಡಿ ಮಾರ್ಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು, ಇವಳ ಮೇಲೆ ಅನುಮಾನವಿತ್ತು ಎಂದು ತನಿಖೆಯಲ್ಲಿ ತಕ್ಷಣಕ್ಕೆ ತಿಳಿದು ಬಂದಿರುತ್ತದೆ ಎಂದು ಆನೇಕಲ್ ಡಿವೈಎಸ್ಪಿ ತಿಳಿಸಿರುತ್ತಾರೆ.