ಲಕ್ನೋ: ಸ್ಕಾರ್ಪಿಯೊ ಎಸ್ಯುವಿ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಐವರು ವೈದ್ಯರು ಸಾವನ್ನಪ್ಪಿರುವ ಘಟನೆ ಆಗ್ರಾ-ಲಕ್ನೋ ಎಕ್ಸ್ಪ್ರೆಸ್ ವೇನಲ್ಲಿ ನಡೆದಿದೆ.ಮೃತಪಟ್ಟವರು ಉತ್ತರ ಪ್ರದೇಶದ ವೈದ್ಯಕೀಯ ವಿಜ್ಞಾನ ವಿವಿಯಲ್ಲಿ ಸ್ನಾತಕೋತರ ತರಬೇತಿ ಪಡೆದ ವೈದ್ಯರು. ದುವೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಹಿಂತಿರುತ್ತಿದ್ದ ವೇಳೆ ಕಾರು ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.
ಮೃತರನ್ನು ಆಗ್ರಾ ಮೂಲದ ಡಾ. ಅನಿರುದ್ಧ್ ವರ್ಮಾ (29), ಭದೋಹಿಯ ಡಾ. ಸಂತೋಷ್ ಕುಮಾರ್ ಮೌರ್ಯ (46), ಕನೌಜ್ನ ಡಾ. ಅರುಣ್ ಕುಮಾರ್ (34) ಮತ್ತು ಬರೇಲಿಯ ಡಾ. ನಾರ್ದೇವ್ (35) ನಾಲ್ವರು ವೈದ್ಯರಾಗಿದ್ದು ಹಾಗೂ ಇನ್ನೋರ್ವನ್ನು ಲ್ಯಾಬ್ ಟೆಕ್ನಿಷಿಯನ್ ಡಾ. ಜೈವೀರ್ ಸಿಂಗ್ (38) ಎಂದು ಗುರುತಿಸಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಅತಿವೇಗವಾಗಿ ಕಾರು ಚಾಲನೆ ಮಾಡುತ್ತಿದ್ದರಿಂದ ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಪಕ್ಕದಲ್ಲಿದ್ದ ಟ್ರಕ್ಗೂ ಡಿಕ್ಕಿ ಹೊಡೆದಿದೆ ಎಂದು ತಿಳಿಸಿದ್ದಾರೆ.ಮೃತಪಟ್ಟವರನ್ನು ಹೊರತುಪಡಿಸಿ ಇನ್ನೋರ್ವ ಗಂಭೀರ ಗಾಯಗೊಂಡಿದ್ದು, ಚಿಕಿತ್ಞೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.