ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ನ ಡೊನಾಲ್ಡ್ ಟ್ರಂಪ್ ಐತಿಹಾಸಿಕ ಗೆಲುವು ದಾಖಲಿಸುವ ಸನಿಹದಲ್ಲಿದ್ದಾರೆ. ಚುನಾವಣೆಯಲ್ಲಿ ಹಿನ್ನಡೆಯಾಗುತ್ತಿದ್ದಂತೆ ಡೆಮಾಕ್ರಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್ ತಮ್ಮ ಚುನಾವಣಾ ರಾತ್ರಿ ಭಾಷಣವನ್ನು ರದ್ದುಗೊಳಿಸಿದ್ದಾರೆ.
ಟ್ರಂಪ್ ಅವರು ಎಲ್ಲಾ ಏಳು ಸ್ವಿಂಗ್ ರಾಜ್ಯಗಳಲ್ಲಿ ತಮ್ಮ ಎದುರಾಳಿ ಕಮಲಾ ಹ್ಯಾರಿಸ್ ಅವರಿಗಿಂತ ಮುಂದಿದ್ದಾರೆ. ಉತ್ತರ ಕೆರೊಲಿನಾ ಮತ್ತು ಜಾರ್ಜಿಯಾವನ್ನು ಟ್ರಂಪ್ ಗೆದ್ದಿದ್ದಾರೆ. ಅರಿಜೋನಾ, ಮಿಚಿಗನ್, ಪೆನ್ಸಿಲ್ವೇನಿಯಾ, ವಿಸ್ಕಾನ್ಸಿನ್ ಮತ್ತು ನೆವಾಡಾದಲ್ಲಿಯೂ ಮುಂದಿದ್ದಾರೆ.
ಡೊನಾಲ್ಡ್ ಟ್ರಂಪ್ ೬೩,೮೭೩,೭೧೨ (೫೧.೧%) ಮತಗಳೊಂದಿಗೆ ೨೩೦ ಸ್ಥಾನಗಳಲ್ಲಿ ಮುಂದಿದ್ದಾರೆ. ಕಮಲಾ ಹ್ಯಾರಿಸ್ ೫೯,೨೯೨,೫೮೫ (೪೭.೫%) ಮತಗಳೊಂದಿಗೆ ೨೧೦ ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.