ದೇವನಹಳ್ಳಿ : ಆವತಿ ಗ್ರಾ.ಪಂ. ಅಧ್ಯಕ್ಷರ ಮನೆಗೆ ರಾಜ್ಯ ಸರ್ಕಾರದ ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಕೆ.ಹೆಚ್. ಮುನಿಯಪ್ಪ ಆವತಿ ಗ್ರಾ.ಪಂ. ಅಧ್ಯಕ್ಷರಾದ ಮುನಿರತ್ನಮ್ಮ ಮುನಿರಾಜು ಮನೆಗೆ ಸೌಹಾರ್ದಯುತ ಭೇಟಿ ನೀಡಿದರು.
ಈ ಸಮಯದಲ್ಲಿ ಆವತಿ ಗ್ರಾ.ಪಂ. ಸದಸ್ಯ ನರಸಪ್ಪ ಮಾತನಾಡಿ ನಮ್ಮ ಗ್ರಾಮದ ಪಕ್ಕದಲ್ಲೆ ಚೆಕ್ಡ್ಯಾಮ್ ನಿರ್ಮಾವಾಗುತ್ತಿದ್ದು ಮಾನ್ಯ ಸಚಿವರು ಆವತಿ ಗ್ರಾ.ಪಂ. ಅಧ್ಯಕ್ಷರಾದ ಮುನಿರತ್ನಮ್ಮ ಮನೆಗೆ ಬೇಟಿ ನೀಡಿ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳ ಸಮಸ್ಯೆಗಳನ್ನು ಕೇಳಿ ತಿಳಿದು, ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆಗಳಿದ್ದಲ್ಲಿ ಬಗೆಹರಿಸುವುದಾಗಿ ತಿಳಿಸಿದರು ಎಂದರು.ಈ ಸಮಯದಲ್ಲಿ ಅತ್ತಿಬೆಲೆ ಗ್ರಾಮದ ಉಮೇಶ್, ಆಂಜಿನಪ್ಪ, ನಾಗರಾಜು, ರವಿಕುಮಾರ್, ಶ್ರೀನಿವಾಸ್ ಹಾಜರಿದ್ದರು.