ಬಾರ್ಬಡೋಸ್: ಟಿಟ್ವೆಂಟಿ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂದು ದಕ್ಷಿಣ ಆಫ್ರಿಕಾ ಮತ್ತು ಭಾರತ ತಂಡಗಳು ಫೈನಲ್ನಲ್ಲಿ ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿದೆ.
11 ವರ್ಷಗಳ ಹಿಂದೆ ಫೈನಲ್ನಲ್ಲಿ ಮುಗ್ಗರಿಸಿದ್ದ ಭಾರತ ತಂಡ ಇದೀಗ ಫೈನಲ್ ತಲುಪಿದ್ದು, ಟ್ರೋಫಿ ಮುಡಿಗೇರಿಸಿಕೊಳ್ಳುವ ನೀರಿಕ್ಷೆಯಲ್ಲಿದೆ. ಭಾರತದ ಕೋಟ್ಯಂತರ ಅಭಿಮಾನಿಗಳು `ಗೆದ್ದು ಬಾ ಟೀಂ ಇಂಡಿಯಾ’ ಎಂದು ಆಶಿಸುತ್ತಿದ್ದಾರೆ.10 ವರ್ಷಗಳ ಹಿಂದೆ ಫೈನಲ್ನಲ್ಲಿ ಮುಗ್ಗರಿಸಿದ್ದ ಟೀಂ ಇಂಡಿಯಾ, ಈ ಬಾರಿ ಎಚ್ಚರಿಕೆ ಆಟವಾಡಲು ಕಠಿಣ ತಾಲೀಮು ನಡೆಸಿದೆ. ಹರಿಣರನ್ನು ಅಷ್ಟು ಹಗುರವಾಗಿ ತೆಗೆದುಕೊಳ್ಳುವಂತಿಲ್ಲ. ಯಾಕೆಂದರೆ, ಹೊಡಿಬಡಿ ಆಟಗಾರರ ದಂಡೇ ಇದೆ. ಸ್ವಲ್ಪ ಯಾಮಾರಿದರೂ ಭಾರತಕ್ಕೆ ಮತ್ತೆ ವನವಾಸ ತಪ್ಪಿದ್ದಲ್ಲ ಎನ್ನವಂತಿದೆ.
ಇಂದು ರಾತ್ರಿ 8 ಗಂಟೆಗೆ ಬ್ರಿಡ್ಜ್ಟೌನ್ನ ಕೆನ್ಸಿಲ್ಟೌನ್ ಓವೆಲ್ನಲ್ಲಿ ನಡೆಯಲಿರುವ ಫೈನಲ್ ಹಣಾಹಣಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾದ ಸೆಣಸಾಡಲಿದೆ.ತಂಡದ ನಾಯಕ ಹಿಟ್ಮ್ಯಾನ್ ರೋಹಿತ್ ಶರ್ಮಾ ಉತ್ತಮ ಫಾರ್ಮ್ನಲ್ಲಿದ್ದಾರೆ. ರನ್ ಬರವನ್ನ ನೀಗಿಸುತ್ತಿದ್ದಾರೆ. ಎದುರಾಳಿಗಳನ್ನ ಚಂಡಾಡುತ್ತಿರುವ ರೋಹಿತ್, ಇಂದಿನ ಪಂದ್ಯದಲ್ಲೂ ಅಬ್ಬರಿಸುವ ತವಕದಲ್ಲಿದ್ದಾರೆ. ಇತ್ತ, ಸ್ಫೋಟಕ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಪಾಂಡ್ಯ, ಶಿವಂ ದುಬೆ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ನೆರವಾಗುತ್ತಿದ್ದಾರೆ. ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್ ಬೌಲಿಂಗ್ ಜಾದು ಹರಿಣರಿಗೆ ಸವಾಲಾಗಿ ಕಂಡಿದ್ದಾರೆ. ಅರ್ಷದೀಪ್ಸಿಂಗ್, ಬೂಮ್ರಾ ಎದುರಾಳಿಗಳ ನಿದ್ದೆಗೆಡಿಸಿದ್ದಾರೆ.