ಬೆಂಗಳೂರು: ಇಬ್ಬರು ಮಕ್ಕಳ ಜೀವ ಉಳಿಸಿ ಅಪ್ರತಿಮ ಸಾಹಸ ಪ್ರದರ್ಶಿಸಿದ್ದ ಕುಗ್ರಾಮವೊಂದರ 7 ಮಂದಿ ಬಾಲಕರನ್ನು ‘ಶೌರ್ಯ ಪ್ರಶಸ್ತಿ’ ನೀಡಿ ಗೌರವಿಸಲಾಗಿದೆ.
ಆಗಸ್ಟ್ನಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಇಬ್ಬರು ಮಕ್ಕಳ ಜೊತೆ ತಾಯಿ ರೈಲ್ವೆ ಗೇಟ್ ಬಳಿ ಆತ್ಮಹತ್ಯೆಗೆ ಯತ್ನಿಸಿದ್ದವರನ್ನು ಬಾಲಕಿಯೊಬ್ಬಳು ಸಮಯಪ್ರಜ್ಞೆಯಿಂದ ಕಾಪಾಡಿದ್ದಳು. ಈಕೆಯ ಹೆಸರು ಸ್ಪೂರ್ತಿ ವಿಶ್ವನಾಥ್ ಈಕೆ ಬೆಳಗಾವಿಯ ಬಾಲಿಕ ವಿದ್ಯಾಲಯದಲ್ಲಿ 9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.
ಒಮ್ಮೆ ತಂದೆಯ ಜೊತೆ ಕಾರಿನಲ್ಲಿ ಹೋಗಬೇಕಾದರೆ ಒರ್ವ ಮಹಿಳೆ ಇಬ್ಬರು ಮಕ್ಕಳ ಜೊತೆ ರೈಲ್ವೇ ಟ್ರ್ಯಾಕ್ ಬಳಿ ಹೋಗುತ್ತಿರುವುದನ್ನು ಸ್ಪೂರ್ತಿ ನೋಡಿದ್ದು, ಅನುಮಾನಗೊಂಡ ಬಾಲಕಿ ತಕ್ಷಣ ಕಾರಿನಿಂದ ಇಳಿದು ಸ್ಥಳಕ್ಕೆ ಧಾವಿಸುತ್ತಾಳೆ. ಅದು ಕೂಡ ಎರಡು ಟ್ರೈನ್ಗಳು ಬರುಲ ಸಮಯ ಆಗಿವುದರಿಂದ ಇವರು ಆತ್ಮಹತ್ಯೆಗೆ ಯತ್ನವಿರಬಹದು ಎಂದು ಅಂದಾಜಿಸಿ ತಕ್ಷಣ ಅಲ್ಲೇ ಇದ್ದ ಜನರನ್ನು ಕೂಗಿ ಕರೆದು ಆ ಬಡ ಜೀವಗಳನ್ನು ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾಳೆ.
ಮಕ್ಕಳ ದಿನಾಚರಣೆ ಪ್ರಯುಕ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇವರನ್ನು ಗುರುತಿಸಿ ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಜೊತೆಗೆ ಇತರ ಆರು ಮಕ್ಕಳೊಂದಿಗೆ ಶೌರ್ಯ ಮತ್ತು ಇತರರ ಪ್ರಾಣವನ್ನು ಅಪಾಯದಿಂದ ರಕ್ಷಿಸಿದ ಕಾರಣಕ್ಕೆ ಪ್ರಶಸ್ತಿ ನೀಡಲಾಯಿತು. ಶುಕ್ರವಾರ ಜವಾಹರ ಬಾಲಭವನ ಸಭಾಂಗಣದಲ್ಲಿ ಪ್ರಶಸ್ತಿ ವಿತರಣಾ ಸಮಾರಂಭ ನಡೆದಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಅವರು ಏಳು ಮಕ್ಕಳಿಗೆ ಶೌರ್ಯ ಪ್ರಶಸ್ತಿ ಪ್ರದಾನ ಮಾಡಿದರು.
ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಕನಸು ಹೊತ್ತಿರುವ ಸ್ಪೂರ್ತಿ ವಿಶ್ವನಾಥ್ ಸವ್ವಾಶೇರಿ ಅವರು ಟಿಎನ್ಐಇ ಜೊತೆ ಮಾತನಾಡಿದ್ದು, ‘ಈ ಸಣ್ಣ ಕೃತ್ಯದ ಮೂಲಕ ನಾನು ಮೂರು ಜೀವಗಳನ್ನು ಉಳಿಸಲು ಸಾಧ್ಯವಾಯಿತು. ನಾನು ನಿಜವಾಗಿಯೂ ಸಂತೋಷ ಮತ್ತು ನನ್ನ ಬಗ್ಗೆ ತೃಪ್ತಿ ಹೊಂದಿದ್ದೇನೆ. ನನ್ನ ಪೋಷಕರು ನಿರಾಶ್ರಿತರು ಮತ್ತು ನಿರ್ಗತಿಕರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಾರೆ. ಅವರು ನನ್ನ ಸ್ಫೂರ್ತಿ ಮತ್ತು ಅಗತ್ಯವಿರುವವರಿಗೆ ಸಹಾಯ ಹಸ್ತ ಚಾಚಲು ನನ್ನನ್ನು ಯಾವಾಗಲೂ ಪ್ರೋತ್ಸಾಹಿಸಿದ್ದಾರೆ ಎಂದು ಹೇಳಿದರು.
ಸ್ಪೂರ್ತಿಯ ತಂದೆ ವಿಶ್ವನಾಥ ಸವ್ವಾಶೇರಿ ತಮ್ಮ ಮಗಳ ಈ ಸಾಹಸದ ಬಗ್ಗೆ ಹೆಮ್ಮೆ ಹಾಗೂ ಸಂತಸ ವ್ಯಕ್ತಪಡಿಸಿದ್ದು, ಸ್ಪೂರ್ತಿ ತಾನು ಉಳಿಸಿದ ಇಬ್ಬರು ಬಾಲಕರಿಗೆ ರಾಖಿ ಕಟ್ಟಿದ್ದಾಳೆ ಎಂದು ಆಕೆಯ ತಂದೆ ಹೇಳಿದ್ದಾರೆ. ಆಕೆಯ ಧೈರ್ಯಕ್ಕಾಗಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪೂರ್ತಿಗೆ 5,000 ರೂ. ಪ್ರೋತ್ಸಾಹ ಧನ ನೀಡಿದರು. ಅಲ್ಲದೆ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯ ಕುಟುಂಬದ ಸಾಲ ತೀರಿಸಲು ಹೆಚ್ಚುವರಿಯಾಗಿ 10,000 ರೂ ನಗದು ಬಹುಮಾನವನ್ನು ನೀಡಲು ನಿರ್ಧರಿಸಿದ್ದಾರೆ. ಆರ್ಥಿಕ ಸಮಸ್ಯೆಯೇ ಮಹಿಳೆ ತನ್ನ ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ಆರೋಪಿಸಲಾಗಿದೆ.
ಬಾವಿಯಲ್ಲಿ ಬಿದ್ದಿದ್ದ ಕಾರ್ಮಿಕ ರಕ್ಷಿಸಿದ ಬಾಲಕರಿಗೆ ಪ್ರಶಸ್ತಿ
ಸಾಗರ ತಾಲ್ಲೂಕಿನ ಭಾರಂಗಿ ಹೋಬಳಿಯ ಆರೋಡಿ ಕುಗ್ರಾಮದ ಪುಟ್ಟ ಪೋರರಿಗೆ 2024ನೇ ಸಾಲಿನ ಮಕ್ಕಳ ಶೌರ್ಯ ಪ್ರಶಸ್ತಿ ಲಭಿಸಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬೆಂಗಳೂರಿನಲ್ಲಿ ಶುಕ್ರವಾರ ಪ್ರಶಸ್ತಿ ಪ್ರಧಾನ ಮಾಡಿದರು. ಅರಳಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶರಾವತಿ ಸಿಂಗಳೀಕ ಅಭಯಾರಣ್ಯದ ಆರೋಡಿ ನಿವಾಸಿಗಳಾದ ಅಶ್ವಿನ್ ನಾಗರಾಜ್ ಮತ್ತು ನಿಶಾಂತ್ ಲಿಂಗರಾಜು ಪ್ರಶಸ್ತಿ ಪಡೆದವರು. ಮಕ್ಕಳ ದಿನಾಚರಣೆಯ ಅಂಗವಾಗಿ ಅಸಾಧಾರಣ ಸಾಧನೆ ಮಾಡಿದ ಮಕ್ಕಳನ್ನು ಗುರುತಿಸಿ ಕೊಡುವ ಶೌರ್ಯ ಪ್ರಶಸ್ತಿ ಇದಾಗಿದ್ದು, ಬಾವಿಗೆ ಬಿದ್ದ ಇಬ್ಬರನ್ನು ಈ ಇಬ್ಬರು ಸಮಯ ಪ್ರಜ್ಞೆಯಿಂದ ರಕ್ಷಿಸಿದ ಕಾರಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಘಟನೆ
ಅರಳಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಗ್ರಾಮ ಆರೋಡಿಯ ಮನೆಯೊಂದರಲ್ಲಿ ತೆರೆದ ಬಾವಿ ಅಗೆಯುವ ಕೆಲಸವನ್ನು ಇಬ್ಬರು ಕಾರ್ಮಿಕರು ಮಾಡುತ್ತಿದ್ದರು. ಅಲ್ಲಿಯೇ ಸಂಜೆಯ ಸಮಯದಲ್ಲಿ ಆಟ ಆಡುತ್ತಿದ್ದ ಅಶ್ವಿನ್ ನಾಗರಾಜ್ ಮತ್ತು ನಿಶಾಂತ್ ಲಿಂಗರಾಜು ಅವರಿಗೆ ಬಾವಿಯೊಳಗೆ ಏನೋ ಬಿದ್ದ ಶಬ್ದ ಕೇಳಿ ಓಡಿ ಬಂದು ನೋಡಿದರು. ಆಗ ಅಂದಾಜು 60 ಅಡಿ ಆಳದಲ್ಲಿ ಇಬ್ಬರು ಕಾರ್ಮಿಕರು ಹಗ್ಗ ತುಂಡಾಗಿ ಬಿದ್ದು, ಒದ್ದಾಡುತ್ತಿದ್ದರು. ಕೂಡಲೇ ಯಾವುದೇ ಅಂಜಿಕೆ ಇಲ್ಲದೇ ಗುಡ್ಡಗಾಡು ಪ್ರದೇಶದ ಅಲ್ಲೊಂದು ಇಲ್ಲೊಂದು ಇರುವ ಮನೆಯವರನ್ನು ಕೂಗಿ ಕರೆದು ಕಾರ್ಮಿಕರನ್ನು ಜೀವ ಸಹಿತ ಮೇಲೆತ್ತುವಲ್ಲಿ ಯಶಸ್ವಿಯಾಗಿದ್ದರು. ಮಕ್ಕಳ ಸಮಯ ಪ್ರಜ್ಞೆ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಘಟನೆ ತಾಲ್ಲೂಕು ಆಡಳಿತ ಮತ್ತು ಜಿಲ್ಲಾಡಳಿತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಗಮನ ಸೆಳೆದಿತ್ತು.
ಏತನ್ಮಧ್ಯೆ, ಬೆಂಗಳೂರಿನ ಅರುಣಿ ಅವರು ಕ್ರೀಡೆ, ಕಲೆ ಮತ್ತು ಶಿಕ್ಷಣದಲ್ಲಿನ ಶ್ರೇಷ್ಠತೆಗಾಗಿ ವಿಶೇಷ ಸಾಧನೆ ಪ್ರಶಸ್ತಿಯೊಂದಿಗೆ ಗುರುತಿಸಲ್ಪಟ್ಟರು. ಅವರು ಮೂರು ವರ್ಷ ವಯಸ್ಸಿನಲ್ಲಿ ರಂಗಭೂಮಿಯಲ್ಲಿ ಪ್ರದರ್ಶನ ನೀಡಲು ಪ್ರಾರಂಭಿಸಿದರು ಮತ್ತು 100 ಕ್ಕೂ ಹೆಚ್ಚು ಬಾರಿ ಪ್ರದರ್ಶನ ನೀಡಿದ್ದಾರೆ. ಹೆಚ್ಚುವರಿಯಾಗಿ, ರಾಜ್ಯದ ಮಕ್ಕಳ ಜೀವನವನ್ನು ಸುಧಾರಿಸಲು ನೀಡಿದ ಕೊಡುಗೆಗಳಿಗಾಗಿ ನಾಲ್ಕು ಸಾಮಾಜಿಕ ಸಂಸ್ಥೆಗಳು ಮತ್ತು ನಾಲ್ಕು ವ್ಯಕ್ತಿಗಳಿಗೆ ರಾಜ್ಯ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಐದನೇ ತರಗತಿ ವಿದ್ಯಾರ್ಥಿ ಮಹಮ್ಮದ್ ಸಮೀರ್, ದಕ್ಷಿಣ ಕನ್ನಡದ ಏಳನೇ ತರಗತಿ ವಿದ್ಯಾರ್ಥಿನಿ ವೈಭವಿ, ಉಡುಪಿಯ ಬಿ ಧೀರಜ್ ಐತಾಳ್ ಅವರನ್ನು ಸನ್ಮಾನಿಸಲಾಯಿತು.