ಉತ್ತರ ಪ್ರದೇಶದಲ್ಲಿ ಮೂರು ಪ್ರತ್ಯೇಕ ಅಪಘಾತಗಳಲ್ಲಿ 18ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ. ಶುಕ್ರವಾರ (ಡಿಸೆಂಬರ್ 6) ಮಧ್ಯಾಹ್ನ ಕನೌಜ್ ಬಳಿ ಆಗ್ರಾ-ಲಕ್ನೋ ಎಕ್ಸ್ಪ್ರೆಸ್ನಲ್ಲಿ ಹೈಸ್ಪೀಡ್ ಬಸ್ ನೀರಿನ ಟ್ಯಾಂಕರ್ಗೆ ಡಿಕ್ಕಿ ಹೊಡೆದಿದ್ದು ಪರಿಣಾಮ 8 ಮಂದಿ ಸಾವನ್ನಪ್ಪಿದ್ದಾರೆ. ಚಿತ್ರಕೂಟ ಮತ್ತು ಪಿಲಿಭಿತಿಯಲ್ಲಿ ಕಾರು ಅಪಘಾತಗಳು ಸಂಭವಿಸಿದ್ದು, 12 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಆಗ್ರಾ ಲಖನೌ ಎಕ್ಸ್ಪ್ರೆಸ್ವೇಯಲ್ಲಿ ಕನ್ನೌಜ್ ಜಿಲ್ಲೆಯ ಸೌರಿಖ್ನ ಸಕ್ರವಾ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ. ಪ್ರಯಾಣಿಕರಿಂದ ತುಂಬಿದ್ದ ಡಬಲ್ ಡೆಕ್ಕರ್ ಬಸ್ ಹಠಾತ್ ನಿಯಂತ್ರಣ ತಪ್ಪಿ ಮುಂದೆ ಬರುತ್ತಿದ್ದ ನೀರಿನ ಟ್ಯಾಂಕರ್ ಗೆ ಡಿಕ್ಕಿ ಹೊಡೆದಿದೆ. ಭೀಕರ ಅಪಘಾತದಲ್ಲಿ ಬಸ್ನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.
ಡಿವೈಡರ್ ಮಧ್ಯೆ ನೆಟ್ಟಿರುವ ಗಿಡಗಳಿಗೆ ಟ್ಯಾಂಕರ್ ಮೂಲಕ ನೀರಾಯಿಸುತ್ತಿದ್ದರು ಎಂದು ಗಾಯಗೊಂಡ ಪ್ರಯಾಣಿಕರು ತಿಳಿಸಿದರು. ಚಾಲಕನಿಗೆ ಇದು ತಿಳಿಯದೆ ಹಿಂದಿನಿಂದ ಟ್ಯಾಂಕರ್ಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದ ಬಳಿಕ ಅಲ್ಲಿ ನೆರೆದಿದ್ದ ಜನರು ಬಸ್ಸಿನ ಗಾಜು ಒಡೆದು ಪ್ರಯಾಣಿಕರನ್ನು ಹೊರತೆಗೆದು ಗಾಯಾಳುಗಳನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಿದರು.
11 ಗಂಟೆಗೆ ಲಕ್ನೋದಿಂದ ಬಸ್ ಹೊರಟಿತ್ತು ಎಂದು ಗಾಯಗೊಂಡ ಪ್ರಯಾಣಿಕರು ತಿಳಿಸಿದ್ದಾರೆ. ಎಕ್ಸ್ ಪ್ರೆಸ್ ವೇನಲ್ಲಿ ಗಂಟೆಗೆ 120-140 ಕಿ.ಮೀ ವೇಗದಲ್ಲಿ ವಾಹನಗಳನ್ನು ಓಡಿಸಲಾಗುತ್ತದೆ. ಟ್ಯಾಂಕರ್ಗೆ ಡಿಕ್ಕಿ ಹೊಡೆದ ನಂತರ ಇನ್ನೊಂದು ಬದಿಗೆ ಪಲ್ಟಿಯಾಗಿದೆ. ಅಪಘಾತದಲ್ಲಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಸುಮಾರು 38 ಮಂದಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಉತ್ತರ ಪ್ರದೇಶದ ಚಿತ್ರಕೂಟ ಮತ್ತು ಪಿಲಿಭಿತ್ನಲ್ಲಿ ಎರಡು ಗಂಭೀರ ಅಪಘಾತಗಳು ಸಂಭವಿಸಿವೆ. ಎರಡರಲ್ಲೂ ತಲಾ ಆರು ಮಂದಿ ಸಾವನ್ನಪ್ಪಿದ್ದು 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಚಿತ್ರಕೂಟದಲ್ಲಿ, ಚಿತಾಭಸ್ಮವನ್ನು ಬಿಟ್ಟು ಪ್ರಯಾಗರಾಜ್ನಿಂದ ಹಿಂತಿರುಗುತ್ತಿದ್ದ ಛತ್ತರ್ಪುರ ಕುಟುಂಬದ 6 ಜನರು ಸಾವನ್ನಪ್ಪಿದ್ದಾರೆ. ಮತ್ತೊಂದೆಡೆ ಉತ್ತರಾಖಂಡದ ಕುಟುಂಬವೊಂದು ಮಗಳ ನಾಲ್ಕನೇ ಹುಟ್ಟುಹಬ್ಬವನ್ನು ಆಚರಿಸಿ ಪಿಲಿಭಿತ್ತಿಯಿಂದ ಹಿಂದಿರುಗುತ್ತಿದ್ದ ಕಾರು ಹಳ್ಳಕ್ಕೆ ಬಿದ್ದಿತ್ತು. ಈ ಅಪಘಾತದಲ್ಲಿ 6 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.