ನೆಲಮಂಗಲ: ಕನ್ನಡ ನಾಮ ಫಲಕದ ಹೋರಾಟದಂತೆ ಕನ್ನಡಿಗರ ಮಕ್ಕಳಿಗೆ ಉದ್ಯೋಗ ಕುಡಿಸಲು ನಾವು ಹೋರಾಟ ಮಾಡಲು ಸಿದ್ಧರಿದ್ದೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ಮಂಜೇಗೌಡ ತಿಳಿಸಿದರು.
ನಗರದ ಪರಿಕ್ಷಣ ಮಂದಿರದಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹೊರ ರಾಜ್ಯಗಳಿಂದ ಬೆಂಗಳೂರಿಗೆ ಬರುತ್ತಿರುವವರ ಜನಸಂಖ್ಯೆ ಹೆಚ್ಚಾಗುತ್ತಿದ್ದು ಎಲ್ಲ ಕಂಪನಿಗಳಲ್ಲೂ ಹೊರರಾಜ್ಯದವರೇ ಉದ್ಯೋಗವನ್ನು ಆವರಿಸಿಕೊಳ್ಳುತ್ತಿದ್ದಾರೆ ಬೀದಿ ಗಲ್ಲಿ ಗಲ್ಲಿಯಲ್ಲೂ ಹೊರ ರಾಜ್ಯದವರೇ ಆವರಿಸಿದ್ದು ಒಂದು ಕಡೆ ಕನ್ನಡಿಗರ ಮಕ್ಕಳ ಉದ್ಯೋಗವನ್ನು ಕಿತ್ತುಕೊಳ್ಳುತ್ತಿದ್ದಾರೆ ಇನ್ನೊಂದು ಕಡೆ ಹಳ್ಳಿಗಳಲ್ಲೂ ಕೂಡ ಎಕ್ಕರೆ ಗಟ್ಟಲೆ ಜಮೀನನ್ನು ಖರೀದಿಸುತ್ತಿದ್ದು ಮುಂದಿನ ದಿನಗಳಲ್ಲಿ ಕರ್ನಾಟಕವನ್ನೇ ಹೊರ ರಾಜ್ಯದವರು ಬಂದು ಆಳುವ ಪರಿಸ್ಥಿತಿ ಬರಲಿದೆ ಸರಕಾರ ಎಚ್ಚರವಹಿಸಿ ಉದ್ಯೋಗದಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ಕೊಡಬೇಕಾಗಿದೆ.
ಈಗಾಗಲೇ ಎಲ್ಲಕಡೆ ಕಾರ್ಖಾನೆಗಳಲ್ಲಿ ಹೊರರಾಜ್ಯದವರೇ ಗುತ್ತಿಗೆ ಪಡೆದ್ದಿದು ಇದರಿಂದ ಕನ್ನಡಿಗರ ಮಕ್ಕಳಿಗೆ ಕೆಲಸ ಸಿಗದೇ ನಿರುದ್ಯೋಗಿಗಳಾಗಿ ಬೀದಿ ಬೀದಿ ಅಲೆಯುವಂತ ಪರಿಸ್ಥಿತಿ ಬಂದಿದೆ ಹಾಗಾಗಿ ಕನ್ನಡ ನೆಲದಲ್ಲಿ ಕನ್ನಡಿಗನೇ ಸರ್ವಭೌಮ ಕನ್ನಡ ನಾಮಫಲಕಕ್ಕಾಗಿ ಹೋರಾಟ ಮಾಡಿದಂತೆ ಕನ್ನಡಿಗರ ಉದ್ಯೋಗಕಾಗಿ ಸರ್ಕಾರದ ವಿರುದ್ಧ ಹೋರಾಟ ಮಾಡಲು ಸಿದ್ಧರಿದ್ದೇವೆ ಎಂದು ತಿಳಿಸಿದರು.ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕ್ ಉಪಾಧ್ಯಕ್ಷರು,ಮಲ್ಲಿಕಾರ್ಜುನ.ಬಿ ಆರ್, ಸಂಘಟನಾ ಕಾರ್ಯದರ್ಶಿಗಳಾದ ಚಂದ್ರು, ಸೋಂಪುರ ಹೋಬಳಿ ಉಪಾಧ್ಯಕ್ಷರು ಲೋಕೇಶ್ ಮಂಜು, ಸೋಂಪುರ ಹೋಬ್ಳಿ ಅಧ್ಯಕ್ಷರು ರಮೇಶ್, ಭಾಗಿಯಾಗಿದರು.