ಬೆಂಗಳೂರು: ಮರಾಠ ಎಲ್ಐಆರ್ಸಿ ಬಾಯ್ಸ್ ಸ್ಪೋರ್ಟ್ನ ಕೆಡೆಟ್ ವಿಶ್ವಜೀತ್ ಮೋರೆ ಅವರು ಜೋರ್ಡಾನ್ನ ಆಮ್ಮನ್ನಲ್ಲಿ ನಡೆದ ಏಷ್ಯನ್ ಕುಸ್ತಿ ಚಾಂಪಿಯನ್ಷಿಪ್ನ 23 ವರ್ಷದೊಳಗಿನವರ ಗ್ರೀಕೊ-ರೋಮನ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದು ಮೈಲಿಗಲ್ಲು ಸಾಧಿಸಿದ್ದಾರೆ.
ಮತ್ತೊಬ್ಬ ಕೆಡೆಟ್ ಧನರಾಜ್ ಜಾಮ್ನಿಕ್ ಅವರು ಕೂಡಾ ಥಾಯ್ಲೆಂಡ್ನಲ್ಲಿ ನಡೆಯುತ್ತಿರುವ ಏಷ್ಯನ್ ಕುಸ್ತಿ ಚಾಂಪಿಯನ್ಷಿಪ್ನ 15 ವರ್ಷದೊಳಗಿನ ಗ್ರೀಕೊ-ರೋಮನ್ ವಿಭಾಗದಲ್ಲಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ.
ವಿಶ್ವಜೀತ್ ಮತ್ತು ಧನರಾಜ್ ಸಾಧನೆಗೆ ಬ್ರಿಗೇಡಿಯರ್ ಜೊಯ್ದೀಪ್ ಮುಖರ್ಜಿ ರ್ಸಾನೆ ವ್ಯಕ್ತಪಡಿಸಿದ್ದಾರೆ. ‘ಕೆಡೆಟ್ಗಳ ಸಾಧನೆಗಳು ಮರಾಠ ಎಲ್ಐಆರ್ಸಿ ಬಾಯ್ಸ್ ಸ್ಪೋರ್ಟ್ ಕಂಪನಿಯಲ್ಲಿ ಒದಗಿಸಲಾದ ಉತ್ತಮ ಮಾರ್ಗದರ್ಶನ ಮತ್ತು ತರಬೇತಿಯನ್ನು ಎತ್ತಿತೋರಿಸುತ್ತವೆ’ ಎಂದು ಅವರು ಹೇಳಿದ್ದಾರೆ.