ಬೆಂಗಳೂರು: ಐದು ಜನ ಗಂಡಂದಿರನ್ನು ಹೊಂದಿದ್ದ ಮಹಿಳೆ ಸೇರಿ ಮೂರನೇ ಗಂಡ ಲೋಗನಾಥನ್ 27 ವರ್ಷದ ವ್ಯಕ್ತಿಯನ್ನು ಫೆಬ್ರವರಿ 19ರಂದು ಚಿಕ್ಕಬಾಣವಾರ ರೈಲ್ವೆ ಹಳಿ ಬಳಿ ಮಾರಕಾಸ್ತ್ರಗಳಿಂದ ಕೊಲೆ ಮಾಡಿ ಶವವನ್ನು ರೈಲ್ವೆ ಹಳಿ ಮೇಲೆ ಬಿಸಾಕಿ ಹೋಗಿದ್ದ ಪ್ರಕರಣ ಗ್ರಾಮಾಂತರ ರೈಲ್ವೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.
ಈ ಸಂಬಂಧ ರೈಲ್ವೆ ಗ್ರಾಮಾಂತರ ಪೊಲೀಸ್ ಇನ್ಸ್ಪೆಕ್ಟರ್ ಕಾಶಿನಾಥ್ ರವರು ತನಿಖೆ ಕೈಗೊಂಡು ಸತ್ಯವಾಣಿ(27), ವರದರಾಜ್ (23), ನಾಲ್ಕನೇ ಗಂಡ, ಶ್ರೀನಿವಾಸ್(25) ಇವರುಗಳನ್ನು ಬಂಧಿಸಿರುತ್ತಾರೆ.
ಕೊಲೆಗೆ ಮುಖ್ಯ ಕಾರಣ ಐದು ಜನ ಗಂಡಂದಿರನ್ನು ಹೊಂದಿದ್ದರಿಂದ ಸಂಸಾರ ನಡೆಸಲು ಕಷ್ಟವಾಗುತ್ತಿತ್ತು ಎಂದು ಪೊಲೀಸ್ ಇನ್ಸ್ಪೆಕ್ಟರ್ ತನಿಕೆಯಲ್ಲಿ ತಿಳಿಸಿರುತ್ತಾರೆ.