ಮುಂಬೈ: ಟಿ20 ವಿಶ್ವಕಪ್ ನಲ್ಲಿ ಚಾಂಪಿಯನ್ ಆದ ಬಳಿಕ ರೋಹಿತ್ ಶರ್ಮಾ ನಾಯಕತ್ವದ ಬಗ್ಗೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ. ಇದೀಗ ರೋಹಿತ್ ಮುಂದಿನ ಐಪಿಎಲ್ ಗೆ ಮತ್ತೆ ನಾಯಕನಾಗಿ ಕಮ್ ಬ್ಯಾಕ್ ಮಾಡಲಿದ್ದಾರೆ ಎನ್ನಲಾಗಿದೆ.
ಟಿ20 ವಿಶ್ವಕಪ್ ಗಿಂತ ಮೊದಲು ರೋಹಿತ್ ಶರ್ಮಾರಂತಹವರು ಕಿರು ಮಾದರಿಯ ಆಟವಾಡಿದ್ದು ಸಾಕು ಎಂದು ನಿರ್ಧರಿಸಿ ಅವರನ್ನು ಸೈಡ್ ಲೈನ್ ಮಾಡಲು ನಾಯಕತ್ವವನ್ನು ಕಿತ್ತುಕೊಳ್ಳಲಾಗಿತ್ತು.ಆದರೆ ಬಿಸಿಸಿಐ ಮಾತ್ರ ಟಿ20 ವಿಶ್ವಕಪ್ ಗೆ ರೋಹಿತ್ ರನ್ನೇ ನಾಯಕರಾಗಿ ಉಳಿಸಿತು.ಆಗ ಎಷ್ಟೋ ಮಂದಿ ಈ ನಿರ್ಧಾರವನ್ನು ಪ್ರಶ್ನಿಸಿವರು ಇದ್ದಾರೆ. ರೋಹಿತ್ ಗೆ ವಯಸ್ಸಾಯ್ತು.
ಯಾರಾದರೂ ಯುವ ಆಟಗಾರರಿಗೆ ನಾಯಕತ್ವ ನೀಡಬೇಕಿತ್ತು ಎಂದವರೂ ಇದ್ದಾರೆ. ಆದರೆ ರೋಹಿತ್ ನಾಯಕತ್ವದಲ್ಲೇ ಭಾರತ ಕಪ್ ಎತ್ತಿ ಹಿಡಿದಿದ್ದು ಈಗ ಇತಿಹಾಸ.ಆದರೆ ಇದರ ಬೆನ್ನಲ್ಲೇ ಮುಂದಿನ ಬಾರಿ ಐಪಿಎಲ್ ನಲ್ಲೂ ಮುಂಬೈ ಇಂಡಿಯನ್ಸ್ ಪರ ಅಥವಾ ಬೇರೆ ತಂಡಕ್ಕೆ ರೋಹಿತ್ ನಾಯಕರಾಗಿ ಕಮ್ ಬ್ಯಾಕ್ ಮಾಡಬಹುದು ಎಂಬ ಸುದ್ದಿ ದಟ್ಟವಾಗಿದೆ. ರೋಹಿತ್ ನಾಯಕರಾಗುವ ಎಲ್ಲಾ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ರೋಹಿತ್ ಆಟಗಾರನಾಗಿ ಮಾತ್ರವಲ್ಲ, ನಾಯಕನಾಗಿಯೂ ತಾನೊಬ್ಬ ಚಾಣಕ್ಷ್ಯ ಎಂದು ನಿರೂಪಿಸಿದ್ದಾರೆ. ಅದೂ ಅಲ್ಲದೆ ಮುಂಬೈ ಇಂಡಿಯನ್ಸ್ ಹಾರ್ದಿಕ್ ನಾಯಕತ್ವದಲ್ಲಿ ಕಳೆದ ಬಾರಿ ಯಶಸ್ಸು ಪಡೆದಿರಲಿಲ್ಲ. ಹೀಗಾಗಿ ರೋಹಿತ್ ಆಡುವಷ್ಟು ದಿನ ಅವರನ್ನೇ ಮತ್ತೆ ನಾಯಕರಾಗಿ ಮಾಡುವ ಸಾಧ್ಯತೆಯೂ ಇಲ್ಲದಿಲ್ಲ ಎಂಬ ಮಾತು ಕೇಳಿಬರುತ್ತಿದೆ.