ಐಪಿಎಲ್ ಹರಾಜಿನಲ್ಲಿ ಫ್ರಾಂಚೈಸಿಗಳ ಲೆಕ್ಕಾಚಾರವೇ ವಿಚಿತ್ರವಾಗಿರುತ್ತದೆ. ಜನರೇನು ಎಣಿಕೆ ಒಂದಾಗಿದ್ದರೆ, ಫ್ರಾಂಚೈಸಿಗಳು ಎಣಿಕೆಯೇ ಬೇರೆ ಇರುತ್ತದೆ. ಈ ಕೂಡಿಸು, ಕಳೆ, ಗುಣಿಸು. ಭಾಗಕಾರಗಳ ನಡುವೆ ಹೊಸ ಹೊಸ ದಾಖಲೆಗಳು ಸೃಷ್ಟಿಯಾಗುತ್ತಿರುತ್ತವೆ.
ಈ ಬಾರಿಯ ಹರಾಜಿನ ಬಳಿಕ ಆಸ್ಟ್ರೇಲಿಯಾದ ಘಾತಕ ಬೌಲರ್ ಮಿಚೆಲ್ ಸ್ಟಾರ್ಕ್ ಅವರು ಹೊಸದೊಂದು ದಾಖಲೆ ಬರೆದಿದ್ದಾರೆ. ದಿಲ್ಲಿ ಕ್ಯಾಪಿಟಲ್ಸ್ ಗೆ 11.75 ಕೋಟಿ ರೂಪಾಯಿಗೆ ಬಿಕರಿಯಾಗದ ಅವರು ಐಪಿಎಲ್ ನಲ್ಲಿ 50 ಕೋಟಿ ರೂಪಾಯಿ ಗಳಿಸಿದ ಎರಡನೇ ಆಟಗಾರನೆಂಬ ಅಭಿದಾನಕ್ಕೆ ಪಾತ್ರರಾಗಿದ್ದಾರೆ. ಈ ಸಾಧನೆ ಮಾಡಿರುವ ಮೊದಲಿಗ ಅಸ್ಟ್ರೇಲಿಯಾದವರೇ ಆಗಿರುವ ಪ್ಯಾಟ್ ಕಮಿನ್ಸ್.
ಕಳೆದ ವರ್ಷ ಫುಲ್ ಡಿಮ್ಯಾಡ್!ಮತ್ತೆ 2024ರಲ್ಲಿ ಐಪಿಎಲ್ ಮಿನಿ ಹರಾಜು ಪ್ರಕ್ರಿಯೆಗೆ ಆಗಮಿಸಿದ್ದ ಅವರಿಗೆ ಎಲ್ಲಿಲ್ಲದ ಡಿಮ್ಯಾಂಡ್ ಬಂದಿತ್ತು. ಯಾರೂ ಊಹಿಸದ ಬೆಲೆಗೂ ಬಿಕರಿಯಾದರು. ಕೋಲ್ಕತಾ ನೈಟ್ ರೈಡರ್ಸ್ ಫ್ರಾಂಚೈಸಿ ಅವರಿಗಾಗಿ ದಾಖಲೆಯ 24.75 ಕೋಟಿ ರೂಪಾಯಿ ಖರ್ಚು ಮಾಡಿ ತಂಡಕ್ಕೆ ಸೇರಿಸಿಕೊಂಡಿತು. ಆದರೆ ಹೇಳಿಕೊಳ್ಳುವಂತಹ ಪ್ರದರ್ಶನ ಅವರಿಂದ ಬಂದಿರಲಿಲ್ಲ. ಹಾಗಾಗಿ ಈ ಬಾರಿ ಕೋಲ್ಕತಾದಿಂದ ರಿಲೀಸ್ ಮಾಡಿತ್ತು. ಇದೀಗ ದಿಲ್ಲಿ 11.75 ಕೋಟಿ ರೂಪಾಯಿ ಖರ್ಚು ಮಾಡಿ ಖರೀದಿಸಿದೆ.