ಮುಂದಿನ ಐಪಿಎಲ್ ಸೀಸನ್ ಗೆ ಪೂರ್ವಭಾವಿಯಾಗಿ ಇನ್ನೇನು ಎರಡೇ ದಿನಗಳಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಏತನ್ಮಧ್ಯೆಯೇ ಅಭೂತಪೂರ್ವ ನಡೆಯೊಂದದಲ್ಲಿ ಬಿಸಿಸಿಐಯು ಮುಂದಿನ ಮೂರು ಐಪಿಎಲ್ ಗಳ ದಿನಾಂಕಗಳನ್ನೂ ಪ್ರಕಟಿಸಿರುವುದಾಗಿ ಕ್ರಿಕ್ ಇನ್ಫೋ ತಿಳಿಸಿದೆ. ಈ ಕುರಿತಾಗಿ ಭಾರತೀಯ ಕ್ರೆಕೆಟ್ ನಿಯಂತ್ರಣ ಮಂಡಳಿಯು 10 ಫ್ರಾಂಚೈಸಿಗಳಿಗೂ ಅಧಿಕೃತ ಪತ್ರವನ್ನು ಕಳುಹಿಸಿರುವುದಾಗಿ ತಿಳಿದು ಬಂದಿದೆ. ಇದರ ಪ್ರಮುಖ ಮುಂಬರುವ ಅಂದರೆ 2025ರ ಐಪಿಎಲ್ ಮಾರ್ಚ್ 14ರಿಂದ ಪ್ರಾರಂಭ ಆಗಲಿದೆ.
ಭಾರತದ ಚುಟುಕು ಕ್ರಿಕೆಟ್ ಹಬ್ಬಕ್ಕಾಗಿ ಇಡೀ ವಿಶ್ವವೇ ಕಾತರದಿಂದ ಕಾಯುತ್ತಿರುತ್ತದೆ. ಇದೀಗ ಹರಾಜು ಪ್ರಕ್ರಿಯೆಗೆ ಇನ್ನೇನು ಎರಡು ದಿನಗಳಿದ್ದರೂ ಮುಂದಿನ ಐಪಿಎಲ್ ನ ದಿನಾಂಕ ಈವರೆಗೂ ಘೋಷಣೆಯಾಗಿರಲಿಲ್ಲ. ಆದರೆ ಇದೀಗ ಮುಂದಿನ ಮಾತ್ರವಲ್ಲದೆ ಮುಂದಿನ ಮೂರು ವರ್ಷಗಳ ಐಪಿಎಲ್ ಟೂರ್ನಿಯ ದಿನಾಂಕಗಳನ್ನೂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಘೋಷಿಸಿದೆ. ನಡೆಯಲಿದ್ದು ಅದಕ್ಕೆ ಪೂರ್ವಭಾವಿ ಯಾಗಿ ನವೆಂಬರ್ 24 ಮತ್ತು 25ರಂದು ಸೌದಿ ಅರೇಬಿಯಾದ ಜೆದ್ದಾಹ್ ನಗರದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ.
ಈ ಹರಾಜು ಪ್ರಕ್ರಿಯೆಯು ಮುಂದಿನ 3 ಐಪಿಎಲ್ ಟೂರ್ನಿಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಮಾಡಿದೆ. ಈ ವಿಚಾರವಾಗಿ ಬಿಸಿಸಿಐಯು ಎಲ್ಲಾ 10 ಫ್ರಾಂಚೈಸಿಗಳಿಗೆ ಪತ್ರವನ್ನು ಸಹ ಕಳಿಸಿದೆ. ಅದರ ಪ್ರಕಾರ 2025ರ ಐಪಿಎಲ್ ಸೀಸನ್ ಮಾರ್ಚ್ 14ರಿಂದ ಪ್ರಾರಂಭವಾಗಲಿದ್ದು ಮೇ 25ರಂದು ಫೈನಲ್ ಪಂದ್ಯ ನಡೆಯಲಿದೆ. ಅದೇ ರೀತಿ 2026ರ ಐಪಿಎಲ್ ಟೂರ್ನಿಯು ಮಾರ್ಚ್ 15ರಿಂದ ಪ್ರಾರಂಭವಾಗಲಿದ್ದು ಮೇ 31ಕ್ಕೆ ಅಂತ್ಯಗೊಳ್ಳಲಿದೆ. 2027ರ ಟೂರ್ನಮೆಂಟ್ ಮಾರ್ಚ್ 14ರಿಂದ ಮೇ 30ರವರೆಗೆ ನಡೆಯಲಿದೆ ಎಂದು ಕ್ರಿಕ್ ಇನ್ಫೋ ವರದಿ ತಿಳಿಸಿದೆ.