ಎ.ಎಂ. ಕ್ರಿಯೇಷನ್ ಬ್ಯಾನರ್ ಅಡಿಯಲ್ಲಿ ಮಹೇಶ್ ಎನ್. ಅವರು ನಿರ್ಮಾಣ ಮಾಡಿ, ಕರಣ್ ಸವ್ಯಸಾಚಿ ಅವರು ಆಕ್ಷನ್ ಕಟ್ ಹೇಳಿರುವ “ಕಲಿಕುಡುಕರು” ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
ಒಬ್ಬ ಆಟೋ ಡ್ರೈವರ್, ಇನ್ನೊಬ್ಬ ಉಂಡಾಡಿ ಗುಂಡ, ಮತ್ತೊಬ್ಬ ರಿಯಲ್ ಎಸ್ಟೇಟ್ ಬ್ರೋಕರ್, ಇವರ ಜೊತೆಗೆ ಇನ್ನೊಬ್ಬ ನಿರುದ್ಯೋಗಿ ಯುವಕ ಈ ನಾಲ್ವರು ನಾಯಕರು ಮತ್ತು ಮತ್ತೊಬ್ಬನ ಸುತ್ತ ಸಾಗುವ ಕಥೆ ಈ ಚಿತ್ರದಲ್ಲಿದೆ.ತಮ್ಮ ಕುಟುಂಬದಲ್ಲಿ ಉಂಟಾದ ಸಮಸ್ಯೆಗಳಿಂದಾಗಿ ಅವರು ಕುಡಿತದ ದಾಸರಾಗುತ್ತಾರೆ, ಕುಡಿತವೇ ಇವರ ಜೀವನ ಎನ್ನುವಷ್ಟರಮಟ್ಟಿಗೆ ಚಟವಾಗಿಸಿಕೊಂಡಿರುತ್ತಾರೆ.
ನಿರುದ್ಯೋಗಿ ಯುವಕನನ್ನು ಪ್ರಿತಿಸುವ ಹುಡುಗಿ ರೌಡಿಗಳಿಂದ ಅತ್ಯಾಚಾರಕ್ಕೊಳಗಾಗುತ್ತಾಳೆ. ಈ ನಾಲ್ಕು ಜನ ನಾಯಕರು ಆಕೆಗೆ ಹೇಗೆ ನ್ಯಾಯ ಕೊಡಿಸಿದರು ಎನ್ನುವುದೇ ಚಿತ್ರದ ಕಥಾಹಂದರ. ಬೆಂಗಳೂರು ಸುತ್ತ ಮುತ್ತ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.ಚಿತ್ರದ ತಾರಾಗಣದಲ್ಲಿ ಮಹೇಶ್ ಎನ್, ಅಶೋಕ್, ರವೀಶ್, ಶರತ್, ಕೆ.ಜಿ ಲೋಹಿತ್ ,ರಿತ್ಯಾ ,ಸೋನುಗೌಡ, ದೀಪು, ಶೃತಿ , ಅರ್ಚನಾ, ನಾಗೇಂದ್ರ ಅರಸ್, ಮಾನ್ ಮೋಹನ್ ಮಂಜುಳಾ ರೆಡ್ಡಿ ಮುರುಳಿ, ಲೋಹಿತ್, ರವೀಶ್ ಮತ್ತಿತರರಿದ್ದಾರೆ.
ಈ ಚಿತ್ರದಲ್ಲಿ ಎರಡು ಹಾಡುಗಳಿದ್ದು, ಸನ್ನಿ ಮಾಧವನ್ ಅವರ ಸಂಗೀತ ಸಂಯೋಜನೆಯಿದೆ. ಚಿತ್ತೋರ್ ಸೂರಿ ಅವರ ಕ್ಯಾಮೆರಾ, ಶ್ರೀರಂಗ ಹಾಲುವಾಗಿಲು ಅವರ ಸಾಹಿತ್ಯ, ಸುಪ್ರೀಂ ಸುಬ್ಬ ಅವರ ಸಾಹಸ ಈ ಚಿತ್ರಕ್ಕಿದೆ.