ಬೆಂಗಳೂರು: ವಿದ್ಯಾರಣ್ಯಪುರ ಪೊಲೀಸರು ರಾಘವೇಂದ್ರ ಮತ್ತು ಸಾಯಿ ತುಳಸಿ ಕೊಪ್ಪಳ ಜಿಲ್ಲೆಯ ಇವರನ್ನು ಬಂಧಿಸಿ ಸುಮಾರು 25 ಲಕ್ಷ ರೂ ಬೆಲೆ ಬಾಳುವ 25 ದ್ವಿಚಕ್ರ ವಾಹನ, ಆರು ಮೊಬೈಲ್, ಒಂದು ಕಲರ್ ಜೆರಾಕ್ಸ್ ಮಿಷನ್ ವಶ ಪಡಿಸಿಕೊಂಡಿರುತ್ತಾರೆ.
ಆರೋಪಿಗಳು ಇಂಜಿನಿಯರಿಂಗ್ ಪಾಸಾಗದೆ ಇದ್ದಾಗ ಕಳವು ಮಾಡಲು ಯೋಚಿಸಿ ಹುಣಸಮಾರನಹಳ್ಳಿ ಯಲ್ಲಿ ಒಂದು ಮನೆಯನ್ನು ಬಾಡಿಗೆ ಪಡೆದುಕೊಂಡು ಯಲಹಂಕ, ಯಲಹಂಕ ನ್ಯೂ ಟೌನ್,ವಿದ್ಯಾರಣ್ಯಪುರ ಸೇರಿದಂತೆ ಇತರೆ ಕಡೆದ್ವಿಚಕ್ರ ವಾಹನಗಳ ಹ್ಯಾಂಡಲ್ಗಳನ್ನು ಮುರಿದು ಕಳವು ಮಾಡುತ್ತಿದ್ದರು.
ಇದಲ್ಲದೆ ಕಳವು ಮಾಡಿದ್ದ ದ್ವಿಚಕ್ರ ವಾಹನಗಳಿಗೆಆರ್ ಸಿ ಬುಕ್ನು ತಾವೇ ಸ್ವತಃ ಕಲರ್ ಜೆರಾಕ್ಸ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಐವತ್ತು ಸಾವಿರ ರೂಪಾಯಿಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.