ಕಾಂಗ್ರೆಸ್ನಲ್ಲಿ ಸದ್ಯದ ಮಟ್ಟಿಗೆ ಉಪ ಮುಖ್ಯಮಂತ್ರಿ ಹಾಗೂ ಕೆ.ಪಿ.ಸಿ. ಸಿ. ಅಧ್ಯಕ್ಷ ಡಿ. ಕೆ.ಶಿವಕುಮಾರ್ ಕೈ ಮೇಲಾದಂತಿದೆ. ಯಾಕೆಂದರೆ ಹಾಸನದಲ್ಲಿ ಗುರುವಾರ (ಡಿಸೆಂಬರ್ 5) ಜರುಗಲಿರುವ ಸಮಾವೇಶಕ್ಕೆ ಬೇರೆಯದೇ ಸ್ವರೂಪ ಪಡೆಯುವ ಮಟ್ಟಿಗೆ ಡಿ.ಕೆ.ಶಿ.ತನ್ನ ಪಟ್ಟನ್ನು ಪ್ರದರ್ಶಿಸಿದ್ದಾರೆ. ಈ ಮೊದಲು ಸಚಿವ ಸಂಪುಟದ ಮಹಾದೇವಪ್ಪ ರಾಜಣ್ಣ ಭೈರತಿ ಸುರೇಶ್ ಹೀಗೆ ಒಂದು ಗುಂಪು ಸಿದ್ದರಾಮಯ್ಯ ಬಲ ಪ್ರದರ್ಶನಕ್ಕೆ ಅಣಿಯಾಗಿತ್ತು.
ಇದರ ಸೂಚನೆ ಸಿಕ್ಕಕೂಡಲೇ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ದೆಹಲಿ ಮಟ್ಟದ ನಾಯಕರನ್ನು ಸಂಪರ್ಕ ಮಾಡಿ ಹಾಸನದ ಸಮಾವೇಶವನ್ನು ಪಕ್ಷದ ಚಿಹ್ನೆ ಅಡಿ ಆಯೋಜನೆ ಮಾಡಲು ಒಪ್ಪಿಗೆ ಪಡೆದುಕೊಂಡು ಬಿಟ್ಟರು.ಅಲ್ಲಿಗೆ ಹಾಸನ ದಲ್ಲಿ ಆಯೋಜಿಸಲು ಉದ್ದೇಶಿದ್ದ ಸಚಿವ ಸಂಪುಟದ ಕೆಲವರಿಗೆ ಇರುಸು ಮುರುಸು ಉಂಟಾಯಿತು.
ಇಷ್ಟೇ ಆದರೆ ಪರವಾಗಿಲ್ಲ. ಕಾಂಗ್ರೆಸ್ ಪಕ್ಷದ ಒಳಗೆ ಈ ಹಿಂದೆ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಗೆ ಬಹಿರಂಗವಾಗಿ ಹೇಳಿಕೆ ಕೊಡುತ್ತಿದ್ದ ಕೆಲ ಸಚಿವರು ಒಳಗೊಳಗೇ ಉಪಮುಖ್ಯಮಂತ್ರಿಯನ್ನು ಕಟ್ಟಿ ಹಾಕುವ ಭಾಗವಾಗಿ ಹಾಸನ ಸಮಾವೇಶಕ್ಕೆ ಮುನ್ನುಡಿ ಹಾಡಿದ್ದರು. ಆದರೆ ಯಾವಾಗ ಉಪಮುಖ್ಯಮಂತ್ರಿ ಹುದ್ದೆಗೆ ಬಿರುಸಾದ ಹೋರಾಟ ನಡೆಯುತ್ತಾ ಹೋಯಿತೋ ಆಗ ಡಿ.ಕೆ.ಸಿ. ಒಳಗೊಳಗೇ ಕುದಿಯುತ್ತಾ ಇದ್ದರು. ಕಾರಣ 2023 ರಲ್ಲಿ ತಾವು ಪಕ್ಷದ ಅಧ್ಯಕ್ಷರಾಗಿದ್ದಾಗ ಜರುಗಿದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಪ್ರಚಂಡ ಬಹುಮತವನ್ನು ಗಳಿಸಿದಾಗ ರಾಜ್ಯದ ಚುಕ್ಕಾಣಿ ಹಿಡಿಯದೇ ಸುಮ್ಮನೆ ಕೈ ಕಟ್ಟಿ ಕುಳಿತಿರಲು ಸಾಧ್ಯವೇನು ಎನ್ನುವ ಸಹಜವಾದ ಪ್ರಶ್ನೆಯನ್ನು ಪಕ್ಷದ ಹೈ ಕಮಾಂಡ್ ಮುಂದೆ ಅಂದೇ ಮಂಡಿಸಿದ್ದರು.
ಡಿ. ಕೆ. ಶಿವಕುಮಾರ್. 1999 ರಲ್ಲಿ ಎಸ್. ಎಂ. ಕೃಷ್ಣ ಕಾಂಗ್ರೆಸ್ ಪಕ್ಷದಿಂದ ಸಿ. ಎಂ.ಆದನಂತರ ಒಕ್ಕಲಿಗ ಸಮುದಾಯದಿಂದ ಯಾರೂ ಆಗಿಲ್ಲ ನನಗೊಂದು ಅವಕಾಶ ಕೊಡಿ ಎಂದು ಕೂಡಾ ತಮ್ನ ಸಮುದಾಯದ ಸಭೆಯೊಂದರಲ್ಲಿ ತಮ್ಮ ಮನದ ಅಭಿಲಾಷೆಯನ್ನು ಬಹಿರಂಗಪಡಿಸಿದ್ದರು ಸ್ವತಃ ಡಿ. ಕೆ. ಶಿವಕುಮಾರ್.ಇದು ಇಷ್ಟಕ್ಕೆ ಆಗದೇ 2023 ರಲ್ಲಿ ವಿಧಾನಸಭೆ ಚುನಾವಣೆ ನಡೆದಾಗ ಸಿದ್ದರಾಮಯ್ಯ ದೆಹಲಿಯಲ್ಲಿ ತಮ್ಮದೇ ಆದ ವರ್ಚಸ್ಸು ಬಳಸಿಕೊಂಡು ಸಿ. ಎಂ. ಕುರ್ಚಿಯಲ್ಲಿ ಆಸಿನರಾದರು. ಈಗಾಗಲೇ ಸರ್ಕಾರ ರಚನೆಯಾಗಿ ಹತ್ತಿರ ಹತ್ತಿರ ಒಂದು ವರೆ ವರ್ಷ ಕಳೆದು ಹೋಗಿದೆ.
ಸರ್ಕಾರ ಹಾಗೂ ಪಕ್ಷದಲ್ಲಿ ಸಾಕಷ್ಟು ಬದಲಾವಣೆಗಳು ಆಗಿದೆ.ಮುಡಾ ವಾಲ್ಮೀಕಿ ಹಗರಣಗಳು ಜೊತೆಗೆ ವಖ್ಫ್ ಗಲಾಟೆಗಳ ಮಧ್ಯೆ ಇತ್ತೀಚೆಗೆ ಜರುಗಿದ ಮೂರು ಉಪಚುನಾವಣೆಯಲ್ಲಿ ಪಕ್ಷ ಜಯಭೇರಿ ಬಾರಿಸಿದ್ದ ಹುಮ್ಮನಿಸಿನಲ್ಲಿ ಕೆಲ ಸಚಿವರು ಹಾಸನ ಸಮಾವೇಶಕ್ಕೆ ರೆಡಿ ಆಗುತ್ತಿದ್ದಂತೆ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಎಚ್ಚತ್ತುಗೊಂಡು ತಮ್ಮ ದಾಳವನ್ನು ಉರುಳಿಸಿದ್ದಾರೆ. ಆ ಮೂಲಕ ತಮ್ಮ ಪಕ್ಷ ಸರ್ಕಾರ ಹಾಗೂ ಹೈ ಕಮಾಂಡ್ ಲ್ಲಿ ತಮ್ಮ ಪ್ರಾಬಲ್ಯ ಕಡಿಮೆ ಆಗಿಲ್ಲ ಎನ್ನುವ ಸೂಚನೆ ಕೊಟ್ಟಿದ್ದಾರೆ.
ಸಹಜವಾಗಿ ಪಕ್ಷದ ಹೈ ಕಮಾಂಡ್ ಯಾವಾಗ ಎಂಟ್ರಿ ಕೊಟ್ಟಿತೋ ಅವಾಗ ಸಿದ್ದರಾಮಯ್ಯ ಕೂಡಾ ಪಕ್ಷದ ಚಿನ್ಹೆ ಅಡಿ ಹಾಸನ ಸಮಾವೇಶ ಎಂದು ಉಪಮುಖ್ಯಮಂತ್ರಿ ಡಿ. ಕೆ. ಸಿ. ಮಾತಿಗೆ ದನಿಗೂಡಿಸಿದ್ದಾರೆ.ಅಲ್ಲಿಗೆ ಡಿ. ಕೆ. ಶಿವಕುಮಾರ್ ಅಂದುಕೊಂಡಂತೆ ಹಾಸನ ಸಮಾವೇಶ ಜರುಗಲು ಇದ್ದ ಅಡ್ಡಿ ಆತಂಕಗಳು ದೂರವಾದಂತೆ ಆಯಿತು. ಯಾಕೆಂದರೆ ಮುಂದಿನ ಸಿ.ಎಂ. ತಾವೇ ಎಂಬಂತೆ ಡಿ. ಕೆ. ಶಿ.ತಮ್ಮ ಮುಂದಿನ ದಾರಿ ಸರಿ ಮಾಡಿಕೊಂಡಂತೆ ಕಾಣುತ್ತಿದೆ.
ಸರ್ಕಾರ ರಚನೆ ಸಂದರ್ಭದಲ್ಲಿ ಒಂದೊಮ್ಮೆ ದೆಹಲಿ ಮಟ್ಟದಲ್ಲಿ ಸಿ. ಎಂ. ಖುರ್ಚಿ ವಿಷಯದಲ್ಲಿ ಮಾತು ಕತೆ ಆಗಿದ್ದರೆ…? ಎರಡವರೇ ವರ್ಷದ ನಂತರ ಕುರ್ಜಿ ಬಿಟ್ಟುಕೊಡಬೇಕಾದಲ್ಲಿ ಸಹಜವಾಗಿ ಡಿ. ಕೆ. ಮುಖ್ಯಮಂತ್ರಿಯಾದರೆ ಈಗಿರುವ ಸಚಿವರ ಪೈಕೆ ಅನೇಕರು ಸಂಪುಟದಿಂದ ದೂರ ಇರಬೇಕಾಗುತ್ತದೆ. ಅಲ್ಲಿ ಮೊದಲಿಗರಾಗಿ ರಾಜಣ್ಣ ಜಮೀರ್ ಅಂತ ಸಚಿವರು ತಾವಾಗಿಯೇ ಸಚಿವ ಸಂಪುಟದಿಂದ ದೂರ ಉಳಿಯುತ್ತಾರೆ. ಅಲ್ಲಿಗೆ ಡಿ. ಕೆ. ಶಿವಕುಮಾರ್ ತಮ್ಮ ಹೊಸ ಬಳಗವನ್ನು ಕಟ್ಟಿಕೊಂಡು ರಾಜ್ಯವನ್ನು ಮುನ್ನೆಡೆಸಬೇಕಾಗುತ್ತದೆ.