‘ಕೃಷ್ಣಂ ಪ್ರಣಯ ಸಖಿ’ ಕನ್ನಡದ ಮತ್ತೊಂದು ಬಹು ನಿರೀಕ್ಷೆಯ ಸಿನಿಮಾ. ಟಿಪಿಕಲ್ ಗಣೇಶ್ ಸಿನಿಮಾ ನೋಡಬೇಕು ಅಂತ ಕಾದು ಕೂತಿದ್ದವರಿಗೆ ಇಷ್ಟ ಪಡುವಂತಹ ಸಿನಿಮಾವಿದು. ದೊಡ್ಡ ಸ್ಟಾರ್ ಕಾಸ್ಟ್ ಅನ್ನು ಹಾಕಿಕೊಂಡು ಶ್ರೀಮಂತ ಮನೆತನದ ಕಥೆಯನ್ನು ಹೇಳಿರುವ ಸಿನಿಮಾವೇ ‘ಕೃಷ್ಣಂ ಪ್ರಣಯ ಸಖಿ’.
‘ದಂಡುಪಾಳ್ಯ’ದಂತಹ ರಗಡ್ ಸಿನಿಮಾವನ್ನು ನಿರ್ದೇಶನ ಮಾಡಿದ್ದ ಶ್ರೀನಿವಾಸ್ ರಾಜು ಈ ಬಾರಿ ಫ್ಯಾಮಿಲಿ ಸಬ್ಜೆಕ್ಟ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಅದಕ್ಕೆ ಫ್ಯಾಮಿಲಿ ಸ್ಟಾರ್ ಗಣೇಶ್ ಅವರನ್ನು ನಾಯಕನ ಪಾತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದು ವಿಶೇಷ. ಇನ್ನು ಮಾಳವಿಕಾ ನಾಯರ್ ಹಾಗೂ ಶರಣ್ಯ ಶೆಟ್ಟಿ ಇಬ್ಬರು ನಾಯಕಿಯರು ಇದ್ದಾರೆ.ಸಾಧು ಕೋಕಿಲಾ, ರಂಗಾಯಣ ರಘು, ಶಶಿಕುಮಾರ್, ರಾಮಕೃಷ್ಣ, ಶ್ರುತಿ ಸೇರಿದಂತೆ ದೊಡ್ಡ ತಾರಾ ಬಳಗವೇ ಇದೆ.
ಕಥೆಯಲ್ಲಿರುವ ಟ್ವಿಸ್ಟ್ ಏನು? ನಾಯಕಿ (ಮಾಳವಿಕಾ ನಾಯರ್) ಮನಸ್ಸನ್ನು ಗೆಲ್ಲುವ ಗಣೇಶ್ ಗ್ಯಾಪ್ನಲ್ಲಿ ನೆನಪಿನ ಶಕ್ತಿಯನ್ನು ಕಳೆದುಕೊಳ್ಳುತ್ತಾರೆ.
ಅಷ್ಟೊತ್ತಿಗಾಗಲೇ ಎರಡನೇ ನಾಯಕಿಯ (ಶರಣ್ಯ ಶೆಟ್ಟಿ) ಎಂಟ್ರಿ ಆಗಿರುತ್ತೆ. ಇಲ್ಲಿಂದ ಕಥೆಗೆ ಒಂದಿಷ್ಟು ಟ್ವಿಸ್ಟ್ ಅಂಡ್ ಟರ್ನ್ಗಳು ಸಿಗುತ್ತಾ ಹೋಗುತ್ತವೆ. ಕೆಲವೊಂದು ಆಕ್ಷನ್ ಸೀನ್ಗಳು ಬಂದು ಹೋಗುತ್ತವೆ.