ಬೆಂಗಳೂರು: ಚಿಕ್ಕಬಳ್ಳಾಪುರ ಜಿಲ್ಲೆಯ ಕೊನಘಟ್ಟ, ಕೋಡಿಹಳ್ಳಿ, ನಾಗದೇನಹಳ್ಳಿ ಹಾಗೂ ಆದಿನಾರಾಯಣ ಹೊಸಹಳ್ಳಿ ಗ್ರಾಮಗಳಲ್ಲಿ ಕೆಐಎಡಿಬಿ ರೈತರ ಜಮೀನು ಸ್ವಾದೀನ ಪಡಿಸಿಕೊಂಡಿದ್ದು,ಹಣ ಬಿಡುಗಡೆ ಮಾಡದೇ ಹಾಗೂ ರೈತರ ಜಮೀನಿಗೆ ಹೆಚ್ಚುವರಿ ಹಣ ಬಿಡುಗಡೆ ಮಾಡದೆ ಕಾಮಗಾರಿ ಮುಂದುವರೆಸಿರುವುದು ಖಂಡನೀಯ,ಇದರ ವಿರುದ್ಧ ಉಗ್ರ ಹೋರಾಟ ನಡೆಸುವುದಾಗಿ ಕೆಐಎಡಿಬಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತ ನರಸಿಂಹ ಮೂರ್ತಿ, ರೈತ ಹೋರಾಟ ಸಮಿತಿ 1/4 ಅನುಪಾತದಲ್ಲಿ ಅಹೋರಾತ್ರಿ ಧರಣಿ ನಡೆಸಿ ಒಂದು ಕೋಟಿ 50ಸಾವಿರ ರೂಪಾಯಿ ಬೆಲೆ ನಿಗದಿ ಮಾಡಲಾಗಿತ್ತು,ಬಳಿಕ ರೈತ ಮುಖಂಡರನ್ನು ಕರೆಸಿ ಒಂದು ಕೋಟಿ 70ಲಕ್ಷ ರೂಪಾಯಿ ಕೊಡುವುದಾಗಿ ಹೇಳಿದ್ದರು, ರೈತರು ಇದಕ್ಕೆ ಒಪ್ಪದೇ ಎರಡು ಕೋಟಿ 20 ಲಕ್ಷ ಕೋಟಿ ರೂಪಾಯಿ ನೀಡಬೇಕೆಂದು ಧರಣಿ ಮುಂದುವರೆಸಿರುವುದಾಗಿ ತಿಳಿಸಿದರು.
ಕೆಲವರು ಬೇರೆ ಕಡೆಯಿಂದ ಬಂದು ಜಮೀನು ಮಾಡಿಕೊಂಡವರು ಪರಿಹಾರಕ್ಕಾಗಿ ಅರ್ಜಿ ಹಾಕಿದ್ದಾರೆ,ಮಧ್ಯವರ್ತಿಗಳೇ ಅಧಿಕಾರಿಗಳ ಮೂಲಕ ಅರ್ಜಿ ಹಾಕಿಸಿದ್ದಾರೆ ರೈತರಿಗೆ ಪರಿಹಾರವು, ಭೂಮಿಯೂ ಇಲ್ಲವಾದ ಪರಿಸ್ಥಿತಿ ನಿರ್ಮಾಣವಾಗಿದೆ,ರೈತರು ರಾಗಿ ಬೆಳೆಯನ್ನು ನಾಟಿ ಮಾಡಿದ್ದು ರೈತರ ಗಮನಕ್ಕೆ ತರದೇ ರಸ್ತೆ ಮಾಡಲು ಮುಂದಾಗಿರುವುದು ಸರಿಯಲ್ಲ, ರೈತರ ಗಮನಕ್ಕೆ ತರದೇ ಸರ್ವೇ ಕಾರ್ಯ ಸರ್ವೇ ಕಾರ್ಯ ಆರಂಭಿಸಿದ್ದು ರೈತರಿಗೆ ಸೂಕ್ತ ಪರಿಹಾರ ನೀಡದೇ ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.
ರೈತರಿಗೆ ನೇರವಾಗಿ ಪರಿಹಾರ ವಿತರಿಸದೇ ಮಧ್ಯವರ್ತಿಗಳ ಮುಖಾಂತರ ಪರಿಹಾರ ವಿತರಿಸಲು 10ರಿಂದ 15ಲಕ್ಷ ಲಂಚ ಬೇಡಿಕೆ ಇಟ್ಟಿದ್ದಾರೆ, ಇದನ್ನು ಪ್ರಶ್ನಿಸಿದ ರೈತರಿಗೆ ತಹಸೀಲ್ದಾರ್ ಬಾಳಪ್ಪ ಹಂದಿಗುಂದ ಸಚಿವರಾದ ಎಂ.ಬಿ.ಪಾಟೀಲ್ ಮತ್ತು ಮುಖ್ಯಮಂತ್ರಿಗಳಿಗೆ ಹಣ ನೀಡಬೇಕೆಂದು ಹೇಳುತ್ತಾರೆ ಎಂದು ಗಂಭೀರ ಆರೋಪ ಮಾಡಿದರು.ಈ ಹಿಂದೆ ಅಧಿಕಾರಿಯಾದ ಬಾಳಪ್ಪ ಹಂದಿಗುಂದ ಸಾಕಷ್ಟು ಆಕ್ರಮಗಳನ್ನು ಎಸಗಿದ್ದಾರೆ ಎಂದು ಆರೋಪಿಸಿದರು.