ಬೆಂಗಳೂರು: ಕೆಐಎಡಿಬಿ ನಿಗಮ ಸಿಎ ಸೈಟು ಹಂಚಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಮಲ್ಲಿಕಾರ್ಜುನ ಖರ್ಗೆ ಕುಟುಂಬವನ್ನು ಗುರಿಯಾಗಿಸಲು ರಾಜ್ಯ ಬಿಜೆಪಿ ನಾಯಕರಿಗೆ ಹೈಕಮಾಂಡ್ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕಳಪೆ ಪ್ರದರ್ಶನ ಹಿನ್ನೆಲೆ. ಮುಂದೆ ಎದುರಾಗಲಿರುವ ಚುನಾವಣೆಗಳಿಗೆ ಭದ್ರ ಬುನಾದಿ ಹಾಕಿಕೊಳ್ಳಲು ಖರ್ಗೆ ಕುಟುಂಬ ಟಾರ್ಗೆಟ್ ಮಾಡಿಕೊಳ್ಳಲೇಬೇಕೆಂದು ನಿರ್ಧಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಈ ನಿಟ್ಟಿನಲ್ಲಿ ರಾಜ್ಯ ಬಿಜೆಪಿ ನಾಯಕರ ಮುಖಾಂತರ ಪ್ರಬಲ ದಲಿತಾಸ್ತ್ರ ಪ್ರಯೋಗ ಮಾಡುವ ಮೂಲಕ ಖರ್ಗೆ ಕುಟುಂಬ ಟಾರ್ಗೆಟ್ ಮಾಡಲು ಸೂಚನೆ ನೀಡಲಾಗಿದೆ.ಬಿಜೆಪಿ ಉನ್ನತ ಮೂಲಗಳಿಂದಲೇ ಈ ಬಗ್ಗೆ ಮಾಹಿತಿ ಲಭ್ಯವಾಗಿದೆ. ರಾಜ್ಯದ ಎಲ್ಲಾ ಬಿಜೆಪಿ ನಾಯಕರುಗಳು ಕಲ್ಯಾಣ ಕರ್ನಾಟಕ ಭಾಗದತ್ತ ಗಮನಹರಿಸಬೇಕು. ಅಲ್ಲಿ ಈಗಾಗಲೇ ಪಕ್ಷಕ್ಕೆ ಕಳೆದ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯಲ್ಲಿ ಭಾರೀ ಪ್ರಮಾಣದಲ್ಲಿ ಹಿನ್ನಡೆಯಾಗಿದೆ. 40 ವಿಧಾನಸಭಾ ಕ್ಷೇತ್ರಗಳ ಪೈಕಿ ನಮ್ಮ ಸಾಧನೆ ಕಳಪೆಯಾಗಿದ್ದು, 5 ಕ್ಕೆ 5 ಲೋಕಸಭಾ ಕ್ಷೇತ್ರಗಳಲ್ಲೂ ಸೋಲುಂಡಿದ್ದೇವೆ.
ಈ ಸೋಲಿನಿಂದ ಮೈ ಕೊಡವಿಕೊಂಡು ಎದ್ದು ಬರಬೇಕು ಅಂದರೆ, ನಾವು ಅಲ್ಲಿ ಸಂಘಟನೆಯಲ್ಲಿ ಬಲವರ್ಧನೆ ಮಾಡಿಕೊಳ್ಳಲೇಬೇಕು. ನಮಗೆ ಸಿಗುವ ಪ್ರತಿಯೊಂದು ಸಣ್ಣ ಸಣ್ಣ ವಿಚಾರಗಳನ್ನು ಅಸ್ತ್ರವಾಗಿ ಪರಿವರ್ತನೆ ಮಾಡಿಕೊಳ್ಳಲೇಬೇಕು ಎಂದು ಸಲಹೆ ನೀಡಿದ್ದಾರೆ ಎನ್ನಲಾಗಿದೆ.ಈಗ ಖರ್ಗೆ ಕುಟುಂಬಕ್ಕೆ ಕೆಐಎಡಿಬಿ ನಿಗಮದ ವತಿಯಿಂದ ಹಂಚಿಕೆಯಾಗಿರುವ…
ಸೈಟು ಪ್ರಬಲ ಅಸ್ತ್ರವಾಗಿ ಮಾಡಿಕೊಳ್ಳಬೇಕು. ಇದರಿಂದ ಇಡೀ ಖರ್ಗೆ ಕುಟುಂಬವೇ ಟಾರ್ಗೆಟ್ ಮಾಡಬಹುದು. ಇತ್ತ ರಾಜಭವನದವರೆಗೂ ಪ್ರಕರಣ ತಲುಪಿಸಿ. ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಿಯಾಂಕ್ ಖರ್ಗೆಗೆ ಮುಜುಗರ ಆಗಬೇಕು. ಈ ರೀತಿ ಮಾಡಲೇಬೇಕು ಎಂದು ಹೈಕಮಾಂಡ್ ನಾಯಕರು ಸೂಚಿಸಿದ್ದಾರೆ ಎನ್ನಲಾಗಿದೆ.