ಕುಣಿಗಲ್: ಶರಣ ನುಲಿಯ ಚಂದಯ್ಯ ಅವರು ಜಾತಿಯ ಬೇಲಿಯನ್ನು ದಾಟಿ ಮೇಲು ಕೀಳರಿಮೆಯನ್ನು ಕಿತ್ತೆಸೆದು ಅಮೂಲ್ಯವಾದ ವಚನಗಳನ್ನು ಮನಕುಲಕ್ಕೆ ನೀಡಿದ್ದಾರೆ ಎಂದು ತಹಶೀಲ್ದಾರ್ ಯು.ರಶ್ಮಿ ತಿಳಿಸಿದರು,ತಾಲೂಕು ಆಡಳಿತ, ಅಖಿಲ ಕರ್ನಾಟಕ ಕುಳುವ (ಕೊರವ- ಕೊರಚ ) ಮಹಾಸಭಾ ಸಂಯುಕ್ತಾಶ್ರಯದಲ್ಲಿ ತಾಲೂಕು ಕಚೇರಿ ನ್ಯಾಯಾಲಯದ ಸಭಾಂಗಣದಲ್ಲಿ ನಡೆದ ಕಾಯಕ ಯೋಗಿ ಶರಣ ನುಲಿಯ ಚಂದಯ್ಯ ಅವರ 917 ನೇ ಜಯಂತೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು,
ಶರಣ ಚಂದಯ್ಯ ಅವರು ಸುಮಾರು 1030 ರಲ್ಲಿ ಬಿಜಾಪುರ ಜಿಲ್ಲೆಯ ಶಿವಣಿಗಿ ಗ್ರಾಮದಲ್ಲಿ ಜನಿಸಿದರು, ಕಲ್ಯಾಣದ ಕೆರೆಗಳಲ್ಲಿ ಸಿಗುವ ಹೊಡಕೆ ಚೇಣಿ ಮುಂತಾದ ನಾರುಗಳಿಂದ ಹಗ್ಗ ಹೊಸೆದು ಮಾರಾಟ ಮಾಡಿ ಬಂದ ಹಣದಿಂದ ಜಂಗಮ ದಾಸೋಹ ನಡೆಸುತ್ತಿದ್ದರು, ಹಗ್ಗ ಮಾಡುವ ಕಾಯಕವನ್ನು ಅತ್ಯಂತ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಮಾಡುತ್ತಾ ಬಸವಣ್ಣ ನವರಿಗೆ ಪ್ರಿಯರಾದರು ಇವರು ಚಂದೇಶ್ವರ ಲಿಂಗ ಎಂಬ ಅಂಕಿತ ನಾಮದಲ್ಲಿ ಸುಮಾರು 48 ವಚನ ರಚನೆ ಮಾಡಿದ್ದಾರೆ ಎಂದರು.
ಕಾರ್ಯಗಾರ: ಚಂದಯ್ಯ ಅವರ ಹೆಸರಿನಲ್ಲಿ ಕಾರ್ಯಗಾರಗಳನ್ನು ಮಾಡುವ ಮೂಲಕ ಶಾಲಾ ಮತ್ತು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಶರಣ ಚಂದಯ್ಯ ಅವರ ಚರಿತ್ರೆಯನ್ನು ಪರಿಚಯ ಮಾಡಿಕೊಡುವುದು ಅತ್ಯ ಅವಶ್ಯಕವಾಗಿದೆ ಎಂದು ರಶ್ಮಿ ಪ್ರತಿಪಾಧಿಸಿದರು, ಈ ಸಮುದಾಯವು ಸರ್ಕಾರ ಸೌಲಭ್ಯ ಪಡೆದು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಮಾಜಿಕವಾಗಿ ಅಭಿವೃದ್ದಿ ಹೊಂದಬೇಕು ಈ ನಿಟ್ಟಿನಲ್ಲಿ ಸರ್ಕಾರದ ಸೌಲಭ್ಯ ಅಗತ್ಯವಾದಲ್ಲಿ ನಮ್ಮ ಇಲಾಖೆಯನ್ನು ಸಂಪರ್ಕಿಸುವಂತೆ ತಿಳಿಸಿದರು.
ಮಹಾಸಭಾ ತಾಲೂಕು ಅಧ್ಯಕ್ಷ ಹೆಚ್.ಜಿ.ಆನಂದ್ ಕಾವಾಡಿ ಮಾತನಾಡಿ ನುಲಿಯ ಚಂದಯ್ಯ ಕಾಯಕದ ಮೂಲಕವೇ ಅತ್ಮೋನ್ನತಿ ಕಂಡವರು ಒಮ್ಮೆ ಇರವರು ಕೆರೆ ನೀರಲ್ಲಿ ಹುಲ್ಲು ಕೊಯ್ಯುತ್ತಿದ್ದಾಗ ಕೊರಳಲ್ಲಿ ಇದ್ದ ಇಷ್ಟಲಿಂಗ ಜಾರಿ ನೀರಿನಲ್ಲಿ ಬಿದ್ದಿ ಹೋಯಿತ್ತು ಕಾಯಕದಲ್ಲಿ ಮೈ ಮರೆತ ಚಂದಯ್ಯ ಅದನ್ನು ಮೇಲೆತ್ತಿಕೊಳ್ಳಲಿಲ್ಲ ಆದರೂ ಲಿಂಗವೇ ಅವರನ್ನು ಹಿಂಬಾಲಿಸಿತ್ತು ಅದನ್ನು ಸ್ವೀಕರಿಸಲು ನಿರಾಕರಿಸಿದ್ದಾಗ ಲಿಂಗದೇವ ಮತ್ತು ಚಂದಯ್ಯ ಅವರ ನಡುವೆ ರಾಜೀಮಾಡಿಸಿದ ಮಡಿವಾಳ ಮಾಚಿದೇವರು ಲಿಂಗವನ್ನು ಸ್ವೀಕರಿಸಲು ಸಲಹೆ ನೀಡಿದರು, ಆದರೆ ಚಂದಯ್ಯ ತಾನು ನುಲಿದ ಹಗ್ಗಗಳನ್ನು ಮಾರುವ ಕಾಯಕವನ್ನು ಲಿಂಗ ದೇವನಿಗೆ ವಹಿಸುತ್ತಾನೆ.
ಲಿಂಗ ದೇವ ಈ ಹಗ್ಗ ಗಳನ್ನು ಬಸವಣ್ಣನಿಗೆ ಹೆಚ್ಚು ಹಣಕ್ಕೆ ನೀಡಿ ಹಣ ತಂದಾಗ ಚಂದಯ್ಯ ಅದನ್ನು ಸ್ವೀಕರಿಸದೇ ಹೆಚ್ಚಿನ ಹಣವನ್ನು ಬಸವಣ್ಣನಿಗೆ ಒಪ್ಪಿಸಲು ಲಿಂಗ ದೇವನಿಗೆ ಕಟ್ಟಪ್ಪಣೆ ಮಾಡಿದರು, ಇದು ಚಂದಯ್ಯ ಅವರ ಕಾಯಕ ನಿಷ್ಠೆ ಗೆ ಮತ್ತು ಪ್ರಾಮಾಣಿಕತೆಗೆ ಉದಾರಣೆಯಾಗಿದೆ ಎಂದು ಹೇಳಿದರು,
ಕಾರ್ಯಕ್ರಮದಲ್ಲಿ ಶ್ರಮ ಜೀವಿ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಕೃಷ್ಣರಾಜು, ಮುಖಂಡರಾದ ವರದರಾಜು, ಲಕ್ಕಣ್ಣ, ವೆಂಕಟೇಶ್, ಬೋಜಯ್ಯ, ನರಸಿಂಹ, ಭರತ, ಮಂಜು, ತಿಮ್ಮಪ್ಪ, ದೇವರಾಜ್, ನಾರಾಯಣ್, ಯೋಗಿಶ್, ಮಾದೇವಿ, ಶಾರದ ಮತ್ತಿತರರು ಇದ್ದರು.