ಜಾವಕಾಪಿ ಕನ್ನಡ ಹಾಗೂ ಮಲಯಾಳಂನಲ್ಲಿ ತಯಾರಾಗುತ್ತಿರುವ ಹೊಸ ಸಿನಿಮಾ. ಇತ್ತೀಚೆಗೆ ಇದರ ಕನ್ನಡ ಮತ್ತು ಮಲಯಾಳಂ ಪೋಸ್ಟರ್, ಟೈಟಲ್ ಹಾಗೂ ಹಾಡುಗಳ ಬಿಡುಗಡೆಯಾಯಿತು. ಚಿತ್ರದ ನಾಯಕಿ ಸಾನ್ವಿಕಾ ನಾಯಕ ಅಜಯ್ ವರ್ಧನ್ ಉಪಸ್ಥಿತರಿದ್ದರು.
ಚಿತ್ರದನಾಯಕಿ ಸಾನ್ವಿಕ ಕಥೆ ಚಿತ್ರಕಥೆ ನಿರ್ಮಾಣ ಮತ್ತು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಶ್ರೀಧರ್ ಕರ್ಕೇರಾ ಚಿತ್ರಕ್ಕೆ ಸಂಗೀತ ನಿರ್ದೇಶನ ನೀಡುತ್ತಿದ್ದಾರೆ. ವಿಶಾಖ ನಾಗಲಾಪುರ ಹಾಗೂ ಪೃಥ್ವಿ ಭಟ್ ಹಿನ್ನೆಲೆ ಗಾಯನ ನೀಡಿದ್ದಾರೆ 9ರಿಂದ ಕೇರಳದ ವಯ್ ನಾಡಿನಲ್ಲಿ ಶೂಟಿಂಗ್ ಆರಂಭಆಗಲಿದೆ. ಬೆಂಗಳೂರು ಮಂಗಳೂರು ಮಡಿ ಕೇರಿ ಸೇರಿದಂತೆ ವಿವಿಧ ಕಡೆಗಳಲ್ಲಿ ಚಿತ್ರೀಕರಣ ನಡೆಯಲಿದೆ.