ಹರಾರೆ: ಟಿ20 ವಿಶ್ವಕಪ್ ಗೆಲುವಿನ ಬಳಿಕ ಟೀಂ ಇಂಡಿಯಾ ಜಿಂಬಾಬ್ವೆ ವಿರುದ್ಧ 5 ಪಂದ್ಯಗಳ ಟಿ20 ಸರಣಿಯನ್ನು ವಶಪಡಿಸಿಕೊಂಡಿದೆ. ಭಾನುವಾರ ನಡೆದ ಐದನೇ ಪಂದ್ಯದಲ್ಲಿ ಭಾರತ 42 ರನ್ ಗಳಿಂದ ಜಿಂಬಾಬ್ವೆ ವಿರುದ್ಧ ಜಯ ಸಾಧಿಸಿದೆ. ಆ ಮೂಲಕ ಸರಣಿಯನ್ನು 4 -1ರ ಅಂತರದಲ್ಲಿ ವಶಪಡಿಸಿಕೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ 6 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿತು. ಉಪನಾಯಕ ಸಂಜು ಸ್ಯಾಮ್ಸನ್ 58 ರನ್, ಶಿವಂದುವೆ 26 ರನ್ ಗಳಿಸಿದರು. ಮುಕೇಶ್ ಕುಮಾರ್ ನಾಲ್ಕು ವಿಕೆಟ್ ಪಡೆದರು. ಇವರ ಉತ್ತಮ ಪ್ರದರ್ಶನದಿಂದ ಆತಿಥೇಯ ಜಿಂಬಾಬ್ವೆ ಎದುರಿನ ಐದನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಭಾರತ 42 ರನ್ ಗಳಿಂದ ಗೆಲುವು ಸಾಧಿಸಿದೆ.
ಶುಭಮನ್ ಗಿಲ್ ಬಳಗ 5 ಪಂದ್ಯಗಳ ಸರಣಿಯನ್ನು 4-1 ಅಂತರದಿಂದ ವಶ ಮಾಡಿಕೊಂಡಿದೆ. ಜಿಂಬಾಬ್ವೆ18.3 ಓವರ್ ಗಳಲ್ಲಿ 125 ರನ್ ಗಳಿಸಲಷ್ಟೇ ಶಕ್ತವಾಯಿತು.2021ರ ನವೆಂಬರ್ ಬಳಿಕ ಟೀಮ್ ಇಂಡಿಯಾ ಆಡಿದ 18 ಟಿ20 ಸರಣಿಗಳಲ್ಲಿ 15ನೇ ಸರಣಿ ಗೆಲುವು ಇದಾಗಿದೆ. ಎರಡು ಸರಣಿಗಳಲ್ಲಿ ಸಮಬಲ ಸಾಧಿಸಿದ್ದು, ಒಂದು ಸರಣಿಯಲ್ಲಿ ಸೋಲು ಕಂಡಿದೆ.