ದೊಡ್ಡಬಳ್ಳಾಪುರ: ನಗರದ ಒಕ್ಕಲಿಗರ ಭವನದ ಸಮೀಪ ನಾಡಪ್ರಭು ಕೆಂಪೇಗೌಡರ ಪುತ್ಥಳಿ ನಿರ್ಮಿಸುವ ಕುರಿತು ಸ್ಥಳ ಅಂತಿಮಗೊಳಿಸಲಾಗಿದೆ.
ಇದೆ ಜುಲೈ 7 ರಂದು ನಾಡಪ್ರಭು ಕೆಂಪೇಗೌಡರ 515ನೇ ಜಯಂತಿ ಕಾರ್ಯಕ್ರಮದಲ್ಲಿ ಪುತ್ಥಳಿ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಗುವು ಇದು ಎಂದು ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ ಸಮಿತಿ ಅಧ್ಯಕ್ಷ ಟಿ.ವಿ. ಲಕ್ಷ್ಮಿನಾರಾಯಣ ಹೇಳಿದರು.
ನಗರದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ತಾಲ್ಲೂಕು ಒಕ್ಕಲಿಗರಸಂಘದಿಂದ ಪುತ್ಥಳಿ ನಿರ್ಮಾಣಕ್ಕೆ ಸ್ಥಳಾವಕಾಶ
ನೀಡಲಾಗಿದೆ. ಪುತ್ಥಳಿ ನಿರ್ಮಾಣ ಮುಂದಿನ ಕೆಂಪೇಗೌಡ ಜಯಂತಿ ವೇಳೆಗೆ ಪೂರ್ಣಗೊಳಿಸ ಲಾಗುವುದು. ಕೆಂಪೇಗೌಡ ಜಯಂತಿ ಆಚರಣೆ ಸಮಿತಿ ವತಿಯಿಂದ ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ ಅದ್ದೂರಿಯಾಗಿ ಆಚರಿಸಲಾಗುತ್ತಿದೆ ಎಂದರು.
ಬೆಳಿಗ್ಗೆ 9ಕ್ಕೆ ಬೆಳ್ಳಿರಥದಲ್ಲಿ ಕೆಂಪೇಗೌಡರ ಭಾವಚಿತ್ರದ ಮೆರವಣಿಗೆ ವಿವಿಧ ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ. 11ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ. ಕೆಂಗೇರಿ ಶಾಖಾ ಮಠದ ಚಂದ್ರಶೇಖರಸ್ವಾಮೀಜಿ ಸಾನಿದ್ಯ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ, 2023-24ನೇ ಸಾಲಿನ ಎಸ್.ಎಸ್.ಎಲ್.ಎಸ್ ಹಾಗೂ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ90ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ ಎಂದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಹಾಗೂ ಒಕ್ಕಲಿಗರ ಸಂಘದ ನಿರ್ದೇಶಕ ಬಿ.ಮುನೇಗೌಡ ಮಾತನಾಡಿ, ರಾಜ್ಯ ಒಕ್ಕಲಿಗರ ಸಂಘದಲ್ಲಿ ಸುಮಾರು 25 ಸಾವಿರ ಜನ ದೊಡ್ಡಬಳ್ಳಾಪುರ ತಾಲ್ಲೂಕಿನಿಂದ ಸದಸ್ಯತ್ವ ಪಡೆದಿದ್ದಾರೆ. ಹಾಗಾಗಿ ರಾಜ್ಯ ಸಂಘದ ವತಿಯಿಂದ ಹೆಚ್ಚಿನ ಅನುಕೂಲ ತಾಲ್ಲೂಕಿಗೆ ಪಡೆಯಬ- ಹುದಾಗಿದೆ. ಈ ಕಾರ್ಯಕ್ರಮ ಇದು ಒಂದು ಸಮುದಾಯದ ಹಬ್ಬವಲ್ಲ. ಎಲ್ಲಾ ಸಮುದಾಯದವರು ಪಕ್ಷಾತೀತವಾಗಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊ ಳಿಸಬೇಕು ಎಂದು ಮನವಿ ಮಾಡಿದರು.
ಈ ಪತ್ರಿಕಾಗೋಷ್ಠಿಯಲ್ಲಿ ದೊಡ್ಡಬಳ್ಳಾಪುರ ಯೋಜನಾ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿ.ಚುಂಚೇಗೌಡ, ಮುಖಂಡರಾದ ಎ.ನರಸಿಂಹಯ್ಯ, ಸಿ.ಡಿ.ಸತ್ಯನಾರಾಯಣಗೌಡ, ಲಕ್ಷ್ಮೀಪತ- ಯ್ಯ, ಅಶ್ವತ್ಥನಾಯಾಯಣಗೌಡ, ಡಿ.ಸಿ. ಶಶಿಧರ್, ಎಚ್.ವಿಶ್ವಾಸ್ ಗೌಡ, ವೇಣು, ಮುನಿಪಾಪಯ್ಯ, ಶಾಂತಮ್ಮ ಇದ್ದರು.