ಪಂಜಾಬ್ ಕಿಂಗ್ಸ್ ಹಾಗೂ ಟೀಮ್ ಇಂಡಿಯಾದ ಯುವ ವಿಕೆಟ್ ಕೀಪರ್ ಜಿತೇಶ್ ಶರ್ಮಾ ಆಗಸ್ಟ್ 8 ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಶಲಾಕಾ ಮಕೇಶ್ವರ್ ಅವರೊಂದಿಗೆ ಎಂಗೇಜ್ಮೆಂಟ್ ಮಾಡಿರುವ ಫೋಟೋಗಳನ್ನು ಜಿತೇಶ್ ಶರ್ಮಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಜಿತೇಶ್ ಶರ್ಮಾ ಅವರು ಹಂಚಿಕೊಂಡಿರುವ ಪೋಟೋದಲ್ಲಿ ಯುವ ವಿಕೆಟ್ ಕೀಪರ್ ಗ್ರೇಶರ್ಟ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದರೆ, ಶಲಾಕಾ ಮಕೇಶ್ವರ್ ಅವರು ಸಾಂಪ್ರದಾಯಿಕ ಸೀರೆ ತೊಟ್ಟಿದ್ದು, ಇಬ್ಬರು ತಮ್ಮ ಕೈಗಳಲ್ಲಿ ಹೂಗುಚ್ಛಗಳನ್ನು ಹಿಡಿದುಕೊಂಡಿದ್ದರು. ಇಬ್ಬರೂ ಮಹಾರಾಷ್ಟ್ರದವರಿಗೂ ಹಿಂದೂ ಸಾಂಪ್ರದಾಯದಂತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಜಿತೇಶ್ ಶರ್ಮಾ ತಮ್ಮ ಇನ್ಸ್ಟಾಗ್ರಾಮ್ಗೆನಲ್ಲಿ ಹಂಚಿಕೊಂಡಿರುವ ಫೋಟೋಗಳಿಗೆ ಸುಂದರ ಶೀರ್ಷಿಕೆಯನ್ನು ನೀಡಿದ್ದಾರೆ. “ಈ ಹುಚ್ಚು ಪ್ರಪಂಚದಲ್ಲಿ 8,8,8 ಆಗಸ್ಟ್ 8, 2024 ರಂದು ನಾವು ಹೊಸ ಲೋಕಕ್ಕೆ ಶಾಶ್ವತವಾಗಿ ಹೆಜ್ಜೆ ಇಟ್ಟಿದ್ದೇವೆ,” ಎಂದು ಪೋಸ್ಟ್ ಹಾಕಿದ್ದಾರೆ.ಟೀಮ್ ಇಂಡಿಯಾದ ಯಂಗ್ ವಿಕೆಟ್ ಕೀಪರ್ ಜಿತೇಶ್ ಶರ್ಮಾರ ಭಾವಿ ಪತ್ನಿ ಶಲಾಕಾ ಮಕೇಶ್ವರ್ ಅವರು ಮೆಗೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಷನ್ ನಲ್ಲಿ ಬಿಇ ಪದವಿ ಪಡೆದು, ನಂತರ ವೈಸಿಸಿಇಯಲ್ಲಿ ವಿಎಲ್ಎಸ್ಐ ಡಿಸೈನ್ನಲ್ಲಿ ಎಂಟೆಕ್ ಪದವೀಧರೆ ಆಗಿದ್ದಾರೆ. ನಾಗ್ಪುರದ ಅಡ್ವೆಟ್ ಸಾಫ್ಟ್ವೇರ್ ಕಂಪನಿಯಲ್ಲಿ ಹಿರಿಯ ಟೆಸ್ಟ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ