ದೇವನಹಳ್ಳಿ: ದೇವನಹಳ್ಳಿ ಇತಿಹಾಸ ತಿಳಿಯ ಬೇಕಾದರೆ ಟೆಂಟ್ ಮಾಸ್ಟರ್ ಗುರು ಸಿದ್ದಯ್ಯ ಅವರ ಮನೆಯಲ್ಲಿ ಬೇಟಿ ಕೊಟ್ಟರೆ ಪರಿಪೂರ್ಣ ಇತಿಹಾಸ ದೊರೆಯುತ್ತದೆ ಎಂದು ಕೆಂಪೇಗೌಡ ಅಭಿವೃದ್ಧಿ ಸಮಿತಿ ರಾಜ್ಯಾಧ್ಯಕ್ಷ ಜೇಡರಹಳ್ಳಿ ಕೃಷ್ಣಪ್ಪ ತಿಳಿಸಿದರು.
ದೇವನಹಳ್ಳಿ ಪಟ್ಟಣದ ಕೋಡಿ ಮಂಚೇನಹಳ್ಳಿ ಬಿಟ್ಟಸಂದ್ರ ಗುರು ಸಿದ್ದಯ್ಯ ಅವರ ಮನೆಗೆ ಭೇಟಿ ನೀಡಿ ಮಾತನಾಡಿದ ಅವರು ಹಳೆಯ ಕಾಲದ ಇತಿಹಾಸವನ್ನು ಮುಂದಿಡಲು ಪೂರ್ವಿಕರು ತಮ್ಮದೇ ಆದ ಬರವಣಿಗೆಯಲ್ಲಿ ಇತಿಹಾಸವನ್ನು ಬರೆದಿದ್ದಾರೆ ಹಳ್ಳಿಗಾಡು ಸುತ್ತಿ ಇತಿಹಾಸವನ್ನು ಸಾಕಷ್ಟು ಪುರಾತನ ಶಾಸನಗಳನ್ನು ಪುಸ್ತಕದ ರೂಪದಲ್ಲಿ ಜನರಿಗೆ ಮನದಟ್ಟು ಮಾಡಿದ್ದಾರೆ.
ಸಾವಕನಹಳ್ಳಿ ಎಂಪಿಸಿಎಸ್ ಅಧ್ಯಕ್ಷ ಎಸ್ ಪಿ ಮುನಿರಾಜು ಮಾತನಾಡಿ, ದೇವನ ದೊಡ್ಡಿಯಿಂದ ದೇವನಹಳ್ಳಿ ಕೋಟೆ ಶ್ರೀ ವೇಣುಗೋಪಾಲ ಸ್ವಾಮಿ ಇತಿಹಾಸ ದೇವನಹಳ್ಳಿ ರತ್ನ ಗರ್ಭ ವಸುಂದರ ಎಂಬ ಕೃತಿ ರಚಿಸಿದ ಕೀರ್ತಿ ಅವರಿಗೆ ಸಲ್ಲಬೇಕು ನಾಡಪ್ರಭು ಕೆಂಪೇಗೌಡರ ಇತಿಹಾಸ ಸಾರುವ ಹಲವಾರು ವಿಷಯಗಳನ್ನು ಬಿಟ್ಟ ಸಂದ್ರ ಗುರು ಸಿದ್ದಯ್ಯ ಅವರ ಮನೆಯ ಗ್ರಂಥಾಲಯ ಪುಸ್ತಕಗಳಲ್ಲಿ ಅಕ್ಷರಗಳನ್ನು ಮುದ್ರಣ ರೂಪದಲ್ಲಿ ತಂದು ಜನರಿಗೆ ಇತಿಹಾಸ ತಿಳಿಸಿಕೊಟ್ಟಿದ್ದಾರೆ ಎಂದು ಅಭಿಪ್ರಾಯಭಟ್ಟರು.ಇದೇ ಸಂದರ್ಭದಲ್ಲಿ ಇತಿಹಾಸ ಸಂಶೋಧಕ ಬಿಟ್ಟ ಸಂದ್ರ ಗುರು ಸಿದ್ದಯ್ಯ, ಮತ್ತಿತರರು ಹಾಜರಿದ್ದರು.



