ಪರ್ತ್ ಟೆಸ್ಟ್ ಪಂದ್ಯದ ಫಲಿತಾಂಶ ಭಾರತದ ತಂಡದ ಮನಸ್ಥಿತಿಯನ್ನೇ ಬದಲಾಯಿಸಿಬಿಟ್ಟಿದೆ. ಕೇವಲ ಕೆಲವು ದಿನಗಳ ಹಿಂದಷ್ಟೇ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ 3-0 ಅಂತರದಿಂದ ಸರಣಿ ಸೋಲನುಭವಿಸಿದ್ದ ಟೀಂ ಇಂಡಿಯಾ ಇದೀಗ ಆಸ್ಚ್ರೇಲಿಯಾ ಪ್ರವಾಸದಲ್ಲಿ ಪ್ರಥಮ ಪಂದ್ಯ ಗೆಲ್ಲುವ ಮೂಲಕ ಆತ್ಮವಿಶ್ವಾಸದಿಂದ ಪುಟಿಯುತ್ತಿದೆ.
ಜೊತೆಗೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಂಕಪಟ್ಟಿಯಲ್ಲಿ ಭಾರತ ಮತ್ತೆ ಒಂದನೇ ಸ್ಥಾನಕ್ಕೇರಿದೆ ಮಾತ್ರವಲ್ಲದೆ ಐಸಿಸಿ ಟೆಸ್ಟ್ ರ್ಯಾಂಕಿಂಗ್ ನಲ್ಲಿ ಭಾರತದ ಆಟಗಾರರ ಸ್ಥಾನಮಾನಗಳೂ ಇದೀಗ ಬದಲಾಗಿವೆ. ಆರಂಭಿಕ ಬೌಲರ್ ಜಸ್ಪ್ರೀತ್ ಬುಮ್ರಾ ಬೌಲರ್ ಗಳ ಯಾದಿಯಲ್ಲಿ ಒಂದನೇ ಸ್ಥಾನಕ್ಕೇರಿದ್ದರೆ, ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಬ್ಯಾಟರ್ ಗಳ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿ ವಿರಾಜಮಾನರಾಗಿದ್ದಾರೆ.
ರಬಾಡ ಹಿಂದಿಕ್ಕಿದ ಬುಮ್ರಾ: ಭಾರತದ ವೇಗಿ ಜಸ್ಪ್ರಿತ್ ಬುಮ್ರಾ ಐಸಿಸಿ ಟೆಸ್ಟ್ ರ್ಯಾಂಕಿಂಗ್ನ ಬೌಲರ್ಗಳ ಪಟ್ಟಿಯಲ್ಲಿ ಕಗಿಸೊ ರಬಾಡ ಮತ್ತು ಜೋಶ್ ಹೇಝಲ್ವುಡ್ ಅವರನ್ನು ಹಿಂದಿಕ್ಕುವ ಮೂಲಕ ಮತ್ತೆ ನಂ.1 ಸ್ಥಾನಕ್ಕೇರಿದ್ದಾರೆ. ಪರ್ತ್ ನಲ್ಲಿ ನಡೆದ ಆಸ್ಪ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ ಲಿಟೀಮ್ ಇಂಡಿ ಯಾದ ಜಯದಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಹಿನ್ನೆಲೆಯಲ್ಲಿ ಬುಮ್ರಾ ಅವರ ರ್ಯಾಂಕಿಂಗ್ ನಲ್ಲಿ ಏರಿಕೆಯಾಗಿದೆ.