ನೊಯ್ಡಾ: ಸೈಬರ್ ಕ್ರಿಮಿನಲ್ ಗಳು ಡಿಜಿಟಲ್ ಅರೆಸ್ಟ್ ಸೋಗಿನಲ್ಲಿ ಮಹಿಳೆಯೊಬ್ಬರಿಗೆ 1.4 ಲಕ್ಷ ರೂಪಾಯಿ ವಂಚನೆ ಮಾಡಿರುವ ಘಟನೆ ನೊಯ್ಡಾದಲ್ಲಿ ನಡೆದಿದೆ.
5 ಗಂಟೆಗಳ ಕಾಲ ಮಹಿಳೆಯನ್ನು ಡಿಜಿಟಲ್ ಆರೆಸ್ಟ್ ನಲ್ಲಿಡಲಾಗಿತ್ತು. ಕಳೆದ ರಾತ್ರಿ ನೋಯ್ಡಾ ಸೆಕ್ಟರ್ 77 ರ ನಿವಾಸಿ ಸ್ಮೃತಿ ಸೆಮ್ವಾಲ್ ಎಂಬುವವರಿಗೆ ಡಿಸೆಂಬರ್ 8 ರಂದು ಪ್ರಿಯಾ ಶರ್ಮಾ ಎಂಬ ಮಹಿಳೆ ಕರೆ ಮಾಡಿ ಸೈಬರ್ ಕ್ರೈಂ ಬ್ರಾಂಚ್ನ ಅಧಿಕಾರಿ ಎಂದು ಹೇಳಿಕೊಂಡಿದ್ದಾರೆ.
ಆಕೆಯ ಆಧಾರ್ ಕಾರ್ಡ್ ಬಳಸಿ ಅಕ್ರಮ ಹಣ ವರ್ಗಾವಣೆ, ಮಾನವ ಕಳ್ಳಸಾಗಣೆ ಮತ್ತು ಮಾದಕ ದ್ರವ್ಯ ಸಾಗಣೆಯಂತಹ ಕಾನೂನುಬಾಹಿರ ಚಟುವಟಿಕೆಗಳನ್ನು ಮಾಡಲಾಗುತ್ತಿದೆ ಎಂದು ಕರೆ ಮಾಡಿದವರು ಹೇಳಿದರು. ಸ್ಮೃತಿ ಅವರನ್ನು ಉನ್ನತ ಅಧಿಕಾರಿಗಳ ಬಳಿ ಮಾತನಾಡುವಂತೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸ್ ಠಾಣೆ ಅಧಿಕಾರಿಗಳು ತಿಳಿಸಿದ್ದಾರೆ.
ಭಯದಿಂದ ಸಂತ್ರಸ್ತೆ ಎರಡು ಕಂತುಗಳಲ್ಲಿ 1.40 ಲಕ್ಷ ರೂ.ಗಳನ್ನು ಆರೋಪಿಗಳು ಹೇಳಿದ ಖಾತೆಗೆ ಕಳುಹಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಸುಮಾರು ಐದು ಗಂಟೆಗಳ ಕಾಲ ತನ್ನನ್ನು ‘ಡಿಜಿಟಲ್ ಬಂಧನ’ದಲ್ಲಿ ಇರಿಸಲಾಗಿತ್ತು ಮತ್ತು ನಂತರ ತಾನು ಸೈಬರ್ ವಂಚನೆಗೆ ಬಲಿಯಾಗಿದ್ದೇನೆ ಎಂದು ಅರಿವಾಯಿತು ಎಂದು ದೂರುದಾರರು ಹೇಳಿದ್ದಾರೆ.