ದಕ್ಷಿಣ ಕಾಶಿ ತಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ಜರುಗುತ್ತಿರುವ 13ನೇ ಕುಂಭಮೇಳಕ್ಕೆ ಇಂದು ವಿದ್ಯುಕ್ತ ಚಾಲನೆ ದೊರೆಯಿತು ಇಂದಿನಿಂದ ಮೂರು ದಿನ ಕುಂಭಮೇಳ ನೆಡಯಲಿದ್ದು ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನವನ್ನು ಸಾವಿರಾರು ಭಕ್ತರು ಮಾಡಲಿದ್ದಾರೆ ಅಗಸ್ತೆಶ್ವರ ದೇವಾಲಯ, ಗುಂಜಾನರಸಿಂಹಸ್ವಾಮಿ ದೇವಾಲಯ, ಭಿಕ್ಷೆಶ್ವರ ದೇವಸ್ಥಾನ ಸೇರಿದಂತೆ ಮೂರು ಕಡೆ ಪುಣ್ಯಸ್ನಾನಕ್ಕೆ ಅವಕಾಶ ಮಾಡಿಕೂಡಲಾಗಿದೆ ಹಾಗೂ ಮೂರು ವೇದಿಕೆಗಳಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನೆಡಯಲಿದ್ದು.
ಮೂರು ದಿನವು ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನೆಡಯಲಿದೆ. ಜನರ ಸುರಕ್ಷತೆಗಾಗಿ ನದಿಯ ಒಳಗೆ ಮರಗಳಿಂದ ತಡೆ ಬೇಲಿ ನಿರ್ಮಾಣ ಮಾಡಲಾಗಿದೆ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಅಗತ್ಯ ಮುನ್ನೆಚ್ಚರಿಕೆಯನ್ನು ಜಿಲ್ಲಾಡಳಿತ ವಹಿಸಿದ್ದು ನದಿ ಪಾತ್ರದ ಹಲವೆಡೆ ಮುಳುಗುತಜ್ಞರು,ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ನೂರಾರು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.