ದೇವನಹಳ್ಳಿ: ತಾಲೂಕಿನ ಕನ್ನಮಂಗಲ ಗ್ರಾಪಂ ವ್ಯಾಪ್ತಿಯ ಪೂಜನಹಳ್ಳಿ ಗ್ರಾಮದ ಅಂಗನವಾಡಿ ಜಾಗದ ಬಗ್ಗೆ ಬಿಸಿಬಿಸಿ ಚರ್ಚೆಗಳಾಗುತ್ತಲೇ ಇದೆ, ಜಾಗದ ಪರ ವಿರೋಧ ಪ್ರತಿಭಟನೆಗಳು ನಡೆಯುತ್ತಿರುವುದು ಶೋಚನೀಯ, ಅಂಗನವಾಡಿ ಕಟ್ಟಡದ ಜಾಗ ಖಾಸಗಿ ವ್ಯಕ್ತಿಗಳಿಗೆ ಮಾರಾಟವಾಗಿದೆ ಎಂದು ಗ್ರಾ.ಪಂ. ಸದಸ್ಯರೊಬ್ಬರು ಅಹೋರಾತ್ರಿ ದರಣಿ ಮಾಡಿದರು,
ಇದರ ವಿಚಾರವಾಗಿ ದಲಿತ ಸಂಘರ್ಷ ಸಮಿತಿ(ಭೀಮಶಕ್ತಿ) ಮುಖಂಡ ದೇವನಹಳ್ಳಿ ದಾಸರಬೀದಿ ಮುರಳಿ ಮಾತನಾಡಿ ದೊಡ್ಡಪ್ಪನಹಳ್ಳಿ ಗ್ರಾಮದ ಪಂ.ಸದಸ್ಯ ಸೋಮಶೇಖರ್ ಅಂಗನವಾಡಿ ವಿಚಾರವಾಗಿ ಸುಳ್ಳು ಸುದ್ದಿಯನ್ನು ಹಬ್ಬಿಸಿ ಸಾರ್ವಜನಿಕ ವಲಯದಲ್ಲಿ ವಿವಾದಗಳನ್ನು ಸೃಷ್ಟಿ ಮಾಡುತ್ತಿದ್ದಾರೆ ಅವರ ಸದಸ್ಯತ್ವವನ್ನು ವಜಾಗೊಳಿಸಬೇಕು ಎಂದು ಮುರಳಿ ಆಗ್ರಹಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಆವರಣದಲ್ಲಿ ದಲಿತ ಸಂಘರ್ಷ ಸಮಿತಿ (ಭೀಮಶಕ್ತಿ) ಸಂಘಟನೆಯ ಮುರಳಿ ನೇತೃತ್ವದಲ್ಲಿ ಗ್ರಾ.ಪಂಚಾಯ್ತಿ ವ್ಯಾಪ್ತಿಯ ಪೂಜನಹಳ್ಳಿ ಸೇರಿದಂತೆ ಹಲವು ಗ್ರಾಮಗಳ ಸಾರ್ವಜನಿಕರು ಆಗಮಿಸಿ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಟಿ.ಕೆ.ರಮೇಶ್ ಗೆ ಮನವಿ ಪತ್ರ ನೀಡಿದರು.
ಈ ಸಮಯದಲ್ಲಿ ಟಿ.ಕೆ. ರಮೇಶ್ ಮಾತನಾಡಿ ಅಂಗನವಾಡಿ ಸಂಬಂಧ ಯಾವುದೇ ಪತ್ರಗಳು ನಕಲಿ ಆಗಿದ್ದರೆ ಮೇಲಾಧಿಕಾರಿಗಳಿಂದ ತನಿಖೆ ನಡೆಯಲಿದೆ, ಸತ್ಯಾಸತ್ಯತೆ ಹೊರಬರಲಿದ್ದು, ಮೊದಲು ಅಂಗನವಾಡಿ ಜಾಗ ಖಾಸಗಿ ವ್ಯಕ್ತಿಗೆ ಸೇರಿದ್ದು ಎಂದರು, ನಂತರ ಅಂಗನವಾಡಿ ಸ್ವತ್ತು ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಿದ್ದಾರೆ ಎನ್ನುತ್ತಿದ್ದಾರೆ,
ಕಂದಾಯ ಕಟ್ಟುತ್ತಿರುವುದು ಗೋವಿಂದಪ್ಪನವರೇ ಇದರ ವಿಚಾರವಾಗಿ ನಮ್ಮ ಪರವಾಗಿ ನ್ಯಾಯಲಯದಲ್ಲಿ ಆದೇಶವಾಗಿದೆ ಎನ್ನುತ್ತಿದ್ದಾರೆ, ಕನ್ನಮಂಗಲ ಗ್ರಾಮ ಪಂಚಾಯತಿ ಅಂಗನವಾಡಿ ಕಟ್ಟಡದ ಮೂಲ ದಾಖಲೆಗಳನ್ನು ಪರಿಶೀಲಿಸಲು ವಿಶೇಷ ತಂಡ ರಚಿಸಿ ತನಿಖೆಯ ಮೂಲಕ ನಿಜಾಂಶ ತಿಳಿಯಲಾಗುವುದು ಎಂದರು.ದಲಿತ ಸಂಘರ್ಷ ಸಮಿತಿ ಭೀಮಶಕ್ತಿಯ ಮುರಳಿ, ನಾಗವೇಣಿ, ಗೋವಿಂದಪ್ಪ ಸೇರಿದಂತೆ ಅನೇಕ ಪದಾಧಿಕಾರಿಗಳು, ಪೂಜನಹಳ್ಳಿ ಗ್ರಾಮಸ್ಥರು ಹಾಗೂ ಹಲವು ಗ್ರಾಮಸ್ಥರು ಇದ್ದರು.