ನವದೆಹಲಿ: ದೆಹಲಿಯ ಕಸ್ತೂರ್ ಬಾ ನಗರ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್ತರವರ ಪರವಾಗಿ ಶನಿವಾರ ಮತ್ತು ಭಾನುವಾರ ಕರ್ನಾಟಕ ರಾಜ್ಯದ ಬೆಂಗಳೂರಿನ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಿಯಕಷ್ಣರವರು ಮತ್ತು ಯುವನಾಯಕ ಪ್ರದೀಪ್ ಕೃಷ್ಣಪ್ಪ ಪ್ರಚಾರ ನಡೆಸಿದರು.
ದೆಹಲಿಯಲ್ಲಿ ಚುನಾವಣಾ ಪ್ರಚಾರದ ವೇಳೆ ಶಾಸಕ ಪ್ರಿಯಕಷ್ಣ ಮಾತನಾಡಿ, ಫೆಬ್ರವರಿ 5ರಂದು ದೆಹಲಿ ವಿಧಾನಸಭಾ ಚುನಾವಣೆ ಒಂದೇ ಹಂತದಲ್ಲಿ ನಡೆಯಲಿದ್ದು, ಚುನಾವಣೆಯಲ್ಲಿ ಈ ಬಾರಿ ದೆಹಲಿಗೆ ಬದಲಾವಣೆ ಬೇಕಾಗಿದೆ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಅಭಿಷೇಕ್ ದತ್ತರವರು ಸ್ಪರ್ಧಿಸಿದ್ದು. ಅವರನ್ನೂ ಭಾರಿ ಅಂತರದಿಂದ ಗೆಲುವು ಸಾಧಿಸಲು ಅತ್ಯಮೂಲ್ಯವಾದ ಮತಗಳನ್ನು ನೀಡಿ ಎಂದು ಶಾಸಕ ಪ್ರಿಯಕಷ್ಣ ಮನವಿ ಮಾಡಿದರು.
ಈ ವೇಳೆ ಬೆಂಗಳೂರಿನ ವಿಜಯನಗರ ಮತ್ತು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರಗಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ವಾರ್ಡ್ ಅಧ್ಯಕ್ಷರು, ಕಾಂಗ್ರೆಸ್ ಪಕ್ಷದ ಅನೇಕ ಮುಖಂಡರು ಸ್ಥಳೀಯ ಮುಖಂಡರು, ಕಾರ್ಯಕರ್ತರೊಂದಿಗೆ ಕಳೆದೆರಡು ದಿನಗಳಿಂದ ದೆಹಲಿಯ ಕಸ್ತೂರ್ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಪ್ರಿಯಕಷ್ಣ ಮತ್ತು ಯುವನಾಯಕ ಪ್ರದೀಪ್ ಕೃಷ್ಣಪ್ಪರವರ ಸಾರಥ್ಯದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಭಿಷೇಕ್ ದತ್ತರವರ ಪರವಾಗಿ ಬಹಳ ಬಿರುಸಿನಿಂದ ಪ್ರಚಾರ ನಡೆಸುತ್ತಿದ್ದಾರೆ.