ಬಾಗಲಕೋಟೆ: ನಿಧಿಯಾಸೆಗಾಗಿ ಸೊಸೆಯನ್ನೇ ಬಲಿ ಕೊಡಲು ಅತ್ತೆ ಮಾವ ಮುಂದಾಗಿದ್ದ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಯಂಡಿಗೇರಿಯಲ್ಲಿ ನಡೆದಿದೆ.
ಮುತ್ತಕ್ಕ ಪೂಜಾರ ಎಂಬಾಕೆಯನ್ನು ಜೀವಂತ ಸಮಾಧಿ ಮಾಡಲು ಆಖೆಯ ಅತ್ತೆ ಮಾವ ನಾದಿನಿ ಮುಂದಾಗಿದ್ದು, ಇದಕ್ಕಾಗಿ ತೋಟದಲ್ಲಿ 5 ಅಡಿ ಅಗಲ, 5 ಅಡಿ ಆಳದ ಗುಂಡಿ ತೆಗೆದಿದ್ದರು ಎನ್ನಲಾಗಿದೆ.ಸುದ್ದಿ ತಿಳಿದ ಸಂಬಂಧಿಕರು ಹಾಗೂ ಮುತ್ತಕ್ಕನ ಪೋಷಕರು ಯಂಡಿಗೇರಿಗೆ ಬರಲು ಸಿದ್ಧತೆ ನಡೆಸಿದ್ದಾರೆ ಎಂಬ ಸುದ್ದಿ ತಿಳಿದ ಮುತ್ತಕ್ಕನ ಅತ್ತೆ ಮಾವ ಗುಂಡಿಯನ್ನು ಮುಚ್ಚಿದ್ದರು ಎಂದು ಹೇಳಲಾಗಿದೆ.
ಮುತ್ತಕ್ಕನ ಅಣ್ಣ ನಾಗರೆಡ್ಡಿ ಎಂಬುವರು ಪೊಲೀಸರಿಗೆ ಈ ವಿಷಯ ತಿಳಿಸಿದ ಪರಿಣಾಮ ಪೊಲೀಸರು ಗುಂಡಿ ತೆಗೆದಿದ್ದರೂ ಎನ್ನಲಾದ ಸ್ಥಳಕ್ಕೆ ತೆರಳು ಪರಿಶೀಲನೆ ನಡೆಸಿದ್ದಾರೆ.