ಕಲಾತ್ಮಕ ಚಲನಚಿತ್ರಗಳಿಗೆ ತನ್ನದೇ ಆದ ತತ್ವ ಸಿದ್ಧಾಂತ, ಸಾಹಿತ್ಯ ಸಂಸ್ಕೃತಿ, ಶಿಕ್ಷಣ ಪರಂಪರೆ ಇನ್ನಿತರ ಆಯಾಮಗಳಿವೆ. ಇವು ವಾಣಿಜ್ಯ ಅಥವಾ ಕಮರ್ಷಿಯಲ್ ಸಿನಿಮಾಗಳಿಗಿಂತ ವಿಭಿನ್ನ…! ಮನುಷ್ಯನನ್ನು ಚಿಂತನೆಗೆ ಒಳಪಡಿಸುವ ಕಲಾತ್ಮಕ ಚಲನಚಿತ್ರಗಳ ಪ್ರದರ್ಶನಗಳು ನಾಲ್ಕು ದಿನ ಜರುಗಿತು.
ಕಳೆದ ಗುರುವಾರದಿಂದ ಬನಶಂಕರಿಯ ಸುಚಿತ್ರ ಫಿಲಂ ಸೊಸೈಟಿಯಲ್ಲಿ ಖ್ಯಾತ ಚಲನಚಿತ್ರ ನಿರ್ದೇಶಕ ಪಿ. ಶೇಷಾದ್ರಿವರ ಎಂಟು ಚಲನಚಿತ್ರಗಳು ಪ್ರದರ್ಶನಗೊಂಡವು.
ಮೊದಲ ದಿನ” ಮುನ್ನುಡಿ ” ಮತ್ತು” ಬೆಟ್ಟದ ಜೀವ” ಚಿತ್ರಗಳು ಪ್ರದರ್ಶನಗೊಂಡು, ನಂತರದ ದಿನಗಳಲ್ಲಿ ವಿಮುಕ್ತಿ, ಭಾರತ್ ಸ್ಟೋರ್, ಮೋಹನ ದಾಸ, ಮೂಕಜ್ಜಿ ಕನಸುಗಳು, ಡಿಸೆಂಬರ್ 1, ಹಾಗೂ ಮೇಟಿ ಚಲನಚಿತ್ರಗಳು ಪ್ರದರ್ಶನಗೊಂಡು ಸಿನಿ ಪ್ರೇಕ್ಷಕರ ಮನ ಸ್ಪಂದಿಸಿತು.
ಇದಲ್ಲದೇ ” ಸಿನಿಮಂಥನ “ದಲ್ಲಿ ನಾಲ್ಕು ಸಂವಾದ ಗೋಷ್ಠಿಗಳು ಜರುಗಿತು.
ಸಮಾರೋಪದ ದಿನ ಭಾನುವಾರ ಇವರ ನಾಲ್ಕು ಪುಸ್ತಕಗಳು ” ಅಂಕಿತ” ಪ್ರಕಾಶನದಿಂದ ಪ್ರಕಟವಾಗಿ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶ್ರೀಮತಿ ಶಾಲಿನಿ ರಜನೀಶ್ ಜೊತೆಗೆ ಗಿರೀಶ್ ಕಾಸರವಳ್ಳಿ, ಎಸ್ ವಿ ರಾಜೇಂದ್ರ ಸಿಂಗ್ ಬಾಬು, ಶ್ರೀ ನಾಗಭರಣ, ಬಸಂತ್ ಕುಮಾರ್ ಪಾಟೀಲ್, ಟಿಎನ್ ಸೀತಾರಾಮ್, ಇವರುಗಳಿಂದ ಲೋಕಾರ್ಪಣೆಗೊಂಡಿತು.
ಕಲಾವಿದೆಯರಾದ ತಾರಾ ಅನುರಾಧ, ಬಿ ಜಯಶ್ರೀ, ಲಕ್ಷ್ಮಿ ಗೋಪಾಲಸ್ವಾಮಿ, ಭಾವನ, ಪದ್ಮಕಲಾ, ಹಾಗೂ ಸುಚೇಂದ್ರ ಪ್ರಸಾದ್, ದತ್ತಣ್ಣ ಇನ್ನಿತರ ಚಿತ್ರರಂಗದ ಗಣ್ಯರು, ಬರಹಗಾರರು, ಸಂಘಟಕರು, ತಂತ್ರಜ್ಞರು ಈ ನಾಲ್ಕು ದಿನಗಳಲ್ಲಿ ಪಾಲ್ಗೊಂಡಿದ್ದರು.ಈ ಕಾರ್ಯಕ್ರಮವನ್ನು ಚಿತ್ರ ಸಮೂಹ, ಸುಚಿತ್ರ ಫಿಲಂ ಸೊಸೈಟಿ, ಅಂಕಿತ ಪ್ರಕಾಶನ ದ ಜೊತೆಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಕಾರವನ್ನು ನೀಡಿ ಆಯೋಜಿಸಿತ್ತು.