ಬೆಂಗಳೂರು: ಗೆನಿಗಲ್ಸ್ ಬಿಜಿಎಸ್ ಆಸ್ಪತ್ರೆ ಇತ್ತೀಚೆಗೆ ಕೈಗೆತ್ತಿಕೊಂಡ ಅತ್ಯಂತ ಸಂಕೀರ್ಣ ಪ್ರಕರಣವೊಂದರಲ್ಲಿ ನೈಜೀರಿಯಾದ 22 ವರ್ಷದ ವೈದ್ಯಕೀಯ ವಿದ್ಯಾರ್ಥಿನಿಗೆ ರ್ಯಾಡಿಕಲ್ ಸ್ಕ್ಯಾಲ್ಪ್ಪುಲೆಕ್ಟಮಿ ಪ್ರಕ್ರಿಯೆ, ಸಿಂಕ್ರೋನಸ್ ರೇಡಿಯೋಥೆರಪಿ ಹಾಗೂ ತೊಡೆ ಚರ್ಮ ಬಳಸಿಕೊಂಡು ರೀಕನ್ಸ್ಟ್ರಕ್ಷನ್ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ಬಲಭುಜದ ಕಾಂಡ್ರೊಸಾರ್ಕೋಮಾ ಕ್ಯಾನ್ಸರ್ಗೆ ಮೊದಲು ಚಿಕಿತ್ಸೆ ಪಡೆದಿದ್ದ ಈ ರೋಗಿಗೆ, ಅದೇ ಭಾಗದಲ್ಲಿ ಪುನಃ ಕ್ಯಾನ್ಸರ್ ಬಂದು ದೊಡ್ಡ ಸವಾಲನ್ನು ಹುಟ್ಟಿಸಿತು, ಸಂಪೂರ್ಣ ಭುಜವನ್ನು ವ್ಯಾಪಿಸಿ, ಮೂಳೆಗೆ ಹಾನಿಯಾಗಿರುವುದೂ ಕಂಡುಬಂತು. ಆದರೆ ನ್ಯೂರೋವ್ಯಾಸ್ಕ್ಯುಲಾರ್ ವ್ಯವಸ್ಥೆಗೆ ಯಾವುದೇ ಹಾನಿಯಾಗಿರಲಿಲ್ಲ. ಈ ಜಟಿಲ ಪ್ರಕರಣದಲ್ಲಿ ಅತ್ಯಾಧುನಿಕ ಆಂಕಾಲಜಿ, ರೇಡಿಯೇಷನ್ ಮತ್ತು ರೀಕನ್ಸಸ್ಟ್ರಕ್ಷನ್ ಶಸ್ತ್ರಚಿಕಿತ್ಸೆಯ ಸಂಯೋಜಿತ ಪ್ರಯತ್ನ ಅತ್ಯಗತ್ಯವಾಗಿತ್ತು.
ಡಾ. ಕಾರ್ತಿಕ್ ಕೆ. ಪ್ರಸಾದ್, ಲೀಡ್ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ತಜ್ಞ (ಲೀಡ್ ಸರ್ಜಿಕಲ್ ಆಂಕಾಲಜಿಸ್ಟ್), ಶಸ್ತ್ರಚಿಕಿತ್ಸೆಯ ನೇತೃತ್ವ ವಹಿಸಿದ್ದರು. “ರ್ಯಾಡಿಕಲ್ ಸ್ಕ್ಯಾಲ್ಪ್ಪುಲೆಕ್ಟಮಿ ಅಪರೂಪವಾಗಿ ನಡೆಯುವ ಪ್ರಕ್ರಿಯೆಯಾಗಿದ್ದು, ಈ ಪ್ರಕರಣದಲ್ಲಿ 1.5 ಕೆ.ಜಿ ತೂಕದ ಟ್ಯೂಮರ್ ಅನ್ನು ಸಂಪೂರ್ಣವಾಗಿ ತೆರವುಗೊಳಿಸಬೇಕಾಯಿತು. ಶಸ್ತ್ರಚಿಕಿತ್ಸೆಯ ವೇಳೆ ಕಡಿಮೆ ರಕ್ತಸ್ರಾವದೊಂದಿಗೆ ನಿಖರವಾದ ತಂತ್ರಜ್ಞಾನ ಮತ್ತು ಫ್ರೋಝನ್ ಸೆಕ್ಷನ್ ವಿಶ್ಲೇಷಣೆಯ ಮೂಲಕ ಟ್ಯೂಮರ್ ಅನ್ನು ಸಂಪೂರ್ಣ ತೆರವುಗೊಳಿಸಲಾಯಿತು” ಎಂದು ಅವರು ವಿವರಿಸಿದರು.
ಡಾ. ಆಶಿಷ್ ಶೆಟ್ಟಿ ಮತ್ತು ಡಾ. ಪೂರ್ಣಿಮ, ಅನಸ್ಥೇಷಿಯಾ ತಜ್ಞರು, ಪ್ಲಾಸ್ಟಿಕ್ ಸರ್ಜನ್ ಡಾ. ನವೀನ್ ಕುಮಾರ್ ಹೆಚ್.ಆರ್., ಡಾ. ಜತೀಂದರ್ ಅರೋರಾ, ಕ್ಲಸ್ಟರ್ ಸಿಒಒ, ಗ್ಲೆನಿಗಲ್ಸ್ ಬಿಜಿಎಸ್ ಆಸ್ಪತ್ರೆ, ಬೆಂಗಳೂರು ಗಳ ತಂಡ ಯಶಸ್ವಿ ಚಿಕಿತ್ಸೆಯಲ್ಲಿ ನೆರವೇರಿಸಿದರು.“ನನ್ನ ವಿಶಿಷ್ಟ ಅಗತ್ಯಗಳನ್ನು ಪೂರೈಸಿದ ಗ್ಲೆನಿಗಲ್ಸ್ ಬಿಜಿಎಸ್ ಆಸ್ಪತ್ರೆಗೆ ಅನಂತ ಧನ್ಯವಾದಗಳು. ವಿಶಿಷ್ಟ ಅಗತ್ಯತೆಗಳನ್ನು ಪೂರೈಸುವ ಅವರ ಪರಿಣತಿಯಿಂದಾಗಿ ನನ್ನ ಭವಿಷ್ಯದ ಕುರಿತು ಹೊಸ ಭರವಸೆ ಮೂಡಿಸಿದೆ” ರೋಗಿ ತಮ್ಮ ಕೃತಜ್ಞತೆಯನ್ನು ತಿಳಿಸಿದರು.