ಬೆಂಗಳೂರು: ಶ್ರೀ ರಾಘವೇಂದ್ರ ಸೇವಾ ಸಮಿತಿಯ ವತಿಯಿಂದ ನವೆಂಬರ್ ೧೧, ಸೋಮವಾರ ದಂದು ‘ಚಿಪ್ಪಗಿರಿಯ ತಪೋಮೂರ್ತಿ’ ಶ್ರೀ ವಿಜಯದಾಸರ ಆರಾಧನೆಯ ಪ್ರಯುಕ್ತ ಅಂದು ಬೆಳಗ್ಗೆ ಫಲಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ವಿಜಯ ವಿಠಲ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ಮ||ಶಾ||ಸಂ|| ಡಾ|| ವೆಂಕಟನರಸಿAಹಾಚಾರ್ಯರಿAದ “ಶ್ರೀ ವಿಜಯದಾಸರ ಮಹಿಮೆಗಳು”. ವಿಷಯವಾಗಿ ಧಾರ್ಮಿಕ ಪ್ರವಚನ, ಮಹಾಮಂಗಳಾರತಿ.
” ವಿಜಯರಾಯರ ಭಜಿಸೋ ” : ಸಂಜೆ ೬-೩೦ಕ್ಕೆ ಶ್ರೀಮತಿ ರೂಪಾ ಪ್ರಭಂಜನ ಮತ್ತು ಶ್ರೀಮತಿ ರಮ್ಯಾ ಸುಧೀರ್ ಇವರಿಂದ “ವಿಜಯರಾಯರ ಭಜಿಸೋ” ಎಂಬ ಶೀರ್ಷಿಕೆಯಲ್ಲಿ ಶ್ರೀ ವಿಜಯದಾಸರು ರಚಿಸಿದ ಕೃತಿಗಳನ್ನೂ ಮತ್ತು ಇತರ ಹರಿದಾಸರುಗಳು ವಿಜಯದಾಸರನ್ನು ಕುರಿತು ರಚಿಸಿರುವ ಕೃತಿಗಳನ್ನೂ ಹಾಡಲಿದ್ದಾರೆ. ಇವರ ಗಾಯನಕ್ಕೆ ಕೀ-ಬೋರ್ಡ್ ವಾದನದಲ್ಲಿ ಶ್ರೀ ಅಮಿತ್ ಶರ್ಮಾ ಹಾಗೂ ತಬಲಾ ವಾದನದಲ್ಲಿ ಶ್ರೀ ಶ್ರೀನಿವಾಸ್ ಕಾಖಂಡಕಿ ಸಾಥ್ ನೀಡಲಿದ್ದಾರೆಂದು ಶ್ರೀಮಠದ ಗೌರವ ಕಾರ್ಯದರ್ಶಿಗಳಾದ ಶ್ರೀ ನರಹರಿ ರಾವ್ ತಿಳಿಸಿದ್ದಾರೆ. ಕಾರ್ಯಕ್ರಮ ನಡೆಯುವ ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ೬ನೇ ಅಡ್ಡರಸ್ತೆ, ಈಜುಕೊಳದ ಬಡಾವಣೆ, ಸುಧೀಂದ್ರನಗರ, ಮಲ್ಲೇಶ್ವರಂ, ಬೆಂಗಳೂರು-೫೬೦೦೦೩.