ಬೆಂಗಳೂರು: ಪಿಜಿಸಿ ಸ್ವರ ಸಂಗಮ ವೃಂದದ ವತಿಯಿಂದ ಇಂದು ಸಂಜೆ ೬ಕ್ಕೆ ಜನಪದ ಜಾತ್ರೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಅಂಪಿಥಿಯೇರ್ಸ್ನಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಆಸಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪಿಜಿಸಿ ಸಂಸ್ಥೆಯ ಮುಖ್ಯ ಸಂಘಟಕರಾದ ನಾಗರಾಜ್ ಪಟೇಲ್ರವರು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಖ್ಯಾತ ಗಾಯಕರಾದ ಗುರುರಾಜ ಹೊಸಕೋಟೆ, ಖ್ಯಾತ ಗಾಯಕ ಸಾಹಿತಿ ಹಾಗೂ ಸಂಗೀತ ನಿರ್ದೇಶಕರಾದ ಶ್ರೀಧರ್ ವಿ. ಸಂಭ್ರಮವರು ಪಾಲ್ಗೊಳ್ಳುವರು ಎಂದು ಪಟೇಲ್ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.