ಬೆಂಗಳೂರು: ಪೀಣ್ಯದ ವಿಎಸ್ ಪಿವಿ ಪಿಯು ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮ ಚೌಡಯ್ಯ ಸ್ಮಾರಕ ಭವನದಲ್ಲಿ ಅದ್ದೂರಿಯಾಗಿ ನಡೆಯಿತು.
ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಮಂಡ್ಯದ ಹೆಚ್ಚುವರಿ ಜಿಲ್ಲಾಧಿಕಾರಿ ಹೆಚ್.ಕೆ.ನಾಗರಾಜ್, ವಿದ್ಯಾರ್ಥಿಗಳಿಗೆ ಬೇರೆ ಶಿಕ್ಷಣದ ಜತೆಗೆ ಆರೋಗ್ಯ ಶಿಕ್ಷಣವನ್ನು ಬೋಧಿಸುವುದು ಅಗತ್ಯವಾಗಿದೆ.
ಇದರಿಂದ ಸದೃಡ ಯುವ ಸಮುದಾಯವನ್ನು ಕಾಣಲು ಸಾಧ್ಯ, ಹೆಣ್ಣು ಮಕ್ಕಳು ಇರುವ ಮನೆ,ಕುಟುಂಬ ಯಾವಗಲೂ ಖುಷಿಯಾಗಿರುತ್ತದೆ ಎಂದು ಹೇಳಿದರು.
ಕಾಲೇಜಿನ ಮುಖ್ಯಸ್ಥ ಮಂಜೇಗೌಡ ಮಾತನಾಡಿ,ಮೈಸೂರು ಸೇರಿದಂತೆ ವಿಎಸ್ ಪಿಯು ಕಾಲೇಜುಗಳನ್ನು ವಿಸ್ತರಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಸಮಾರಂಭದಲ್ಲಿ ಕಾಲೇಜಿನ ಉಪಾಧ್ಯಕ್ಷರಾದ ಅರವಿಂದ್, ಮುಖ್ಯ ಕಾರ್ಯನಿರ್ವಾಹಕ ಡಾ.ಧನಂಜಯ್,ಪದವಿ ಕಾಲೇಜುಗಳ ಪ್ರಾಂಶುಪಾಲೆ ಪದ್ಮ ಶ್ರೀ,ಪೀಣ್ಯ ವಿಎಸ್ ಪಿಯು ಕಾಲೇಜಿನ ಪ್ರಾಂಶುಪಾಲ ಲಕ್ಷ್ಮೀ ಪ್ರಸನ್ನ ಹೆಚ್.ಆರ್.ಆಡಳಿತಾಧಿಕಾರಿ ಮೋಹನ್ ಮತ್ತಿತರರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಪಿಯುಸಿಯಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.ಕಾಲೇಜು ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಮನಸೂರೆಗೊಂಡಿತ್ತು.