ಹೈದರಾಬಾದ್: ಬುಧವಾರದ ರೋಚಕ ಪ್ರೊ ಕಬಡ್ಡಿ ಪಂದ್ಯದಲ್ಲಿ ತಮಿಳ್ ತಲೈವಾಸ್ 35-30 ಅಂತರದಿಂದ ಪುಣೇರಿ ಪಲ್ಟಾನ್ಗೆ ಸೋಲುಣಿಸಿ ಸತತ 2ನೇ ಗೆಲುವು ಸಾಧಿಸಿತು. ಇದು 3 ಪಂದ್ಯಗಳಲ್ಲಿ ಪುನೇರಿಗೆ ಎದುರಾದ ಮೊದಲ ಸೋಲು.ತಲೈವಾಸ್ ಪರ ರೈಡರ್ಗಳಾದ ನರೇಂದರ್ ಕಂಡೋಲ 9, ಸಚಿನ್ 8 ಅಂಕ ಗಳಿಸಿದರು.
ಪುನೇರಿ ತಂಡದ ರೈಡರ್ ಮೋಹಿತ್ ಗೋಯತ್ ಪ್ರದರ್ಶನ ಅಮೋಘ ಮಟ್ಟದಲ್ಲಿತ್ತು. ಅವರು 13 ಅಂಕ ತಂದಿತ್ತರು.ಖಾತೆ ತೆರೆದ ಮುಂಬಾ ದಿನದ ಇನ್ನೊಂದು ಜಿದ್ದಾಜಿದ್ದಿ ಪಂದ್ಯದಲ್ಲಿ ಯು ಮುಂಬಾ 33-27 ಅಂತರದಿಂದ ಗುಜರಾತ್ ಜೈಂಟ್ಸ್ಗೆ ಸೋಲುಣಿಸಿತು. ಇದರೊಂದಿಗೆ ಮುಂಬಾ ಪ್ರಸಕ್ತ ಸೀಸನ್ನಲ್ಲಿ ಗೆಲುವಿನ ಖಾತೆ ತೆರೆಯಿತು. ಹಾಗೆಯೇ ಗುಜರಾತ್ ಮೊದಲ ಸೋಲನುಭವಿಸಿತು.ಯು ಮುಂಬಾ ಪರ ಆಲ್ರೌಂಡರ್ ಆಮಿರ್ ಮೊಹಮ್ಮದ್ ಅತೀ ಹೆಚ್ಚು 10 ಅಂಕ ಗಳಿಸಿದರು.