ಬೆಂಗಳೂರು: ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.ಇಂದು ಮೈಸೂರು ಮುಡಾ ಹಗರಣ ಖಂಡಿಸಿ ಮೈಸೂರಿನಲ್ಲಿ ಪ್ರತಿಭಟನೆ ನಡೆಸಲು ಮುಖಂಡರು ಕಾರ್ಯಕರ್ತರೊಂದಿಗೆ ಮೈಸೂಗಿಗೆ ತೆರಳುತ್ತಿದ್ದ ವೇಳೆ ತಮ್ಮನ್ನು ತಡೆದ ಪೊಲೀಸರಕ್ರಮವನ್ನು ವಿರೋಧಿಸಿ ಮಾತನಾಡಿದ ಅವರು, ಈ ಸರ್ಕಾರ ಮಾಡುತ್ತಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಗುಡುಗಿದರು.ಮುಡಾದಿಂದ 4 ಸಾವಿರ ಕೋಟಿ ರೂ. ಅಧಿಕ ಪ್ರಮಾಣದ ಭ್ರಷ್ಟಾಚಾರವಾಗಿದೆ.
ನಾವು ಮುಡಾ ಎದುರಿಗೆ ಪ್ರತಿಭಟನೆ ಮಾಡಬೇಕಿತ್ತು. ಸಿಎಂ ಸಿದ್ಧರಾಮಯ್ಯರ ನೇತೃತ್ವದಲ್ಲಿ ಪೊಲೀಸರು ಇದನ್ನು ಹತ್ತಿಕ್ಕುವ ಕೆಲಸ ಮಾಡಿದ್ದಾರೆ. ನೀವು ಪ್ರಮಾಣಿಕರಾಗಿದರೆ, ಜಿಲ್ಲಾಧಿಕಾರಿಗಳು ವರದಿ ಕೊಟ್ಟ ಬಳಿಕ ಕ್ರಮ ಏಕೆ ಆಗಲಿಲ್ಲ?ಇದು ಸರಿಯಿದ್ದರೆ, ಸಿಬಿಐ ತನಿಖೆಗೆ ಕೊಡಿ. ಅದನ್ನು ಬಿಟ್ಟು ನಮ್ಮ ಹೋರಾಟ ಹತ್ತಿಕ್ಕುವ ಕೆಲಸ ಮಾಡಿದ್ದಾರೆ. ನಮ್ಮ ಕಾರ್ಯಕರ್ತರಿಗೆ ತಿಂಡಿಯನ್ನು ಒದ್ದು ಎಸೆದಿದ್ದಾರೆ. ಬೆಳಿಗ್ಗೆ 7 ಘಂಟೆಗೆ ಬಂಧಿಸುವ ಕೆಲಸ ಮಾಡಿದ್ದಾರೆ. ಈ ಸರ್ಕಾರದ ಪಾಪದ ಕೊಡ ತುಂಬಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿ.ನಾಗೇಂದ್ರರನ್ನು ಇಡಿ ಅಧಿಕಾರಿಗಳು ಆರೆಸ್ಟ್ ಮಾಡಿದ್ದಾರೆ. ವಾಲ್ಮೀಕಿ ನಗಮದ ಹಗರಣ, ದಲಿತರ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣವನ್ನು ದೋಚಿದ್ದಾರೆ.
ರಾಹುಲ್ಗಾಂಧಿಗೆ ಹಣ ಕಳುಹಿಸುತ್ತಿದ್ದಾರೆ. ಬಡವರಿಗೆ, ದಲಿತರಿಗೆ ಮೀಸಲಿಟ್ಟ ನಿವೇಶನವನ್ನು ನಿಮ್ಮ ಕುಟುಂಬ ಪಡೆದಿದೆ. ಕಾಂಗ್ರೆಸ್ ಪುಡಾರಿಗಳಿಗೆ ಹಂಚಿಕೆ ಮಾಡಲಾಗಿದೆ. ರಾಜೀನಾಮೆ ಕೊಡಿ ನಿಮ್ಮ ಸಿಎಂ ಸ್ಥಾನಕ್ಕೆ ಎಂದು ಒತ್ತಾಯಿಸಿದ್ದಾರೆ.ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುವ ಮುನ್ನಾ ಪ್ರಕರಣವನ್ನು ಸಿಬಿಐಗೆ ಕೊಡಿ ಎಂದು ಆಗ್ರಹಪಡಿಸಿದ್ದಾರೆ.