ಬೆಂಗಳೂರು: ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯ ಬೆಂಗಳೂರು ಹೊಸೂರ್ ರಸ್ತೆಯಲ್ಲಿ ಬಸ್ ಮೋಟರ್ ಬೈಕ್ ಸವಾರನಿಗೆ ಡಿಕ್ಕಿ ಹೊಡೆದ ಪರಿಣಾಮ ಶಕ್ತಿ(40) ವ್ಯಕ್ತಿ ಮೃತಪಟ್ಟಿರುತ್ತಾನೆ.
ಮತ್ತೊಂದು ಪ್ರಕರಣದಲ್ಲಿ ಆನೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಟ್ರ್ಯಾಕ್ಟರ್ ಮೋಟರ್ ಸೈಕಲ್ಗೆ ಡಿಕ್ಕಿ ಹೊಡೆದ ಪರಿಣಾಮ ದೇವರಾಜ್ 30 ವರ್ಷ ವ್ಯಕ್ತಿ ಮೃತಪಟ್ಟಿರುತ್ತಾನೆ.ತಳಿ ರಸ್ತೆಯ ಬಸವೇಶ್ವರ ಸರ್ಕಲ್ ಬಲಿ ನಿನ್ನೆ ಈ ಘಟನೆ ಸಂಭವಿಸಿರುತ್ತದೆ. ಮೃತರು ಖಾಸಗಿ ಸೆಕ್ಯೂರಿಟಿ ಕಂಪನಿಯಲ್ಲಿ ಕೆಲಸ ನಿರ್ವಹಿಸಿ ಮನೆಗೆ ಹೋಗುವ ಸಮಯದಲ್ಲಿ ಈ ಘಟನೆ ಸಂಭವಿಸಿರುತ್ತದೆ.
ಕೊರಿಯರ್ ಕೆಲಸ ಮುಗಿಸಿಕೊಂಡು ರಾತ್ರಿ 10:00 ಸುಮಾರಿಗೆ ಸುಮ್ಮನಹಳ್ಳಿಯಿಂದ ಬನಶಂಕರಿ ಕಡೆಗೆ ಹೋಗುವ ಸಮಯದಲ್ಲಿ ಅತಿ ವೇಗವಾಗಿ ಬಂದ ಲಾರಿ ಮೋಟರ್ ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಸಂಜಯ್ ಸಿಂಗ್(24) ಎಂಬುವರು ಮೃತಪಟ್ಟಿರುತ್ತಾರೆಮೂಲತಹ ರಾಜಸ್ಥಾನ್ದವನಾಗಿದ್ದು ಉದ್ಯೋಗ ಹರಸಿಕೊಂಡು ಬೆಂಗಳೂರಿಗೆ ಬಂದು ಕೊರಿಯರ್ ಕೆಲಸ ನಿರ್ವಹಿಸುತ್ತಿದ್ದನು ಎಂದು ಜ್ಞಾನಭಾರತಿ ಸಂಚಾರಿ ಪೊಲೀಸ್ ಇನ್ಸ್ಪೆಕ್ಟರ್ ತಿಳಿಸಿರುತ್ತಾರೆ.
ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯ ಪಾಲನಹಳ್ಳಿ ಬಳಿ ನಿನ್ನೆ ರಾತ್ರಿ ಲಾರಿ ಮೋಟರ್ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಮೃತ್ಯುಂಜಯ ಪಾಂಡೆ 29 ವರ್ಷದ ವ್ಯಕ್ತಿ ಮೃತಪಟ್ಟಿರುತ್ತಾನೆ.ಮೃತನ ವಿಳಾಸ ಮತ್ತು ಕೆಲಸದ ಬಗ್ಗೆ ತಿಳಿದುಕೊಳ್ಳಬೇಕೆಂದು ಯಲಹಂಕ ಸಂಚಾರಿ ಪೊಲೀಸ್ ಇನ್ಸ್ಪೆಕ್ಟರ್ ತಿಳಿಸಿರುತ್ತಾರೆ.