ಗುಂಡ್ಲುಪೇಟೆ: ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಪೇಜಾವರ ಶ್ರೀ ಗಳು ವಿಶ್ವ ಹಿಂದೂ ಪರಿಷತ್ತಿನ ಸಂತರ ಸಮ್ಮೇಳನದಲ್ಲಿ ಭಾಗವಹಿಸಿ ನಮ್ಮನ್ನು ಗೌರವಿಸುವ ಸಂವಿಧಾನ ಬೇಕು ಎಂಬ ಹೇಳಿಕೆ ಯನ್ನು ಮಾಧ್ಯಮಗಳ ಮೂಲಕ ಹೇಳಿದ್ದಾರೆ. ಇವರ ಈ ಹೇಳಿಕೆ ಹಿಂದಿನ ತತ್ಪಾರ್ಯ ವನ್ನು ಅವಲೋಕನ ಮಾಡಿದಾಗ ದೇಶದ ಸಂವಿಧಾನದ ಬಗ್ಗೆ ಹಾಗೂ ಅದರ ಆಶಯಗಳ ಬಗ್ಗೆ ಅವರಿಗೆ ತಿರಸ್ಕಾರದ ಮನೋಭಾವ ಇದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ.
ಅಂದರೆ ಡಾ ಅಂಬೇಡ್ಕರ್ ರವರ ರಚನೆಯ ದೇಶದ ಸಂವಿಧಾನ ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಸಮಾನತೆ ಮತ್ತು ಸಮಾನ ಹಕ್ಕುಗಳನ್ನು ಪ್ರತಿ ಪಾದಿಸಿದರೆ ಪೇಜಾವರ ಮಠದ ಶ್ರೀ ಗಳು ಮನುಸ್ಮೃತಿ ಯ ಅಂದರೆ ಬ್ರಾಹ್ಮಣರ ಕಾನೂನು ಪುಸ್ತಕದಲ್ಲಿ ಇರುವ ವರ್ಣಾಶ್ರಮ ಪದ್ಧತಿಯಂತೆ ಎಲ್ಲ ಬಗೆಯ ಹಕ್ಕು ಅವಕಾಶಗಳನ್ನು ದೇಶದ ಮೂಲ ನಿವಾಸಿಗಳಿಗೆ ನಿರಾಕರಿಸಿ ಬ್ರಾಹ್ಮಣ ಜಾತಿಯ ಹಿತಾಸಕ್ತಿ ಪ್ರತಿಪಾದಿಸುವ ಒಂದು ವ್ಯವಸ್ಥಿತ ಹುನ್ನಾರವನ್ನು ಅವರು ನಡೆಸುತ್ತಿದ್ದಾರೆ ಎಂಬುದನ್ನು ಸೂಚಿಸುತ್ತದೆ.
ಈ ಹಿಂದಿನ ವಿಶ್ವೇಶ್ವರ ತೀರ್ಥ ಪೇಜಾವರ ಶ್ರೀ ಗಳು ಸಹ ಮಾಧ್ಯಮದ ಮೂಲಕ ಬ್ರಾಹ್ಮಣ ಧರ್ಮ ಬೇರೆ, ಹಿಂದೂ ಧರ್ಮ ಬೇರೆ ಎಂಬ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.ಹಾಗೇಯೇ ಇದೆ ಸ್ವಾಮೀಜಿ ಈ ಹಿಂದೆ ಬ್ರಾಹ್ಮಣರಿಗೆ ಮಾತ್ರ ಆರ್ಚಕ ಹುದ್ದೆಗಳು ಮೀಸಲಾಗಿರಬೇಕು ಎಂದು ಒತ್ತಾಯಿಸಿದರು.
ಮತ್ತೊಂದು ಕಡೆ ಬ್ರಾಹ್ಮಣ ಕನ್ನೆಯರು ಇತರ ಜಾತಿಯವರನ್ನ ಮದುವೆ ಆಗಬಾರದಂತೆ ತಡೆಯಲು ಮಾತೃ ಮಂಡಳಿ ರಚಿಸಲು ಸಲಹೆ ನೀಡಿದ್ದರು. ಇದು ಅಂತರ ಜಾತಿ ವಿವಾಹ ಗಳ ವಿರುದ್ಧ ಇದ್ದಾರೆ ಎಂಬುದು ಸ್ಪಷ್ಟ ಪಡಿಸಿದ್ದರು.
ಮತ್ತು ಜಾತಿ ಪದ್ದತಿ ಬಲ ಗೊಳಿಸುವ ಅವರ ನಡವಳಿಕೆ ಯನ್ನು ಹೊರಹಾಕಿದ್ದರು.ಇನ್ನೂ ಅವರ ಮಠದ ವಿಚಾರವನ್ನು ಗಮನಿಸಿದಾಗ ಅಲ್ಲಿ ಇಂದಿಗೂ ಪಂಕ್ತಿ ಭೇದ ಇರುವುದು ಸತ್ಯ ಸಂಗತಿ ಆಗಿದೆ. ಮತ್ತೆ ಇಷ್ಟೆಲ್ಲಾ ತಾರತಮ್ಯ ಭಾವನೆ ಇಟ್ಟುಕೊಂಡು ಇವರು ಯತಿಗಳು ಹೇಗಾದರೂ ಎಂಬುದು ಪ್ರಶ್ನೆ ಸಹಜವಾಗಿಯೇ ಏಳುತ್ತದೆ.?. ಹಾಗೂ ಜಾತಿ ಪದ್ದತಿಯ ಪ್ರತಿಪಾದಕರು ಸಮಾಜ ಸುಧಾರಕರು ಆಗಲೂ ಎಂದಿಗೂ ಸಾಧ್ಯವಿಲ್ಲದ ಮಾತು ಬೇರೆ.
ಜಾತೀಯತೆ, ಅಸ್ಪೃಶ್ಯತೆ, ಅಸಮಾನತೆ ಪ್ರತಿ ಪಾದಿಸುವ ಇವರು. ಸರ್ವರ ಸಮಾನತೆಯನ್ನು ಪ್ರತಿ ಪಾದಿಸುವ ದೇಶದ ಸಂವಿಧಾನ ವನ್ನ ಒಪ್ಪಲು ಹೇಗೆ ಸಾಧ್ಯವಿದೆ ಹೇಳಿ ? ಎಂಬುದು ಅಷ್ಟೇ ಸ್ಪಷ್ಟ. ಆದರೆ ಇದು ಇವರೊಬ್ಬರ ಅಭಿಪ್ರಾಯ ಅಲ್ಲ ಎಂಬುದು ಅಷ್ಟೇ ಸತ್ಯವಾದ ವಿಚಾರ. ಮನುವಾದ ವನ್ನು ಪ್ರತಿಪಾದಿಸುವ ಆರ್ ಎಸ್ ಎಸ್ ಸಂಘಟನೆ ಗೆ ಮುಂದಿನ ವರ್ಷ 100 ನೇ ವರ್ಷ ತುಂಬುತ್ತಿದೆ. ಆರ್ ಎಸ್ ಎಸ್ ಸಂಘಟನೆಯು ದೇಶದ ಸಂವಿಧಾನ ಜಾರಿಗೂ ಮುನ್ನವೇ ಅಪಸ್ವರ ಎತ್ತಿತ್ತು ಇಲ್ಲಿ ಗಮನಿಸ ಬೇಕಾದ ವಿಷಯ.
ಸಂವಿಧಾನ ಜಾರಿಗೆ ಬಂದು 75 ವರ್ಷ ತುಂಬಿರುವ ಈ ಹೊತ್ತಿನಲ್ಲಿ ಮತ್ತೆ ಅಪಸ್ವರ ಹೊರಹಾಕುತ್ತಿದ್ದಾರೆ . ಏಕೆಂದರೆ ಇಂದು ದೇಶದ ಜನರು ಸಂವಿಧಾನದ ಆಶಯಗಳನ್ನು ಆರ್ಥ ಮಾಡಿಕೊಳ್ಳಲು ಮುಂದಾಗುತ್ತಿದ್ದಾರೆ. ಮತ್ತೊಂದು ಕಡೆ ಬ್ರಾಹ್ಮಣರ ಕಾನೂನು ಪುಸ್ತಕ ಮನುಸ್ಮೃತಿಯ ಮುಖವಾಡ ಕಳಚುತ್ತಿರುವುದು ಸುಳ್ಳಲ್ಲ ಎಂಬುದು ಅಷ್ಟೇ ಸ್ಪಷ್ಟ. ದೇಶದ ಮೂಲ ನಿವಾಸಿಗಳಿಗೆ ವಿದ್ಯೆ, ಅಧಿಕಾರ ಹಾಗೂ ಸಂಪತ್ತಿನ ಒಡೆತನದ ಹಕ್ಕನ್ನು ಸಂವಿಧಾನ ನಮಗೆ ನೀಡಿದ್ದರೆ, ದೇಶದ ಮೂಲ ನಿವಾಸಿ ಹಿಂದುಳಿದ ವರ್ಗ, ಎಸ್ಸಿ/ಎಸ್ಟಿ, ಹಾಗೂ ಧಾರ್ಮಿಕ ಅಲ್ಪ ಸಂಖ್ಯಾತರಿಗೆ ಸಾವಿರಾರು ವರ್ಷಗಳಿಂದ ಈ ಎಲ್ಲ ಹಕ್ಕು ಅವಕಾಶಗಳಿಂದ ದೂರ ಇಟ್ಟು ಮನುಸ್ಮೃತಿ ಮೂಲಕ ವಂಚಿಸಿ ನಿಷ್ಕೃಷ್ಟ ಬದುಕಿಗೆ ಕಾರಣ ಆಗಿತ್ತು. ಹಾಗೇಯೇ ದೇಶದ ಸಂಪೂರ್ಣ ಅಧಿಕಾರ ಮತ್ತು ಸಂಪತ್ತನ್ನು ಒಂದು ವರ್ಗವೇ ಅನುಭವಿಸುತ್ತ ಬಂದರು.
ಅಂತಹ ಸಂದರ್ಭದಲ್ಲಿ ಇರಲಿ ಇಂದಿಗೂ ಸ್ವಾತಂತ್ರ್ಯ ಬಂದು ಅಮೃತ ಮಹೋತ್ಸವ ಆಚರಣೆ ಮಾಡಿದ್ದೆವೆ ಆದರೂ ದೇವಸ್ಥಾನಗಳು ಯಾರ ಕೈ ವಶದಲ್ಲಿವೇ ಹೇಳಿ ? ಇಂದಿಗೂ ಬ್ರಾಹ್ಮಣ ವರ್ಗಗಳ ಹಿಡಿತದಲ್ಲಿಯೇ ಇವೆ? ಇರಲಿ ಅಲ್ಲಿನ ಭ್ರಷ್ಟಾಚಾರ ದ ಬಗ್ಗೆ ಎಲ್ಲದರೂ ಬಾಯಿ ಬಿಡುತ್ತಾರೆಯೇ ಇಲ್ಲ..?ರಾಜಕಾರಣಿಗಳ ರೀತಿಯಲ್ಲಿ ಅವರು ಆಸ್ತಿ ಘೋಷಣೆ ಮಾಡಲಿ ? ಅದು ಹಿಂದೂಗಳ ಸಂಪತ್ತು ಅಲ್ಲವೆ. ? ಆರ್ಚಕ ಹುದ್ದೆಗಳನ್ನು ಎಲ್ಲ ವರ್ಗದವರಿಗೂ ಮುಕ್ತ ಗೊಳಿಸಲಿ ?ಆ ಮೂಲಕ ಹಿಂದೂಗಳ ಮೇಲಿನ ಹಿತಾಸಕ್ತಿ ಎಷ್ಟಿದೆ ಎಂಬುದನ್ನು ಪ್ರದರ್ಶನ ಮಾಡಲಿ ನೋಡೋಣ.!
ದೇಶ ಪರಕೀಯ ವಶವಾಗಲೂ ಇಲ್ಲಿನ ಮೂಲ ನಿವಾಸಿಗಳಿಗೆ ಆಯುಧ ಹಿಡಿಯುವ ಅಧಿಕಾರವನ್ನು ಇವರ ಪೂಜ್ಯ ಗ್ರಂಥ ಮನುಸ್ಮೃತಿಯ ತಾರತಮ್ಯ ಕಾನೂನುಗಳು ಕಾರಣ ಅಲ್ಲವೇ.? ದೇಶ ಜಾತ್ಯಾತೀತ ತತ್ವವನ್ನು ಆಧರಿಸಿ ಸ್ವಾತಂತ್ರ್ಯ ಗೊಂಡಿದೆ. ಇಲ್ಲಿ ಸಂವಿಧಾನಕ್ಕೆ ಗೌರವ ನೀಡಬೇಕು ಅದರಂತೆಯೇ ಬಾಳಬೇಕು ಅಲ್ಲವೆ.?
ದೇಶದ ಜನರ ತೆರಿಗೆ ಹಣದಲ್ಲಿ ನಿರ್ಮಾಣ ಮಾಡಿದ ರಾಮ ಮಂದಿರ ಉದ್ಘಾಟನೆಯಲ್ಲಿ ಗೌರವಾನ್ವಿತ ರಾಷ್ಟ್ರಪತಿ ಅವರನ್ನೆ ದೂರ ಇಟ್ಟಿರಿ .ಇನ್ನೂ ಶ್ರೀ ಸಾಮಾನ್ಯರಿಗೆ ನಿಮ್ಮ ಮನುವಾದ ದಿಂದ ನ್ಯಾಯ ಮರಿಚಿಕೆ ಎಂಬುದು ಈಗ ದೇಶದ ಜನತೆಗೆ ತಿಳಿದಿದೆ. ಒಳ್ಳೆಯದನ್ನು ಬಯಸದವರನ್ನು ಗ್ರಾಮೀಣ ಪ್ರದೇಶಗಳಲ್ಲಿ ಪ್ರೇತಾತ್ಮಗಳು ಎಂದು ಕರೆಯುವುದುಂಟು. ನಿಮ್ಮ ಮಠದ ಅಂಗಳದಲ್ಲಿನ ನ್ಯೂನತೆಗಳನ್ನು ಸರಿ ಪಡಿಸಿ ಕೊಳ್ಳಿ ಎಂದು ಗೌರವದಿಂದಲೇ ಸಲಹೆ ನೀಡಲು ಬಯಸುತ್ತೇನೆ.