ಬೆಂಗಳೂರು: ಈ ಬಾರಿಯ ಬಜೆಟ್ ದೇಶಕ್ಕೆ ಮಾದರಿ. ನಮ್ಮ ಬಜೆಟ್ ಅನ್ನು ಬೇರೆಬೇರೆ ರಾಜ್ಯಗಳು ಗಮನಿಸುತ್ತಾರೆ. ಇದು ಉತ್ತಮವಾದ ಬಜೆಟ್. ಕರ್ನಾಟಕದ ಜನತೆಗೆ ಅನುಕೂಲ ಆಗಲಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಬಜೆಟ್ ಕುರಿತು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಟನಲ್ ಆಗೇ ಆಗುತ್ತೆ. ಹೊಸ ಮೆಟ್ರೋ ಏನೇ ಮಾಡಿದರೂ ಅದರ ಜೊತೆಗೆ ಎಲಿವೇಟೇಡ್ ಕಾರಿಡಾರ್ ಕೂಡ ನಾವು ಮಾಡುತ್ತೇವೆ. 50% ಕಾ ರ್ಪೋರೇಷನ್, 50% ಬಿಎಂಆರ್ಸಿಎಲ್ ಕೊಡುತ್ತದೆ. ನಾವು ಕಾರಿಡಾರ್ ಮಾಡುತ್ತೇವೆ ಎಂದರು.ನಾವು ಹೇಳಿದಂತೆ 300 ಕಿಮೀ ರಸ್ತೆ ನಿರ್ಮಾಣ ಮಡುತ್ತೇವೆ. ಕಾಲುವೆ ಪಕ್ಕದಲ್ಲಿ 50 ಅಡಿ ಬಿಟ್ಟು ರಸ್ತೆ ನಿರ್ಮಾಣ ಮಾಡುತ್ತೇವೆ. ಅದರ ಬದಲಾಗಿ ಅವರಿಗೆ ಟಿಡಿಆರ್ ಕೊಟ್ಟು ಅಲ್ಲಿ ರೋಡ್ ಮಾಡುತ್ತೇವೆ. ಹೀಗಾಗಿ 3000 ಕೋಟಿ ವೆಚ್ಚದಲ್ಲಿ 300 ಕಿ.ಮೀ ರಸ್ತೆ ನಿರ್ಮಾಣ ಆಗಲಿದೆ ಎಂದು ತಿಳಿಸಿದರು.
ಬಿಜೆಪಿ ಹಲಾಲ್ ಬಜೆಟ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಏನು ಬೇಕಾದರೂ ಮಾತಾಡಲಿ.
ಪಾಪ ಅವರು ಇನ್ನೇನು ಮಾಡುತ್ತಾರೆ? ಇನ್ನೇನು ಹೇಳೋಕೆ ಸಾಧ್ಯ?ಸತ್ಯನಾ ಮುಚ್ಚಿಡೋಕೆ ಆಗುತ್ತಾ? ಬಿಜೆಪಿಯವರು ಬಜೆಟ್ನ ಕಣ್ಣಲ್ಲಿ ಓದಿದ್ದಾರೆ, ಕಿವಿಯಲ್ಲಿ ಕೇಳಿಸಿಕೊಡಿದ್ದಾರೆ. ಬಾಯಲ್ಲಿ ಇನ್ನೇನು ಮಾತಾಡಬಹುದು. ಬಾಯಲ್ಲಿ ಸುಳ್ಳು ಹೇಳಬಹುದು ಅಲ್ವಾ, ಹಾಗಾಗಿ ಅದನ್ನ ಮಾಡುತ್ತಿದ್ದಾರೆ ಎಂದು ತಿರುಗೇಟು ಕೊಟ್ಟರು.ನೀರಾವರಿಗೆ ಕಳೆದ ಬಾರಿಗಿಂತ ಈ ಬಾರಿ 2,000 ಕೋಟಿ ಅನುದಾನ ಹೆಚ್ಚು ಕೊಟ್ಟಿದ್ದೇವೆ. ಮಧ್ಯದಲ್ಲಿ ಬೇರೆಬೇರೆ ಯೋಜನೆಗಳನ್ನು ಘೋಷಣೆ ಮಾಡುತ್ತೇವೆ. ಬೋರ್ಡ್ನಲ್ಲಿ ಅನೇಕ ತೀರ್ಮಾನಗಳನ್ನ ಮಾಡಿದ್ದೇವೆ. ಅದನ್ನು ಸಭೆಯಲ್ಲಿ ಹೇಳುತ್ತೇನೆ ಎಂದರು.
ಬೆಂಗಳೂರು ವಿವಿಗೆ ಮನಮೋಹನ್ ಸಿಂಗ್ ಹೆಸರು ಇಟ್ಟಿರುವ ವಿಚಾರದ ಕುರಿತು ಮಾತನಾಡಿ, ಅವರು ಯಾವ್ಯಾವುದೋ ಹೆಸರು ಇಡುತ್ತಾರೆ. ಮನಮೋಹನ್ ಸಿಂಗ್ ಹೆಸರು ಇಡಬಾರದ? ಇಂಟರ್ನ್ಯಾಷನಲ್ ಫ್ಲೈಓವರ್ ಮಾಡಿದ್ದು ಯಾರು? ಎಲೆಕ್ಟ್ರಾನಿಕ್ ಸಿಟಿಗೆ ಫ್ಲೈಓವರ್ ಮಾಡಿದ್ದು ಯಾರು?ನೆಲಮಂಗಲ ಫ್ಲೈಓವರ್ ಮಾಡಿದ್ದು ಯಾರು? ನರೇಗಾ ತಂದಿದ್ದು ಯಾರು? ಬಿಜೆಪಿಯವರು ಏನಾದರೂ ಮಾಡಿದ್ದಾರಾ ಎಂದು ಪ್ರಶ್ನಿಸಿದರು.