ಬೆಂಗಳೂರು: ಭಾರತ ಸರ್ಕಾರದ `ಬಾಲ್ಯ ವಿವಾಹ ಮುಕ್ತ ಭಾರತ’ ಅಭಿಯಾನಕ್ಕೆ ಅಪಾರವಾದ ಬೆಂಬಲವನ್ನು ವಿಸ್ತರಿಸುತ್ತಾ, ಜಸ್ಟ್ ರೈಟ್ಸ್ ಫಾರ್ ಚಿಲ್ಡ್ರನ್(JRC) ಒಕ್ಕೂಟದ ಮೂಲಕ ಆಯೋಜಿಸಲಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕರ್ನಾಟಕಾದ್ಯಂತದ ಸಾವಿರಾರು ಜನರು ರಸ್ತೆಗಳಲ್ಲಿ, ಶಾಲೆಗಳು, ಬೀದಿಗಳು ಮತ್ತು ಮಾರುಕಟ್ಟೆಯಲ್ಲಿ ಜಮೆಯಾದರು. ಒಂಬತ್ತು ಜಿಲ್ಲೆಗಳ 450 ಹಳ್ಳಿಗಳು ಬಾಲ್ಯ ವಿವಾಹ ವಿರುದ್ಧ ಜಾಗೃತಿ ಕಾರ್ಯಕ್ರಮಗಳು, ಮೇಣದಬತ್ತಿ ಮೆರವಣಿಗೆ ಮತ್ತು ಬೀದಿ ನಾಟಕಗಳಿಗೆ ಸಾಕ್ಷಿಯಾದರು.
ಒಂದು ಸಾಮಾಜಿಕ ಕಾರಣಕ್ಕಾಗಿ ಒಗ್ಗಟ್ಟಿನ ಅಭೂತಪೂರ್ವ ಪ್ರದರ್ಶನದಲ್ಲಿ ಪೊಲೀಸ್ ಸ್ಟೇಷನ್ಗಳು, ನ್ಯಾಯಾಲಯ ಕೊಠಡಿಗಳು, ಪಂಚಾಯ್ತಿ ಸದಸ್ಯರು, ಧರ್ಮ ಗುರುಗಳು, ಶಾಲಾ ಮಕ್ಕಳು, ಶಿಕ್ಷಕರು, ಮಕ್ಕಳು ಮತ್ತು ಬಾಲ್ಯ ವಿವಾಹದ ಸಂತ್ರಸ್ತೆಯರು ಬಾಲ್ಯ ವಿವಾಹವನ್ನು ನಿಲ್ಲಿಸಲು ಮತ್ತು ಅದರ ವಿರುದ್ಧ ದೂರು ನೀಡಲು ಪ್ರತಿಜ್ಞೆಗಳನ್ನು ಮಾಡಿದರು.
ದೇಶದ 400 ಜಿಲ್ಲೆಗಳಲ್ಲಿನ 250ಕ್ಕೂ ಅಧಿಕ ಓಉಔ ಪಾಲುದಾರರನ್ನು ಒಳಗೊಂಡ ಎಖಅ ಒಕ್ಕೂಟವು ಬಾಲ್ಯ ವಿವಾಹವನ್ನು ನಿರ್ಮೂಲನೆ ಮಾಡಲು ಕರ್ನಾಟಕದ ರಾಜ್ಯ ಸರ್ಕಾರ ಮತ್ತು ಅಲ್ಲಿನ ಒಂಬತ್ತು ಜಿಲ್ಲೆಗಳಲ್ಲಿನ ಸ್ಥಳೀಯ ಆಡಳಿತಾಧಿಕಾರಿಗಳೊಂದಿಗೆ ಕಾರ್ಯನಿರ್ವಹಿಸುತ್ತದೆ. ಎಖಅ ತನ್ನ ಮನವೊಲಿಸುವ ತಂತ್ರ ಮತ್ತು ಕಾನೂನು ಮಧ್ಯಸ್ಥಿಕೆಗಳ ಮೂಲಕ 2023-24ರಲ್ಲಿ ಭಾರತಾದ್ಯಂತ 2,50,000ಕ್ಕೂ ಅಧಿಕ ಬಾಲ್ಯ ವಿವಾಹಗಳನ್ನು ತಡೆಗಟ್ಟಿದೆ.
ಎಖಅ ಸಂಸ್ಥಾಪಕರಾದ ಭುವನ್ ರಿಭು ಮಾತನಾಡಿ, ಜಸ್ಟ್ ರೈಟ್ಸ್ ಫಾರ್ ಚಿಲ್ಡ್ರನ್ ಒಕ್ಕೂಟದ 250 ಕ್ಕೂ ಹೆಚ್ಚು ಓಉಔಗಳಲ್ಲಿ ನನ್ನ ಸಹೋ
ದ್ಯೋಗಿಗಳ ದಣಿವರಿಯದ ಪ್ರಯತ್ನಗಳ ಜೊತೆಗೆ ಲಕ್ಷಾಂತರ ಹುಡುಗಿಯರು ಮತ್ತು ತಾಯಂದಿರ ನೋವು ಮತ್ತು ಸಹಿಷ್ಣುತೆಯು ನಮಗೆ ಈ ಐತಿಹಾಸಿಕ ಕ್ಷಣವನ್ನು ತಂದಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ವಿಭಾಗದ ಕೇಂದ್ರ ಸಚಿವೆ, ಅನ್ನಪೂರ್ಣ ದೇವಿ ಅವರು ಬಾಲ್ಯ ವಿವಾಹ ಕೊನೆಗೊಳಿಸಲು ಪ್ರತಿಜ್ಞೆ ಮಾಡುವಂತೆ ತನ್ನ ನಾಗರೀಕರಲ್ಲಿ ಮನವಿ ಮಾಡುತ್ತಾ ನವದೆಹಲಿಯ ವಿಜ್ಞಾನ ಭವನದಲ್ಲಿ ನವೆಂಬರ್ 27ರಂದು ‘ಬಾಲ್ಯ ವಿವಾಹ ಮುಕ್ತ ಭಾರತ’ ಅಭಿಯಾನವನ್ನು ಆರಂಭಿಸಿದರು. ಇದೇ ಸಮಯದಲ್ಲಿ ಬಾಲ್ಯ ವಿವಾಹದ ದೂರುಗಳನ್ನು ದಾಖಲಿಸಲು ಒಂದು ರಾಷ್ಟ್ರೀಯ ಪೋರ್ಟಲ್ ಅನ್ನು ಬಿಡುಗಡೆ ಮಾಡಿದರು.