ದೇವನಹಳ್ಳಿ: ಭಾರತೀಯ ಜನತಾ ಪಾರ್ಟಿ(ಬಿಜೆಪಿ) ದೇವನಹಳ್ಳಿ ತಾಲೂಕು ಅಧ್ಯಕ್ಷರಾಗಿ ನೀಲೇರಿ ಎನ್.ಎಲ್. ಅಂಬರೀಷ್ಗೌಡರನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹೆಚ್.ಎಂ. ರವಿಕುಮಾರ್ ತಿಳಿಸಿದರು.ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ನಿರ್ದೇಶನದಂತೆ ಜಿಲ್ಲಾಧ್ಯಕ್ಷರಾದ ರಾಮಕೃಷ್ಣಪ್ಪ ನೇತೃತ್ವದಲ್ಲಿ ಸಭೆಯ ತೀರ್ಮಾನದಂತೆ ಎನ್.ಎಲ್. ಅಂಬರೀಶ್ಗೌಡರನ್ನು ದೇವನಹಳ್ಳಿ ತಾಲೂಕು ಬಿಜೆಪಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದ್ದು, ಅವರು ಹಿಂದೆಯು ಬಿಜೆಪಿಯಲ್ಲಿ ಸಕ್ರಿಯವಾಗಿ ಕೆಲಸ ಮಾಡಿಕೊಂಡಿದ್ದು ಜಿಲ್ಲಾ ಕಾರ್ಯದರ್ಶಿಯಾಗಿ, ಪಕ್ಷ ನಿಷ್ಟೆಯಿಂದ ನಡೆದು ಇನ್ನೂ ಉನ್ನತಮಟ್ಟದ ಅಧಿಕಾರ ಪಡೆಯುವಂತಾಗಲೆಂದು ಶುಭಕೋರು ತ್ತೇನೆ ಎಂದು ತಿಳಿಸಿದರು.
ತಾಲೂಕು ಬಿಜೆಪಿ ನೂತನ ಅಧ್ಯಕ್ಷ ಅಂಬರೀಷ್ ಗೌಡ ಮಾತನಾಡಿ ನನಗೆ ದೇವನಹಳ್ಳಿ ತಾಲೂಕು ಅಧ್ಯಕ್ಷನನ್ನಾಗಿ ನೇಮಕ ಮಾಡಿರುವ ರಾಜ್ಯದ ವರಿಷ್ಟರಿಗೆ ಜಿಲ್ಲಾ ಅಧ್ಯಕ್ಷ ರಾಮಕೃಷ್ಣಪ್ಪ ಹಾಗೂ ಪ್ರ.ಕಾರ್ಯದರ್ಶಿ ಹೆಚ್.ಎಂ. ರವಿಕುಮಾರ್ ರವರಿಗೆ ಹಾಗೂ ಎಲ್ಲಾ ಮುಖಂಡರುಗಳಿಗೆ ಕೃತಜ್ಞತೆಗಳನ್ನು ತಿಳಿಸುತ್ತೇನೆ, ಬಿಜೆಪಿಯಲ್ಲಿ ಕಾರ್ಯಕರ್ತನಾಗಿ, ಜಿಲ್ಲಾ ಕಾರ್ಯದರ್ಶಿಯಾಗಿ, ಕಾರ್ಮಿಕ ಪ್ರಕೋಸ್ಟಾದಲ್ಲಿ ಸಂಚಾಲಕನಾಗಿ ಕೆಲಸ ಮಾಡಿದ್ದು ನನ್ನ ಮೇಲೆ ಇಟ್ಟಿರುವ ನಂಬಿಕೆಗೆ ಯಾವುದೇ ಚ್ಯುತಿ ಬಾರದ ಹಾಗೆ ಕೆಲಸ ಮಾಡಲಾಗುವುದು, ಮುಂಬರುವ ತಾ.ಪಂ. ಜಿ.ಪಂ ಹಾಗೂ ಗ್ರಾ.ಪಂ. ಚುನಾವಣೆಗಳಲ್ಲಿ ನಮ್ಮ ಪಕ್ಷದ ಸದಸ್ಯರು ಗೆಲ್ಲಲು ಬೂತ್ ಮಟ್ಟದಿಂದ ಕಾರ್ಯಕರ್ತರನ್ನು ಹುರಿದುಂಬಿಸಿ ಸಕ್ರಿಯರಾಗಿ ಕೆಲಸ ಮಾಡುವಂತೆ ಪ್ರೇರಿಪಿಸಲಾಗುವುದು ಎಂದರು.
ದೇವನಹಳ್ಳಿ ತಾಲೂಕು ಬಿಜೆಪಿ ಅಧ್ಯಕ್ಷರಾಗಿ ನೇಮಕಗೊಂಡ ಅಂಬರೀಷ್ಗೌಡರನ್ನು ತಾಲೂಕಿನ ಮುಖಂಡರು ಅಭಿನಂದಿಸಿದರು.ಈ ಸಮಯದಲ್ಲಿ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ, ಬೂದಿಗೆರೆ ಪ್ರಭಾಕರ್, ವಿನಯಕುಮಾರ್, ಪ್ರ.ಕಾರ್ಯದರ್ಶಿ ಹೆಚ್.ಎಂ. ರವಿಕುಮಾರ್, ಕಾರ್ಮಿಕ ಪ್ರಕೋಷ್ಠಾ ಜಿಲ್ಲಾ ಸಂಚಾಲಕ ಸುರೇಶಾಚಾರ್, ದೇ ಸು ನಾಗರಾಜ್. ಕನಕರಾಜು, ಮುನೇಗೌಡ, ರಮೇಶ್ ಸೇರಿದಂತೆ ಅನೇಕ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.