ಮಲ್ಲೇಶ್ವರಂನ ಲೀಲಾದ್ರಿ ಅಕ್ಯಾಡೆಮಿಯಲ್ಲಿ ಬಿಟ್ರೆಂಡ್ಸ್ ಸಂಸ್ಥೆಯವರ ಸಂಪಾದಕತ್ವದಲ್ಲಿ ಭಾವಸಂಗಮ ಕವನ ಸಂಕಲನ ಲೋಕಾರ್ಪಣೆಗೊಂಡಿತು. ಇದೇ ಸಂದರ್ಭದಲ್ಲಿ ನಾಡು ನುಡಿಯ ಕುರಿತು ಕವಿಗೋಷ್ಠಿ ಮತ್ತು ಸಂಗೀತ ಸುಧೆ, ನೃತ್ಯ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ನಾಡಗೀತೆ ಗಾಯನದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಭಾವ ಸಂಗಮ ಕೃತಿಯನ್ನು ಮುಖ್ಯ ಅತಿಥಿಗಳಾದ ಶ್ರೀಮತಿ ಸ್ಮಿತಾ ಬರಗೂರು, ಶ್ರೀಮತಿ ಲತಾ ಕೆ.ಎಸ್.ಹೆಗಡೆ, ಹರೀಶ್ ಕುಮಾರ್, ರಾಘವೇಂದ್ರ ಇನಾಮದಾರ್ ಮತ್ತು ಚೆನ್ನಕೇಶವ ಲಾಳನಕಟ್ಟೆಯವರು ನೆರವೇರಿಸಿದರು. ಉದ್ಘಾಟನೆ ಮತ್ತು ಕವಿಗೋಷ್ಠಿ ಕಾರ್ಯಕ್ರಮದ ಅತಿಥಿಗಳಾಗಿ ಶ್ರೀಮತಿ ಪ್ರೇಮಾ ಕೆ.ಹೆಚ್, ಶ್ರೀಮತಿ ಚಂದ್ರಿಕಾ ಪುರಾಣಿಕ್, ಲಲಿತಾ ಬೆಳವಾಡಿ, ಜಯಶ್ರೀ ತಿಲವಳ್ಳಿ ಮತ್ತು ಶ್ರೀಯುತ ಎಮ್.ಬಿ.ಉಮೇಶ್ ಶೆಟ್ಟಿ ಇವರು ಸಾಂಗವಾಗಿ ನೆರವೇರಿಸಿದರು. ಸಂಗೀತ ಸುಧೆ ಕಾರ್ಯಕ್ರಮವನ್ನು ಶ್ರೀಯುತ ಗಿರೀಶ್ ಶಂಕರ್ ಕುಲಕರ್ಣಿ ಮತ್ತು ಅಜೀತ್ ಮಾಲೂರು ಅವರ ಫ್ರೆಂಡ್ಸ್ ಫಾರೆವರ್ ತಂಡ ನಡೆಸಿಕೊಟ್ಟಿತು.
ನಾಡು, ನುಡಿ ಸಂಸ್ಕೃತಿಯನ್ನು ಉಳಿಸುವಲ್ಲಿ ಭಾಷೆಯು ಬಹುಮುಖ್ಯವಾಗಿದ್ದು, ಅದನ್ನು ಬಳಸಿ, ಬೆಳೆಸುವುದರೊಂದಿಗೆ ಮುಂದಿನ ಪೀಳಿಗೆಗಾಗಿ ಉಳಿಸಬೇಕೆಂದು ಅತಿಥಿಗಳೆಲ್ಲರೂ ಹೇಳಿದರು. ಸಾಮಾಜಿಕ ಜಾಲತಾಣದ ಸ್ನೇಹಿ ಗುಂಪಿನ ಸದಸ್ಯರಿಂದ ಕವನ ವಾಚನ, ಶಕುಂತಲಾ ಆಚಾರ್ಯ ಅವರ ತಂಡದಿಂದ ನೃತ್ಯ ಕಾರ್ಯಕ್ರಮ, ಫ್ರೆಂಡ್ಸ್ ಫಾರೆವರ್ ತಂಡದಿಂದ ಸಂಗೀತ ಸುಧೆ ಕಾರ್ಯಕ್ರಮಕ್ಕೆ ಮೆರುಗು ನೀಡಿತು. ಶ್ರೀಮತಿ ಪ್ರೇಮಾ ಕೆ.ಹೆಚ್ ಮತ್ತು ಶ್ರೀಮತಿ ಸ್ಮಿತಾ ಬರಗೂರು ಅವರ ಪರಿಚಯವನ್ನು ಲತಾ ಕೆ.ಎಸ್.ಹೆಗಡೆಯವರು ಮಾಡಿಕೊಟ್ಟರು.
ಪ್ರಾರ್ಥನೆ ಅಜೀತ್ ಮಾಲೂರು, ನಿರೂಪಣೆ ಶ್ರೀಮತಿ ರಾಧಾ ಶ್ಯಾನುಭೋಗ್, ಸಂಘಟನೆ ನಾಗರಾಜ್ ಜಿ. ಕಾರ್ಯಕ್ರಮದ ಆಯೋಜನೆ ಬಿಟ್ರೆಂಡ್ಸ್ ಸಂಸ್ಥೆಯ ಶ್ರೀ ಹರೀಶ್ ಕುಮಾರ್ ಮತ್ತು ಸ್ನೇಹಿ ಗುಂಪಿನ ಸಹಕಾರದೊಂದಿಗೆ ಅಮೋಘವಾಗಿ ನೆರವೇರಿತು.