ದೇವನಹಳ್ಳಿ : ರೈತರನ್ನು ಕೀಳಾಗಿ ಕಾಣುವ ಯಾರೇ ಆಗಲಿ ಅವರಿಗೆ ಸರಿಯಾದ ಬುದ್ದಿ ಕಲಿಸಬೇಕು ರೈತರು ಬೆಳೆದ ಬೇಳೆಗಳನ್ನು ಮಾರಿ ಜೀವನ ಸಾಗಿಸುವ ಮಾಲ್ನ ಮಾಲೀಕರು ದೇಶದ, ರಾಜ್ಯದ ರೈತರ ಕ್ಷಮೆ ಯಾಚಿಸಬೇಕು ಎಂದು ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ವಿನೋದ್ಕುಮಾರ್ಗೌಡ ಕಿಡಿಕಾರಿದರು.
ಅವರು ತಮ್ಮ ತೋಟದಲ್ಲಿ ಕೆಲಸ ಮಾಡುತ್ತಾ ಇರುವ ಸಂದರ್ಭದಲ್ಲಿ ಮಾತನಾಡಿ ರೈತರು ಯಾರೇಆಗಲಿ ಅವಮನಿಸಿದಲ್ಲಿ ನಮಗೆ ಕೆಂಡದಂತಹ ಕೋಪ ಬರುತ್ತದೆ, ರೈತರಿಲ್ಲದಿದ್ದರೆ ಯಾವುದೇ ಮಾಲ್ಗಳಾಗಲಿ ನಡೆಸಲು ಸಾಧ್ಯವಿಲ್ಲ ಅವರು ಬೆಳೆದ ಬೆಳೆಗಳನ್ನು ಪಾಕೆಟ್ ಮಾಡಿ ಮಾರಾಟ ಮಾಡುವ ನೀವು ಪಂಚೆ ಟವೆಲ್ ಬಟ್ಟೆತೊಟ್ಟು ಬಂದ ರೈತನನ್ನು ಬಾಗಿಲಲ್ಲೆ ನಿಲ್ಲಿಸಿ ನಡೆದುಕೊಂಡ ರೀತಿ ಆ ಮಾಲ್ ಸಿಬ್ಬಂದಿಗೆ ಸರಿಯಾದ ಶಿಕ್ಷೆ ನೀಡಬೇಕು,
ಬೇರೆ ರಾಜ್ಯಗಳಿಂದ ಬರುವ ಕೆಲಸಗಾರರಿಂದ ಕನ್ನಡಿಗರಿಗೆ ಅದರಲ್ಲೂ ರೈತರಿಗೆ ಅವಮಾನವಾಗುತ್ತಿರುವುದು ಸಹಿಸಲು ಸಾಧ್ಯವಿಲ್ಲ ನಮ್ಮ ನಾಡಿನ
ಸಾಂಸ್ಕøತಿಕ ಉಡುಗೆ ಪಂಚೆ ಟವೆಲ್ ಅಂತಹ ಉಡುಗೆತೊಟ್ಟ ನಮ್ಮ ರೈತರು ದೇಶದ ಹೆಮ್ಮೆ ಎಂದರೆ ತಪ್ಪಾಗಲಾರದು ಇನ್ನಾದರೂ ಸುಸಂಸ್ಕøತರು ಅನ್ನದಾತ ರೈತರಿಗೆ ಗೌರವ ನೀಡಲಿ ಎಂದರು.
ಇದು ಮೊದಲಲ್ಲ ಮೆಟ್ರೋದಲ್ಲಿಯೂ ರೈತರಿಗೆ ಅವಮಾನವಾದಗಾ ನಾವು ಹೋರಾಟಗಳನ್ನು ಮಾಡಿದ್ದೆವು, ಕಾರು ಕೊಳ್ಳಲು ರೈತ ಚೀಲದಲ್ಲಿ ಹಣ ತೆಗೆದುಕೊಂಡು ಹೋದ ರೈತನಿಗೆ ಒಂದು ಕಂಪನಿ ಮಾಲೀಕ ಅವಮಾನ ಮಾಡಿದ್ದನ್ನು ಇಲ್ಲಿ ಸ್ಮರಿಸಬೇಕಾಗುತ್ತದೆ, ಆದ್ದರಿಂದ ಯಾರೇ ಆಗಲಿ ರೈತನ ಬಟ್ಟೆ ನೋಡಿ ಅಳೆಯಬೇಡಿ ಮುಂದೆ ಇಂತಹ ಘಟನೆ ಮರುಕಳಿಸಿದರೆ ಉಗ್ರ ಹೋಟಾಟ ಮಾಡಲಾಗುವುದು ಎಂದರು.
ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯಕಾರ್ಯದರ್ಶಿ ಕಡತನಮಲೆ ಬಿ.ಜಿ. ನಂಜುಂಡಪ್ಪ ಮಾತನಾಡಿ ರೈತರಿಗೆ ಗೌರವಕೊಡುವುದನ್ನು ಕಲಿತು ರೈತರಿಲ್ಲದಿದ್ದರೆ ಯಾವುದೇ ಕಂಪನಿಗಳು ನಡೆಯಲು ಸಾಧ್ಯವಿಲ್ಲ ಎಂದರು.ಈ ಸಮಯದಲ್ಲಿ ಸಣ್ಣೆ ಜಗದೀಶ್, ಕಡತನ ಮಲೆ ನಂಜುಂಡಪ್ಪ, ಪ್ರಕಾಶ್, ಸೊಣ್ಣಪ್ಪನಹಳ್ಳಿ ಮಂಜುನಾಥ್, ರಮೇಶ್, ರಾಜಣ್ಣ, ಮಲ್ಲೆಪ್ಪ, ದಾಸರಹಳ್ಳಿ ಚಂದ್ರು ಸೇರಿದಂತೆ ಇತರರು ಹಾಜರಿದ್ದರು.