ಭಾರತ ಮತ್ತು ಪಾಕಿಸ್ತಾನಗಳ ನಡುವೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ವಿಚಾರವಾಗಿ ಆವಿರ್ಭವಿಸಿದ್ದ ವಿವಾದಕ್ಕೆ ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC)) ತೆರೆ ಎಳೆದಿದೆ. ಐಸಿಸಿ ಚಾಂಪಿಯನ್ ಟ್ರೋಫಿಯೂ ಸೇರಿದಂತೆ 2027ರವರೆಗೂ ಭಾರತ ಮತ್ತು ಪಾಕಿಸ್ತಾನ ದೇಶಳಲ್ಲಿ ನಡೆಯುವ ಎಲ್ಲಾ ಪ್ರಮುಖ ಐಸಿಸಿ ಟೂರ್ನಿಗಳಿಗೂ ಹೈಬ್ರಿಡ್ ಮಾದರಿಯನ್ನು ಅನುಸರಿಸಲಾಗುವುದು ಎಂದು ಘೋಷಿಸಿದೆ.
ಫೆಬ್ರವರಿ 19ರಿಂದ ಮಾರ್ಚ್ 9ರವರೆಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯು ಪಾಕಿಸ್ತಾನದಲ್ಲಿ ನಡೆಯಲಿದೆ. ಆತಿಥೇಯ ಪಾಕಿಸ್ತಾನ, ಭಾರತ ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಅಫ್ಘಾನಿಸ್ತಾನ ತಂಡಗಳು ಭಾಗವಹಿಸಲಿವೆ. ಭಾರತಕ್ಕಾಗಿ ತಟಸ್ಥ ಸ್ಥಳವನ್ನು ಇನ್ನೂ ನಿಗದಿಗೊಳಿಸಿಲ್ಲ. ಕೆಲವೇ ದಿನಗಳಲ್ಲಿ ಟೂರ್ನಿಯ ಸಂಪೂರ್ಣ ವೇಳಾಪಟ್ಟಿಯನ್ನು ಬಿಡುಗಡೆ ಮಾಡುವುದಾಗಿ ಐಸಿಸಿಯು ಗುರುವಾರ ತಿಳಿಸಿದೆ. ಹೀಗಾಗಿ ತಟಸ್ಥ ಸ್ಥಳದ ಬಗ್ಗೆಯೂ ಅದೇ ವೇಳೆ ಘೋಷಣೆ ಮಾಡಬಹುದು ಎಂದು ಹೇಳಲಾಗಿದೆ.
ಈ ಎಲ್ಲಾ ಟೂರ್ನಿಗಳು ಹೈಬ್ರಿಡ್ ಮಾದರಿಯಲ್ಲಿ ನಡೆಯಲಿವೆ. ಇವನ್ನು ಹೊರತುಪಡಿಸಿ 2028ರಲ್ಲಿ ಪಾಕಿಸ್ತಾನದಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಆಸ್ಟ್ರೇಲಿಯಾದಲ್ಲಿ 2029 ಮತ್ತು 2031ರಲ್ಲಿ ಐಸಿಸಿ ಮಹಿಳಾ ಕ್ರೀಡಾಗಳು ನಡೆಯಲಿವೆ ಎಂದು ಐಸಿಸಿ ತಿಳಿಸಿದೆ.ಚಾಂಪಿಯನ್ಸ್ ಟ್ರೋಫಿಯಿಂದ ಶುರುವಾದ ವಿವಾದ: 2025ರ ಫೆಬ್ರವರಿಯಲ್ಲಿ ಪಾಕಿಸ್ತಾನದಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ವಿಚಾರವಾಗಿ ಭಾರತ ಮತ್ತು ಪಾಕಿಸ್ತಾನಗಳ ನಡುವೆ ತಿಕ್ಕಾಟ ಶುರುವಾಗಿತ್ತು. ಪಾಕಿಸ್ತಾನದಲ್ಲಿ ನಡೆಯಲಿರುವ ಟೂರ್ನಿಯ ಪಂದ್ಯಗಳನ್ನು ಈ ಹಿಂದೆ ನಿರ್ಧರಿಸಿರುವಂತೆ ಆಡುವುದಿಲ್ಲ.
ಭಾರತ ಆಡುವ ಎಲ್ಲಾ ಪಂದ್ಯಗಳನ್ನೂ ಹೈಬ್ರಿಡ್ ಮಾದರಿಯಲ್ಲಿ ಅಂದರೆ ದುಬೈ ಅಥವಾ ಶ್ರೀಲಂಕಾ ದಲ್ಲಿ ನಡೆಸುವಂತೆ ಬಿಸಿಸಿಐ ತನ್ನ ಬೇಡಿಕೆಯನ್ನು ಮುಂದಿಟ್ಟಿತ್ತು.ಕಡೇ ಪಕ್ಷ ಭಾರತ ತಂಡ ಉಪಾಂತ್ಯ ಮತ್ತು ಫೈನಲ್ ಪ್ರವೇಶಿಸಿದಲ್ಲಿ ಆಗಲಾದರೂ ಪಾಕಿಸ್ತಾನದಲ್ಲಿ ಆಡಲಿ ಎಂದು ಒತ್ತಾಯಿಸಿತು.