ನವದೆಹಲಿ: ಭಾರತ ಮತ್ತು ಪಾಕಿಸ್ತಾನ ಕೋಸ್ಟ್ ಗಾರ್ಡ್ ಜಂಟಿಯಾಗಿ ಉತ್ತರ ಅರೇಬಿಯನ್ ಸಮುದ್ರದಲ್ಲಿ ಮುಳುಗಿದ ಹಡಗಿನಿಂದ 12 ಭಾರತೀಯ ಮೀನುಗಾರರನ್ನು ರಕ್ಷಿಸಿ
ಮುಳುಗಿದ ಭಾರತೀಯ ಯಾಂತ್ರೀಕೃತ ನೌಕಾಯಾನ(ಎಂಎಸ್ವಿ) ಅಲ್ ಪಿರಾನ್ಪಿರ್ನ ಸಿಬ್ಬಂದಿಯನ್ನು ಉತ್ತರ ಅರೇಬಿಯನ್ ಸಮುದ್ರದಿಂದ ರಕ್ಷಿಸಲಾಗಿದೆ ಎಂದು ಭಾರತೀಯ ಕೋಸ್ಟ್ ಗಾರ್ಡ್(ಐಸಿಜಿ) ಗುರುವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಅಲ್ ಪಿರಾನ್ಪಿರ್ ಪೋರಬಂದರ್ನಿಂದ ಹೊರಟು ಇರಾನ್ನ ಬಂದರ್ ಅಬ್ಬಾಸ್ಗೆ ತೆರಳುತ್ತಿತ್ತು. ಸಮುದ್ರದ ಪ್ರಕ್ಷುಬ್ಧತೆ ಮತ್ತು ಪ್ರವಾಹದಿಂದಾಗಿ ಡಿಸೆಂಬರ್ 4 ರಂದು ಬೆಳಗ್ಗೆ ಈ ಹಡಗು ಮುಳುಗಿತು ಎಂದು ವರದಿಯಾಗಿದೆ.
“ಈ ಮಾನವೀಯ ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಭಾರತೀಯ ಕೋಸ್ಟ್ ಗಾರ್ಡ್ ಮತ್ತು ಪಾಕಿಸ್ತಾನ್ ಮಾರಿಟೈಮ್ ಸೆಕ್ಯುರಿಟಿ ಏಜೆನ್ಸಿ(MSA) ನಡೆಸಿವೆ. ಎರಡೂ ರಾಷ್ಟ್ರಗಳ ಸಾಗರ ರಕ್ಷಣಾ ಸಮನ್ವಯ ಕೇಂದ್ರಗಳು(MRCCs) ಕಾರ್ಯಾಚರಣೆಯ ಉದ್ದಕ್ಕೂ ನಿರಂತರ ಸಂವಹನವನ್ನು ನಿರ್ವಹಿಸುತ್ತವೆ” ICG ತಿಳಿಸಿದ್ದಾರೆ.
ತಮ್ಮ ಹಡಗನ್ನು ತೊರೆದು ಸಣ್ಣ ಡಿಂಗಿಯಲ್ಲಿ ಆಶ್ರಯ ಪಡೆದಿದ್ದ 12 ಸಿಬ್ಬಂದಿಯನ್ನು ಪಾಕಿಸ್ತಾನದ ಶೋಧ ಮತ್ತು ರಕ್ಷಣಾ ಪ್ರದೇಶದೊಳಗೆ, ದ್ವಾರಕಾದಿಂದ ಸುಮಾರು 270 ಕಿಮೀ ಪಶ್ಚಿಮದಲ್ಲಿ ಪತ್ತೆ ಮಾಡಲಾಯಿತು ಮತ್ತು ರಕ್ಷಿಸಲಾಯಿತು ಎಂದು ಅವರು ಹೇಳಿದ್ದಾರೆ.
ಐಸಿಜಿಯ ಮಾರಿಟೈಮ್ ರಕ್ಷಣಾ ಸಮನ್ವಯ ಕೇಂದ್ರ(ಎಂಆರ್ಸಿಸಿ) ಮುಂಬೈನಿಂದ ಅಪಾಯದ ಕರೆ ಸ್ವೀಕರಿಸಿದ ನಂತರ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು ಮತ್ತು ಗಾಂಧಿನಗರದಲ್ಲಿರುವ ಐಸಿಜಿ ಪ್ರಾದೇಶಿಕ ಪ್ರಧಾನ ಕಚೇರಿಗೆ(ನಾರ್ತ್ ವೆಸ್ಟ್) ತಕ್ಷಣ ಎಚ್ಚರಿಕೆ ನೀಡಲಾಯಿತು ಎಂದು ಅವರು ತಿಳಿಸಿದ್ದಾರೆ.