ನವದೆಹಲಿ: ಭಾರತ ತಂಡ ಯಾಂಗೂನ್ನ ತುವುನ್ನಾ ಕ್ರೀಡಾಂಗಣದಲ್ಲಿ ಮಂಗಳವಾರ ನಡೆಯಲಿರುವ ಮಹಿಳಾ ಸೌಹಾರ್ದ ಫುಟ್ಬಾಲ್ ಪಂದ್ಯದಲ್ಲಿ ಆತಿಥೇಯ ಮ್ಯಾನ್ಮಾರ್ ತಂಡವನ್ನು ಎದುರಿಸಲಿದೆ. ಭಾರತ ಈ ಪ್ರವಾಸದಲ್ಲಿ ಎರಡು ಪಂದ್ಯಗಳನ್ನು ಆಡಲಿದೆ.
ವಿಶ್ವ ಕ್ರಮಾಂಕದಲ್ಲಿ 67ನೇ ಸ್ಥಾನದಲ್ಲಿರುವ ಭಾರತ, ಈ ಹಿಂದೆ ಮ್ಯಾನ್ಮಾರ್ ವಿರುದ್ಧ ಆಡಿರುವ ಐದು ಪಂದ್ಯಗಳಲ್ಲಿ ಒಂದರಲ್ಲೂ ಜಯಗಳಿಸಿಲ್ಲ.
ನಾಲ್ಕು ಪಂದ್ಯಗಳನ್ನು ಸೋತು ಒಂದರಲ್ಲಿ ‘ಡ್ರಾ’ ಮಾಡಿಕೊಂಡಿದೆ. ಮ್ಯಾನ್ಮಾರ್ ವಿಶ್ವಕ್ರಮಾಂಕದಲ್ಲಿ 54ನೇ ಸ್ಥಾನದಲ್ಲಿದೆ.
ಐದು ವರ್ಷಗಳ ಹಿಂದೆ ಮಂದಾಲಯದಲ್ಲಿ ನಡೆದ ಎಎಫ್ಸಿ ಮಹಿಳಾ ಒಲಿಂಪಿಕ್ ಕ್ವಾಲಿಫೈಯರ್ಸ್ನಲ್ಲಿ 3-3 ಗೋಲುಗಳಿಂದ ಡ್ರಾ ಮಾಡಿಕೊಂಡಿತ್ತು. ಈಗಿನ ತಂಡದಲ್ಲೂ ಇರುವ ಸಂಧ್ಯಾ ರಂಗನಾಥನ್, ಸಂಜು ಮತ್ತು ನೊಂಗ್ಮೈಥೆಮ್ ರತ್ನಬಾಲಾ ದೇವಿ 2019ರಲ್ಲಿ ನಡೆದಿದ್ದ ಆ ಪಂದ್ಯದಲ್ಲಿ ಗೋಲು ಹೊಡೆದಿದ್ದರು. ಮಂಗಳವಾರದ ಪಂದ್ಯ ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 3.30ಕ್ಕೆ ಆರಂಭವಾಗಲಿದೆ.